Breaking News

ರಸ್ತೆ ಸಾರಿಗೆ ನಿಯಮ ಉಲ್ಲಂಘಿಸಿದರೆ 10 ಸಾವಿರ ರೂ.ಗಳ ದಂಡ..!

6 ತಿಂಗಳು ಜೈಲು ಶಿಕ್ಷೆ....

SHARE......LIKE......COMMENT......

ನವದೆಹಲಿ :

ದೇಶದಲ್ಲಿ ಪ್ರತಿ ವರ್ಷ 1.5 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಂಚಾರ ನಿಯಮಗಳಿದ್ದರೂ ಹೆಚ್ಚಿನವರು ಅದನ್ನು ಪಾಲಿಸುತ್ತಿಲ್ಲ. ಕೆಲವು ಸಮಯದ ಹಿಂದೆ, ಸಂಚಾರ ನಿಯಮಗಳನ್ನು (driving rules) ಕಟ್ಟುನಿಟ್ಟಾಗಿ ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಮೋಟಾರು ವಾಹನ ಕಾಯ್ದೆ (MVA) 1988 ಅನ್ನು ತಿದ್ದುಪಡಿ ಮಾಡುವ ಮೂಲಕ ಮೋಟಾರು ವಾಹನ (ತಿದ್ದುಪಡಿ) ಮಸೂದೆ, 2019 ಅನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು.

‘ಹತ್ತು ಸಾವಿರ ದಂಡ’ :

ರಸ್ತೆ ಸಾರಿಗೆ ನಿಯಮಗಳನ್ನು (driving rules) ಉಲ್ಲಂಘಿಸುವುದು ಎಂದರೆ ಅಪಾಯವನ್ನು ಮೈ ಮೇಲೆ ಎಳೆದುಕೊಂಡಂತೆ. ರಸ್ತೆ ಸಾರಿಗೆ ನಿಯಮಗಳನ್ನು ಉಲ್ಲಂಘಿಸಿದರೆ, ನಿಮ್ಮ ಜೇಬಿಗೆ ಹೊರೆಯಾಗಬಹುದು. ನೀವು ಮಾಡುವ ಒಂದು ತಪ್ಪಿನಿಂದ ನೀವು ಮಾತ್ರವಲ್ಲದೆ, ಬೇರೊಬ್ಬರು ಕೂಡಾ ಬೆಲೆ ತೆರಬೇಕಾಗಬಹುದು. ಹೀಗಾಗಿ ಯಾವುದೇ ಕಾರಣಕ್ಕೂ ಪಾನಮತ್ತರಾಗಿ, (drink and drive) ವಾಹನ ಚಲಾಯಿಸಬೇಡಿ. ಪಾನಮತ್ತರಾಗಿ ವಾಹನ ಚಲಾಯಿಸುವಾಗ ಸಿಕ್ಕಿಬಿದ್ದರೆ 10 ಸಾವಿರ ರೂಪಾಯಿ ದಂಡ (drink and drive fine) ಪಾವತಿಸಬೇಕಾಗುತ್ತದೆ. ಮಾತ್ರವಲ್ಲ, 6 ತಿಂಗಳು ಜೈಲು ವಾಸ ಅನುಭವಿಸಬೇಕಾಗುತ್ತದೆ.

ಸಂಪೂರ್ಣ ನಿಬಂಧನೆಯನ್ನು ತಿಳಿಯಿರಿ :

ಮದ್ಯಪಾನ ಮಾಡಿ ವಾಹನ ಚಲಾಯಿಸುವಾ ಮೊದಲ ಬಾರಿಗೆ ಸಿಕ್ಕಿ ಬಿದ್ದರೆ, 10 ಸಾವಿರ ರೂಪಾಯಿ ದಂಡ (ten thousand rupees fine) ಮತ್ತು 6 ತಿಂಗಳು ಜೈಲು (jail) ಶಿಕ್ಷೆಯಾಗಬಹುದು. ಮತ್ತೆ ಅದು ಮರುಕಳಿಸಿದರೆ ದಂಡದ ಮೌಲ್ಯವು 15 ಸಾವಿರ ರೂಪಾಯಿಗಳಿಗೆ ಹೆಚ್ಚಾಗುತ್ತದೆ. ಜೊತೆಗೆ 6 ತಿಂಗಳ ಬದಲು 2 ವರ್ಷ ಜೈಲು ವಾಸ ಅನುಭವಿಸಬೇಕಾಗುತ್ತದೆ. ಈ ಹಿಂದೆ, ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಕೇವಲ 2 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತಿತ್ತು. ಆದರೆ ಈಗ ಮೊತ್ತವನ್ನು 10 ಸಾವಿರಕ್ಕೆ ಏರಿಸಲಾಗಿದೆ…..