ರಾಮನಗರ:
ದಿನದಿಂದ ದಿನಕ್ಕೆ ಉಪ ಚುನಾವಣೆ ಸಮರ ರಂಗೇರುತ್ತಿದೆ. ಬದ್ಧ ವೈರಿಗಳಂತಿದ್ದ ಸಂಸದ ಡಿ.ಕೆ.ಸುರೇಶ್ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಪರ ಪ್ರಚಾರ ನಡೆಸಿದ್ದಾರೆ.
ರಾತ್ರಿಯಾದರು ಸೊಸೆ ಪರ ದೊಡ್ಡಗೌಡ್ರು ಚುನಾವಣಾ ಪ್ರಚಾರ ನಡೆಸಿದ್ದು ವಿಶೇಷವಾಗಿತ್ತು. ರಾಮನಗರದ ರೈಲ್ವೆ ಸ್ಟೇಷನ್ ಸರ್ಕಲ್ನಲ್ಲಿ ಮುಸ್ಲಿಂ ಕಾರ್ಯಕರ್ತರ ಸಭೆ ಕರೆಯಲಾಗಿತ್ತು. ಮಾಜಿ ಪ್ರಧಾನಿ ದೇವೇಗೌಡರು ಮಾತನಾಡುವ ವೇಳೆ ಬೆರಳೆಣಿಯಷ್ಟು ಮಂದಿ ಇದ್ದು, ಖಾಲಿ ಕುರ್ಚಿಗಳ ಪ್ರದರ್ಶನ ಎದ್ದು ಕಾಣುತ್ತಿತ್ತು.ಈ ಸಂದರ್ಭದಲ್ಲಿ ಸಂಸದ ಡಿ.ಕೆ.ಸುರೇಶ್ ಭಾಷಣದಲ್ಲಿ ಹೊಸ ಬಾಂಬ್ ಸಿಡಿಸಿ, ಪ್ರತಿದಿನ ಬಿಜೆಪಿಗೆ ಸೇರುವಂತೆ ನಮ್ಮ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದರು. ಸಚಿವ ಡಿ.ಕೆ.ಶಿವಕುಮಾರ್ ಹಾಗೂ ನನ್ನನ್ನು ಸೆಳೆಯಲು ಬಿಜೆಪಿ ಶತ ಪ್ರಯತ್ನ ಮಾಡುತ್ತಲೇ ಇದೆ ಎಂದರು.
ವ್ಯಕ್ತಿಗಿಂತ ಇಲ್ಲಿ ಪಕ್ಷ ಮುಖ್ಯ. ಕಾಂಗ್ರೆಸ್ ಪಕ್ಷದ ಉಳುವಿಗಾಗಿ ಜಾತ್ಯಾತೀತ ಪಕ್ಷಗಳು ಒಂದಾಗಿದ್ದೇವೆ. 40 ವರ್ಷಗಳ ಬದ್ಧ ವೈರಿಗಳು ಒಂದಾಗುತ್ತೇವೆ ಎಂದು ನಾನು ಕನಸಲ್ಲೂ ಕೂಡ ಅಂದುಕೊಂಡಿರಲಿಲ್ಲ. ರಾಷ್ಟ್ರದ ಹಿತಕ್ಕಾಗಿ ಕೋಮುವಾದಿ ಬಿಜೆಪಿಯನ್ನ ಹೊರಗಿಡುವ ಉದ್ದೇಶದಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿಯಾಗಿದೆ ಎಂದರು…..