ದೆಹಲಿ :
ಶ್ರದ್ಧಾ ನನ್ನನ್ನು ಬಿಟ್ಟು ಹೋಗ್ತೀನಿ ಅಂತಾ ಬೆದರಿಸಿದ್ದಳು, ನಿನ್ನ ಮದುವೆ ಆಗಲ್ಲಾ. ನಿನ್ನ ಜತೆ ಇರೋದಿಲ್ಲ ಎಂದಿದ್ದಳು, ಬ್ಲಾಕ್ಮೇಲ್, ಬೆದರಿಕೆ ಮಾಡಿದ್ದಕ್ಕೆ ನಾನು ಕೊಲೆ ಮಾಡಿದೆ ಎಂದು ನಾರ್ಕೋ ಅನಾಲಿಸಿಸ್ ಟೆಸ್ಟ್ನಲ್ಲಿ ಅಫ್ತಾಬ್ ಈ ರೀತಿ ಹೇಳಿಕೆ ನೀಡಿದ್ದಾನೆ.
ಎರಡು ಗಂಟೆಗಳ ಕಾಲ ತಜ್ಞರು ಮಂಪರು ಪರೀಕ್ಷೆ ಮಾಡಿದರು. ಈ ಮಂಪರು ಪರೀಕ್ಷೆಗೆ ದೆಹಲಿ ರೋಹಿಣಿ ಆಸ್ಪತ್ರೆಯ ಇಬ್ಬರು ಡಾಕ್ಟರ್ಗಳು, ಇಬ್ಬರು ಮನಃಶಾಸ್ತ್ರಜ್ಞರು, ಇಬ್ಬರು ಫೋಟೋ ಎಕ್ಸ್ಫರ್ಟ್ ಹಾಜರಿದ್ದರು. ತಜ್ಞರು ಅಫ್ತಾಬ್ಗೆ 20-25 ಪ್ರಶ್ನೆಗಳನ್ನುಕೇಳಿ ಉತ್ತರ ಪಡೆದಿದ್ದಾರೆ. ಈ ವೇಳೆ ಶ್ರದ್ಧಾಳ ತಲೆ ಬುರುಡೆ ಎಲ್ಲಿ ಎಂಬ ಪ್ರಶ್ನೆಗೆ ಅಫ್ತಾಬ್ ಉತ್ತರ ನೀಡಿ, ನನಗೆ ನೆನಪಿಲ್ಲಾ.. ಕೆಲವು ವಸ್ತುಗಳನ್ನು ಸಾಕ್ಷ್ಯ ನಾಶಕ್ಕಾಗಿ ಸುಟ್ಟಿದ್ದೇನೆ, ಚೂಪಾದ ಚಾಕು ಬಳಸಿ ಪೀಸ್..ಪೀಸ್ ಮಾಡಿದ್ದೇನೆ ಎಂದು ಹೇಳಿದ್ದಾನೆ.
ಮಂಪರು ಪರೀಕ್ಷೆಯಲ್ಲೂ ತಲೆ ಬುರುಡೆ ರಹಸ್ಯ ಬಯಲಾಗಲೇ ಇಲ್ಲ. ಮಂಪರು ಪರೀಕ್ಷೆ ಮಾಹಿತಿ ಆಧರಿಸಿ ಇಂದು ಮತ್ತೊಮ್ಮೆ ದೆಹಲಿಯ ಸ್ಪೆಷಲ್ ಟೀಂನ ಅಧಿಕಾರಿಗಳಿಂದ ವಿಚಾರಣೆ ನಡೆಯಲಿದೆ……