ನವದೆಹಲಿ:
500 ವರ್ಷದ ಅಯೋಧ್ಯೆಯ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಜಾಗದ ವಿವಾದ ಬಗೆಹರಿಯಲು 2019ರವರೆಗೂ ಕಾಯಬೇಕು. ಇವತ್ತು ವಿಚಾರಣೆ ಆರಂಭಿಸಿದ ಸುಪ್ರೀಂಕೋರ್ಟ್ ಕೇವಲ ಎರಡೇ ವಾಕ್ಯದಲ್ಲಿ ವಿಚಾರಣೆ ಮುಗಿಸಿ ಪ್ರಕರಣವನ್ನು ಜನವರಿಗೆ ಮುಂದೂಡಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ಆರಂಭಿಸಿತು. ಆದರೆ ತ್ವರಿತ ವಿಚಾರಣೆಗೆ ನಿರಾಕರಿಸಿ ಜನವರಿಯಲ್ಲೇ ವಿಚಾರಣೆಯ ಸ್ವರೂಪ ಮತ್ತು ಹೊಸ ಪೀಠದ ರಚನೆ ಸಂಬಂಧ ತೀರ್ಮಾನ ಮಾಡೋದಾಗಿ ಹೇಳಿದೆ.
2010ರಲ್ಲಿ ಅಲಹಾಬಾದ್ ವಿಶೇಷ ಕೋರ್ಟ್ ವಿವಾದಿತ ಭೂಮಿಯನ್ನು ಮೂರು ಭಾಗ ಮಾಡಿ ಒಂದನ್ನು ಸುನ್ನಿ ವಕ್ಫ್ ಬೋರ್ಡ್, ಮತ್ತೊಂದು ತುಂಡನ್ನು ನಿರೋಮಿ ಆಕಾರ ಮತ್ತು ಮತ್ತೊಂದು ಭಾಗವನ್ನು ರಾಮ್ ಲಲ್ಲಾಗೆ ನೀಡಲು ಆದೇಶ ಕೊಟ್ಟಿತ್ತು. ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು……