ವಾಸ್ತು :
ಮನೆಯಲ್ಲಿ ಸ್ವಚ್ಛತೆ ಕಾಪಾಡುವುದು ಬಹಳ ಮುಖ್ಯ. ಆ ಕಾರಣಕ್ಕಾಗಿ ಮನೆಯನ್ನು ಗುಡಿಸಿ, ಕಸವನ್ನು ಹೊರಗೆ ಹಾಕಬೇಕು. ವಾಸ್ತುವಿನಲ್ಲಿ ಪೊರಕೆಗೆ ಹೆಚ್ಚಿನ ಮಹತ್ವವಿದೆ. ಇದನ್ನು ಲಕ್ಷ್ಮೀಯ ಸಂಕೇತವೆಂದು ಪರಿಗಣಿಸಲಾಗಿದೆ. ವಾಸ್ತು ಪ್ರಕಾರ ಮನೆ ಗುಡಿಸುವುದಕ್ಕೆ ಸಮಯವನ್ನು ಹೇಳಲಾಗಿದೆ. ಯಾವ್ಯಾವುದೋ ಸಮಯದಲ್ಲಿ ಗುಡಿಸಿ ಕಸವನ್ನು ಹೊರ ಹಾಕುವುದರಿಂದ ಆರ್ಥಿಕ ಸಮಸ್ಯೆ ಎದುರಾಗುತ್ತದೆ ಎನ್ನಲಾಗಿದೆ.
ರಾತ್ರಿ ಸಮಯದಲ್ಲಿ ಗುಡಿಸಬಾರದು :
ವಾಸ್ತು ಪ್ರಕಾರ ಬೆಳಗ್ಗಿನ ಹೊತ್ತು ಮನೆಯನ್ನು ಗುಡಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಆದರೆ, ರಾತ್ರಿ ಹೊತ್ತಿನಲ್ಲಿ ಗುಡಿಸಿ ಮನೆಯಿಂದ ಕಸ ಹೊರ ಹಾಕುವುದನ್ನು ಅಶುಭ ಎಂದು ಹೇಳಲಾಗುತ್ತದೆ. ರಾತ್ರಿ ಹೊತ್ತು ಮನೆ ಗುಡಿಸುವುದರಿಂದ ಅಥವಾ ಮನೆಯಿಂದ ಕಸ ಹೊರ ಹಾಕುವುದರಿಂದ ಮಹಾಲಕ್ಷ್ಮೀ ಕೋಪಗೊಳ್ಳುತ್ತಾಳೆ ಎಂದು ಹೇಳಲಾಗುತ್ತದೆ. ಲಕ್ಷ್ಮೀ ಕೋಪಗೊಂಡರೆ ಮನೆಯಲ್ಲಿ ದರಿದ್ರ ವಕ್ಕರಿಸುತ್ತದೆಯಂತೆ. ಕತ್ತಲಲ್ಲಿ ಮನೆಯನ್ನು ಗುಡಿಸಿದರೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಬರುತ್ತದೆ.
ಗುಡಿಸಲು ಸರಿಯಾದ ಸಮಯ ಯಾವುದು :
ಹಾಗಿದ್ದರೆ ಮನೆ ಗುಡಿಸಲು ಸರಿಯಾದ ಸಮಯ ಯಾವುದು ಎಂದು ಕೇಳಿದರೆ, ಇಡೀ ದಿನದಲ್ಲಿ ನಾಲ್ಕು ಬಾರಿ ಕಸ ಗುಡಿಸಬಹುದು ಎಂದು ವಾಸ್ತುವಿನಲ್ಲಿ ಹೇಳಲಾಗಿದೆ. ಆದರೆ ಬೆಳಿಗ್ಗೆ ಮಾತ್ರ ಪೊರಕೆಯನ್ನು ಬಳಸಬಹುದು ಎಂದು ಹೇಳಲಾಗುತ್ತದೆ. ಸಂಜೆಯ ನಂತರ ಪೊರಕೆಯನ್ನು ಬಳಸದಂತೆ ಹೇಳಲಾಗುತ್ತದೆ. ಸೂರ್ಯ ಮುಳುಗುವ ಮುನ್ನ ಮನೆಯ ಕಸ ಹೊರ ಹಾಕಬೇಕು. ಸೂರ್ಯಾಸ್ತದ ನಂತರ ಯಾವುದೇ ಕಾರಣಕ್ಕೂ ಮನೆಯಲ್ಲಿ ಪೊರಕೆಯನ್ನು ಬಳಸಬಾರದು.
ಪೊರಕೆ ಇಡಲು ಸರಿಯಾದ ಸ್ಥಳ ಯಾವುದು :
ಸರಿಯಾದ ಸಮಯದಲ್ಲಿ ಕಸ ಗುಡಿಸುವುದರ ಜೊತೆಗೆ ಪೊರಕೆಯನ್ನು ಸರಿಯಾದ ಸ್ಥಳದಲ್ಲಿ ಅದನ್ನು ಇಡುವುದು ಕೂಡಾ ಬಹಳ ಮುಖ್ಯವಾಗುತ್ತದೆ. ಪೊರಕೆಯನ್ನು ಮನೆಯ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು ಎಂದು ವಾಸ್ತುದಲ್ಲಿ ಹೇಳಲಾಗಿದೆ. ಪೊರಕೆಯನ್ನು ತಪ್ಪಾದ ದಿಕ್ಕಿನಲ್ಲಿ ಇಟ್ಟರೆ ಅದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹರಡುತ್ತದೆ.
ಪೊರಕೆಗೆ ಯಾವತ್ತೂ ಕಾಲು ತಾಗಿಸಬಾರದು :
ಪೊರಕೆಗೆ ಲಕ್ಷ್ಮೀಯ ಸ್ಥಾನಮಾನ ನೀಡಲಾಗಿದೆ. ಹಾಗಾಗಿ ಪೊರಕೆಗೆ ಕಾಲು ತಾಗಿಸಬಾರದು ಎಂದು ಕೂಡಾ ಹೇಳಲಾಗಿದೆ. ಮಾತ್ರವಲ್ಲ ಪೊರಕೆಯನ್ನು ದಾಟಿಕೊಂಡು ಹೋಗಬಾರದು. ಪೊರಕೆಯನ್ನು ಯಾವಾಗಲೂ ಸ್ವಚ್ಛವಾದ ಸ್ಥಳದಲ್ಲಿ ಇಡಬೇಕು. ಮಾತ್ರವಲ್ಲ ಪೊರಕೆಯನ್ನು ಯಾವತ್ತೂ ನಿಲ್ಲಿಸಿ ಇಡಬಾರದು. ಅದನ್ನು ನೆಲದ ಮೇಲೆ ಮಲಗಿರುವ ಸ್ಥಿತಿಯಲ್ಲಿ ಇರಿಸಬೇಕು ಎಂದು ವಾಸ್ತುವಿನಲ್ಲಿ ಹೇಳಲಾಗಿದೆ……