Breaking News

ಮನೆಯಲ್ಲಿ ನೀರು ಹಿಡಿದಿಟ್ಟರೆ ಏನೆಲ್ಲಾ ಆಗುತ್ತೆ ಗೊತ್ತಾ..?

ಈಶಾನ್ಯದಿಕ್ಕಿನ ಜಾಗವನ್ನೇ ಲಕ್ಷ್ಯದಲ್ಲಿಟ್ಟುಕೊಳ್ಳಬೇಕು....

SHARE......LIKE......COMMENT......

ವಾಸ್ತು ಟಿಪ್ಸ್:

ನೀರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಈಶಾನ್ಯದಿಕ್ಕಿನ ಜಾಗವನ್ನೇ ಲಕ್ಷ್ಯದಲ್ಲಿಟ್ಟುಕೊಳ್ಳಬೇಕು. ನೀರಿನ ಸಂಬಂಧವಾದ ಎಲ್ಲ ಮೂಲಗಳು ಮನೆಯ ವಿಚಾರವಾಗಿ ಈಶಾನ್ಯ ಮೂಲೆಯಿಂದ ಹೊರಹೊಮ್ಮುವ ಅಂಶಗಳನ್ನು ಒಳಗೊಳ್ಳುವಂತಿರಬೇಕು. ಈ ಬಗ್ಗೆ ಗಮನವಿರಲಿ

ಮನೆಯಲ್ಲಿನ ನೀರಿನ ವಿಚಾರದಲ್ಲಿ ಹೆಚ್ಚು ಎಚ್ಚರವಿರಬೇಕು. ಈಗ ಬಾವಿಗಳನ್ನು ತೆಗೆಸುವ ವಿಚಾರದಲ್ಲಿ, ಬೋರ್‌ ಹೊಡೆಸುವ ಸಂದರ್ಭದಲ್ಲಿ, ಬೇಕಾದ ನೀರನ್ನು ಕಾರ್ಪೊರೇಷನ್‌, ನಗರಸಭೆ, ಮುನಸಿಪಾಲಿಟಿ ಅಥವಾ ನಗರ ಪಂಚಾಯಿತಿಗಳು ಬಿಟ್ಟಾಗ ಸಂಗ್ರಹಿಸುವ ರೀತಿಯಲ್ಲಿ ಯುಕ್ತವಾದ ವಿಧಿವಿಧಾನಗಳನ್ನು ಅನುಸರಿಸುವುದಿಲ್ಲ ಜನರು. ಹೇಗೋ ಸಂಗ್ರಹಿಸುತ್ತಾರೆ, ಹೇಗೋ ನೀರಿನ ಪೂರೈಕೆ ಮನೆಯೊಳಗಡೆಗೆ ನಡೆಯುತ್ತಿರುತ್ತದೆ. ಆದರೆ ಇದಕ್ಕೆ ತನ್ನದೇ ಆದ ಸಂವಿಧಾನ ಒಂದು ಇರುವುದರಿಂದ ಮನಸ್ಸಿಗೆ ಬಂದಂತೆ ನೀರಿನ ವ್ಯವಸ್ಥೆ ಮಾಡಿಕೊಳ್ಳಬಾರದು. ಈಗೀಗ ನೀರಿನ ಕೊರತೆಯಿಂದ ಪ್ರತಿ ನಗರ, ಪ್ರತಿ ಹಳ್ಳಿ ನರಳುತ್ತಿದೆ. ಎಲ್ಲೋ ಕೆಲವು ಊರುಗಳ ಜನ ಸುದೈವಿಗಳಾಗಿದ್ದಾರೆ.

ಮನೆಯಲ್ಲಿ ಬಾವಿಯನ್ನು ನೋಡುವುದಾದರೆ ಈಶಾನ್ಯ ಮೂಲೆಯಲ್ಲಿ ( ಉತ್ತರ ಹಾಗೂ ಪೂರ್ವ ದಿಕ್ಕುಗಳು ಸಮಾವೇಶವಾಗುವ ಸ್ಥಳ) ಬಾವಿಯನ್ನು ತೋಡಬೇಕು. ಹಾಗೆಯೇ ನೀರಿನ ಬೋರನ್ನು ತೋಡುವುದಾದರೂ ಈಶಾನ್ಯ ಮೂಲೆಯೇ ಪ್ರಾಶಸ್ತ್ಯದ ಜಾಗೆಯಾಗಿದೆ. ಒಳಾಂತರ್ಗತವಾಗಿ ಮನೆಯಲ್ಲಿ ನೀರಿನ ಸಂಪನ್ನು ನಿರ್ಮಾಣ ಮಾಡಿಕೊಳ್ಳುವ ದಿಕ್ಕು ಕೂಡ ಈಶಾನ್ಯ ಮೂಲೆಯಲ್ಲೇ ಇರಬೇಕು.

