Breaking News

ನಯನತಾರಾ ಬಗ್ಗೆ ಮತ್ತೊಂದು ಸುದ್ದಿ ವೈರಲ್..!

ಕಾರಣವಾಯ್ತು ಪತಿ ವಿಘ್ನೇಶ್ ಪೋಸ್ಟ್....

SHARE......LIKE......COMMENT......

ಬೆಂಗಳೂರು:

ಸೌತ್ ಸ್ಟಾರ್ ನಟಿ ನಯನತಾರಾ ವಿಘ್ನೇಶ್ ಶಿವನ್ ಜೊತೆ ಹಸೆಮಣೆ ಏರಿದ ಬಳಿಕ ಸಿಕ್ಕಾಪಟ್ಟೆ ಪ್ರವಾಸಮಾಡುತ್ತಿದ್ದಾರೆ. ನಯನತಾರಾ ದಂಪತಿ ಸದಾ ವಿದೇಶಿ ಟ್ರಿಪ್ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಇಬ್ಬರು ದುಬೈಗೆ ಹಾರಿದ್ದರು. ದುಬನಲ್ಲಿ ಮಸ್ತ್ ಮಜಾ ಮಾಡಿದ ಒಂದಿಷ್ಟು ಸುಂದರ ಫೋಟೋಗಳನ್ನು ಶೇರ್ ಮಾಡಿದ್ದರು. ವಿಘ್ನೇಶ್ ಶಿವನ್ ಪತ್ನಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡುತ್ತಿರುತ್ತಾರೆ. ನಯನತಾರಾ ಸದ್ಯ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಶೂಟಿಂಗ್ ನಡುವೆಯೂ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. ಈ ನಡುವೆ ನಯನತಾರಾ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ. ಹೌದು ನಯನತಾರಾ ಪ್ರೆಗ್ನೆಂಟ್ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣವಾಗಿದ್ದು ವಿಘ್ನೇಶ್ ಶಿವನ್ ಶೇರ್ ಮಾಡಿರುವ ಫೋಟೋ.

ಇತ್ತೀಚಿಗಷ್ಟೆ ವಿಘ್ನೇಶ್ ಶಿವನ್ ಇನ್ಸ್ಟಾಗ್ರಾಮ್ ನಲ್ಲಿ ಒಂದು ಫೋಟೋ ಶೇರ್ ಮಾಡಿದ್ದರು. ಫೋಟೋದಲ್ಲಿ ಪತ್ನಿ ನಯನಾತಾರಾ ಮತ್ತು ಮೂವರು ಮಕ್ಕಳು ಪೋಸ್ ನೀಡಿದ್ದಾರೆ. ವಿಘ್ನೇಶ್ ದಂಪತಿ ಮಕ್ಕಳ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದರೆ ಈ ಅನುಮಾನ ಬರ್ತಿರಲಿಲ್ಲ. ಆದರೆ ವಿಘ್ನೇಶ್ ನೀಡಿರುವ ಕ್ಯಾಪ್ಷನ್ ನಾಯನತಾರಾ ಗರ್ಭಿಣಿನಾ ಎನ್ನುವ ಅನುಮಾನ ಮೂಡಿಸಿದೆ. ಅಷ್ಟಕ್ಕೂ ವಿಘ್ನೇಶ್ ಏನ್ ಹೇಳಿದ್ದಾರೆ ಅಂತೀರಾ, ಫೋಟೋ ಹಾಕಿ, ‘ಮಕ್ಕಳ ಸಮಯ. ಮುಂದಿನ ದಿನಗಳಿಗೆ ಅಭ್ಯಾಸ ಮಾಡುತ್ತಿರುವುದು’ ಎಂದು ಹೇಳಿದ್ದಾರೆ.

ಇನ್ನು ನಯನತಾರಾ ಸಿನಿಮಾ ವಿಚಾರಕ್ಕೆ ಬರುವುದಾದರೆ, ಸದ್ಯ ತಮಿಳು ಜೊತೆಗೆ ಬಾಲಿವುಡ್ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಬಾಲಿವುಡ ನಲ್ಲಿ ಶಾರುಖ್ ಖಾನ್ ಜೊತೆ ಜವಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳು ನಿರ್ದೇಶಕ ಅಟ್ಲೀ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಟೀಸರ್ ರಿಲೀಸ್ ಆಗಿದೆ. ಶಾರುಖ್ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳಿನಲ್ಲಿ ನಯನತಾರಾ ಇರೈವನ್, ಕನೆಕ್ಟ್, ಲೇಡಿ ಸೂಪರ್ ಸ್ಟಾರ್ ಹಾಗೂ ತೆಲುಗಿನಲ್ಲಿ ಗಾಡ್ ಫಾದರ್ ಮಲಯಾಳಂನಲ್ಲಿ ಗೋಲ್ಡ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಬಹುಭಾಷ ನಟಿ ನಯನತಾರಾ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ……