ನವದೆಹಲಿ:
100 ಕೋಟಿ ವ್ಯಾಕ್ಸಿನ್ ಹಾಕುವ ಮೂಲಕ ಭಾರತವು ವಿಶ್ವ ದಾಖಲೆ ನಿರ್ಮಾಣ ಮಾಡಿದೆ. ನಿನ್ನೆ ಸಂಜೆವರೆಗೆ ದೇಶಾದ್ಯಂತ 99 ಕೋಟಿ 70 ಲಕ್ಷ ಡೋಸ್ ಹಾಕಲಾಗಿದೆ. ಇವತ್ತು 100 ಕೋಟಿ ಡೋಸ್ ಆಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಂಭ್ರಮಿಸಲಾಗುತ್ತದೆ. ದೆಹಲಿಯ ಕೆಂಪುಕೋಟೆಯಲ್ಲಿ 1400 ಕೆಜಿ ತೂಗುವ ಖಾದಿ ತ್ರಿವರ್ಣ ಧ್ವಜ ಪ್ರದರ್ಶಿಸಲಾಗುತ್ತದೆ. ಈವರೆಗೆ ಶೇಕಡಾ 77ರಷ್ಟು ವಯಸ್ಕರಿಗೆ ಮೊದಲ ಡೋಸ್ ಹಾಗೂ ಶೇಕಡಾ 31ರಷ್ಟು ಜನರಿಗೆ ಪೂರ್ಣ ಪ್ರಮಾಣದ ವ್ಯಾಕ್ಸಿನ್ ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ.65ರಷ್ಟು ವ್ಯಾಕ್ಸಿನ್ ಹಾಕಲಾಗಿದೆ. 100 ಕೋಟಿ ವ್ಯಾಕ್ಸಿನ್ ದಾಖಲೆ ಐತಿಹಾಸಿಕವಾಗಿಡಲು ದೇಶಾದ್ಯಂತ ಐತಿಹಾಸಿಕ ಸ್ಥಳಗಳಲ್ಲಿ ತ್ರಿವರ್ಣ ದೀಪಾಲಂಕಾರ ಮಾಡಲಾಗಿದೆ. 8 ರಾಜ್ಯಗಳು 6 ಕೋಟಿ ಡೋಸ್ ಗಡಿ ದಾಟಿವೆ. ಉತ್ತರಪ್ರದೇಶದಲ್ಲಿ 12 ಕೋಟಿ, ಮಹಾರಾಷ್ಟ್ರದಲ್ಲಿ 9 ಕೋಟಿ, ಪಶ್ಚಿಮ ಬಂಗಾಳದಲ್ಲಿ 6.68 ಕೋಟಿ, ಗುಜರಾತ್ನಲ್ಲಿ 6.73 ಕೋಟಿ, ಮಧ್ಯಪ್ರದೇಶದಲ್ಲಿ 6.67 ಕೋಟಿ, ಬಿಹಾರ 6.30 ಕೋಟಿ ಮತ್ತು ಕರ್ನಾಟಕದಲ್ಲಿ 6.13 ಕೋಟಿ ಡೋಸ್ ವ್ಯಾಕ್ಸಿನ್ ಹಾಕಲಾಗಿದೆ. ಜನವರಿಯಲ್ಲಿ ವಾರಿಯರ್ಸ್ಗೆ ವ್ಯಾಕ್ಸಿನ್ ನೀಡಿದ್ದ ಭಾರತ ಮಾರ್ಚ್1ರಿಂದ ವ್ಯಾಕ್ಸಿನೇಷನ್ ಅಭಿಯಾನ ಆರಂಭಿಸಿತ್ತು. 7 ತಿಂಗಳಲ್ಲಿ 100 ಕೋಟಿ ವ್ಯಾಕ್ಸಿನ್ ನೀಡಿದೆ. 210 ದಿನಗಳಲ್ಲಿ ಈ ಸಾಧನೆ ಮಾಡುವ ಮೂಲ ವರ್ಲ್ಡ್ ರೆಕಾರ್ಡ್ ಮಾಡಿದೆ……..
100 ಕೋಟಿ ವ್ಯಾಕ್ಸಿನ್ ಹಾಕುವ ಮೂಲಕ ಭಾರತ ವಿಶ್ವ ದಾಖಲೆ ..!
ವ್ಯಾಕ್ಸಿನ್ ದಾಖಲೆಗೆ ದೇಶಾದ್ಯಂತ ಐತಿಹಾಸಿಕ ಸ್ಥಳಗಳಲ್ಲಿ ತ್ರಿವರ್ಣ ದೀಪಾಲಂಕಾರ ...