ಹೀಗೆ ನಿರ್ಮಿಸಿಕೊಳ್ಳುವ ಸಂಪು ಈಶಾನ್ಯ ಮೂಲೆಯಲ್ಲಿರಬೇಕು ಎಂಬುದು ಮುಖ್ಯವೇ ವಿನಾ ಕಾಂಪೌಂಡ್‌ ಗೋಡೆಗಳಿಗೆ ಹೊಂದಿರಬೇಕೋ, ಮೂಲೆಗೇ ನಿರ್ದಿಷ್ಟವಾಗಿ ಸಮಾವೇಶವಾಗಬೇಕೋ ಎಂಬುದೆಲ್ಲ ತಲೆಕೆಡಿಸಿಕೊಳ್ಳುವ ವಿಚಾರವಲ್ಲ. ಮನೆಯ ಸುಮಾರು ಒಟ್ಟೂ ವಿಸ್ತ್ರೀರ್ಣದ ಶೇಕಡ ಒಂದು ಭಾಗದಷ್ಟು ಉದ್ದಗಲಗಳು ಸಂಪಿಗೆ ಒದಗಿರಲಿ ಎಂಬುದನ್ನು ಗಮನಿಸಿ. ಸಂಪಿನ ಆಳ ಆರಡಿಯನ್ನು ಮೀರದಂತಿರಲಿ. ಇನ್ನಿಷ್ಟು ಆಳ ತುಸು ಅಪಾಯಕಾರಿ ಹಾಗೂ ಸ್ವತ್ಛಗೊಳಿಸುವ ಕಾರ್ಯಕ್ಕೆ ಸಹಕಾರಿಯಾಗುವುದಿಲ್ಲ. ಸಂಪ್‌ ಅನ್ನು ಆಗಾಗ ಸ್ವತ್ಛಗೊಳಿಸುವುದು ಆರೋಗ್ಯಕ್ಕೆ ಇದು ಮುಖ್ಯ.

ಮಳೆ ನೀರಿನ ಕೊಯ್ಲನ್ನು ಅಳವಡಿಸಿಕೊಳ್ಳುವುದಾದರೆ ಯುಕ್ತವಾಗಿ ತೆರೆಯಲ್ಪಟ್ಟ ಬಾವಿಯ ರೀತಿಯ ಕ್ರಮವನ್ನು ಅನುಸರಿಸುವುದೇ ಸೂಕ್ತ. ಈ ರೀತಿಯ ಬಾವಿ ಕೂಡ ಈಶಾನ್ಯ ಮೂಲೆಗೆ ಸ್ಥಾಯಿಗೊಳ್ಳಲಿ. ಇನ್ನು ಮನೆಯ ಲಕ್ಷಣಗಳಿಗೆ ಅಂದವನ್ನು ಹೆಚ್ಚಿಸುವ ಅಂಶವಾಗಿ ಕಿರುಗಾತ್ರದ ಸುಂದರ ಕೊಳವನ್ನೋ, ಚಿಮ್ಮುವ ಕಾರಂಜಿಯನ್ನೋ ನಿರ್ಮಿಸಿಕೊಳ್ಳುವ ಅಪೇಕ್ಷೆ ಹಲವರದ್ದಿರುತ್ತದೆ. ಈಜುಗೊಳವನ್ನು ಕೂಡ ನಿರ್ಮಿಸುವ ವಿಚಾರ ಇಟ್ಟುಕೊಂಡಿರುತ್ತಾರೆ.

ಈ ಏನೇ, ಇತರ, ನೀರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಈಶಾನ್ಯದಿಕ್ಕಿನ ಜಾಗವನ್ನೇ ಲಕ್ಷ್ಯದಲ್ಲಿಟ್ಟುಕೊಳ್ಳಬೇಕು. ನೀರಿನ ಸಂಬಂಧವಾದ ಎಲ್ಲ ಮೂಲಗಳು ಮನೆಯ ವಿಚಾರವಾಗಿ ಈಶಾನ್ಯ ಮೂಲೆಯಿಂದ ಹೊರಹೊಮ್ಮುವ ಅಂಶಗಳನ್ನು ಒಳಗೊಳ್ಳುವಂತಿರಬೇಕು. ಗಮನವಿರಲಿ.

ಹೇಗೆಂದರೆ, ಮನೆಯ ಮೇಲಿನ ಓವರ್‌ಹೆಡ್‌ ಟ್ಯಾಂಕ್‌ಗಳು ಮಾತ್ರ ನೈಋತ್ಯ ದಿಕ್ಕಿನಲ್ಲಿ ಇರಬೇಕು. ದಕ್ಷಿಣ ಹಾಗೂ ಪಶ್ಚಿಮ ದಿಕ್ಕುಗಳು ಒಗ್ಗೂಡುವ ಜಾಗದಲ್ಲಿರುವುದು ಸೂಕ್ತ. ಇದರಿಂದ ಕ್ಷೇಮವೂ ಹೌದು. ಹಾಗೆಯೇ ಮನೆಯ ಈಶಾನ್ಯ ಮೂಲೆಯ ಸಂಪಿನಿಂದ, ಪ್ರದಕ್ಷಿಣಾಕಾರದಲ್ಲಿ ಓವರ್‌ಹೆಡ್‌ ಟ್ಯಾಂಕಿಗೆ ನೀರು ಪೂರೈಕೆಗೊಳ್ಳುವಂತಿರಲಿ. ಈ ವಿಷಯವನ್ನು ಅವಶ್ಯವಾಗಿ ಗಮನಿಸಬೇಕು. ಉದಾಸೀನತೆ ಖಂಡಿತ ಬೇಡ. ಪ್ರಾಣಿಕ್‌ ಹೀಲಿಂಗ್‌ ಅನ್ನುವ ವಿಚಾರದ ಸಕಾರಾತ್ಮಕ ಬಲ ಈ ರೀತಿಯ ಪ್ರದಕ್ಷಿಣಾತ್ಮಕವಾದ ನೀರಿನ ಓಡಾಟದಿಂದಾಗಿ ದೊರಕುತ್ತಿರುತ್ತದೆ. ಅಪ್ರದಕ್ಷಿಣಾ ರೂಪದಲ್ಲಿ ನೀರು ಸರಬರಾಜಾಗುವ ವಿಚಾರ ಒಳ್ಳೆಯ ಫ‌ಲ ನೀಡಲಾರದು. ಆರೋಗ್ಯದ ವಿಚಾರದಲ್ಲಿ ಇದು ತುಂಬಾ ಮುಖ್ಯ ತಿಳಿದಿರಿ……