ಸಿನಿಮಾ:
ಅಪ್ಪು ಅಗಲಿ ಇಂದಿಗೆ 1 ತಿಂಗಳು ಕಳೆದಿದೆ. ಬೆಳಗ್ಗೆಯೇ ಸಮಾಧಿ ಸ್ಥಳಕ್ಕೆ ರಾಘವೇಂದ್ರ ರಾಜ್ಕುಮಾರ್, ಪುನೀತ್ ಪತ್ನಿ ಅಶ್ವಿನಿ, ಗೀತಾ ಶಿವರಾಜ್ಕುಮಾರ್, ವಿನಯ್ ರಾಜ್ಕುಮಾರ್,ಯುವ ರಾಜ್ಕುಮಾರ್, ಚಿನ್ನೇಗೌಡ ಸೇರಿ ಸಂಬಂಧಿಕರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದರು. ಅಪ್ಪು ಇಲ್ಲದೇ ಇಂದಿಗೆ 30 ದಿನ ಕಳೆದು ಹೋಯ್ತು. ಆದರೂ ಅಭಿಮಾನಿಗಳು ತಮ್ಮ ದೇವರ ನೋಡಲು ಜನಸಾಗರ ಬರುತ್ತಿದೆ, ಅಪ್ಪು ಪಾರ್ಥೀವ ಶರೀರದ ದರ್ಶನಕ್ಕೆ 3 ಮಿಲಿಯನ್ ಜನರು ಬಂದಿದ್ದರು ಇನ್ನು ಸಮಾಧಿ ಬಳಿಗೆ ಇಲ್ಲಿವರೆಗೆ 3 ಮಿಲಿಯನ್ ಅಭಿಮಾನಿಗಳು ದರ್ಶನ ಪಡಿದಿದ್ದಾರೆ…..