Breaking News

ಟಾಲಿವುಡ್ನಲ್ಲಿ ಕನ್ನಡದ ಆಪಲ್ ಬ್ಯೂಟಿ..!

ಸೌತ್ನಲ್ಲಿ ಸಿಕ್ಕಾಪಟ್ಟೆ ಆಶಿಕಾ ಸೌಂಡ್..

SHARE......LIKE......COMMENT......

ಸಿನಿಮಾ:

ಟಾಲಿವುಡ್‌ನಲ್ಲಿ ರಶ್ಮಿಕಾ, ಶ್ರೀಲಿಲಾ.. ಈ ಸುಂದರಿಯರು ಮಾಡಿದ ಮೋಡಿ ಅಷ್ಟಿಷ್ಟಲ್ಲಾ ಬಿಡಿ. ಆದ್ರೆ  ರಶ್ಮಿಕಾ ಬಾಲಿವುಡ್ ಕಡೆಗೆ ಮುಖ ಮಾಡಿ ನಿಂತ್ರೆ, ಶ್ರೀಲೀಲಾಗೆ ಯಾಕೋ ಗೆಲುವೇ ಸಿಗ್ಲಿಲ್ಲಾ.. ಈ ಗ್ಯಾಪ್‌ನಲ್ಲಿ ಸೈಲೆಂಟ್ ಆಗಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ ಆಶಿಕಾ ರಂಗನಾಥ್​​​​  ಅಂದ್ಹಾಗೆ, ಆಶಿಕಾ ಟಾಲಿವುಡ್‌ಗೆ ಕಾಲಿಟ್ಟಿದ್ದು, 2023ರಲ್ಲಿ ಆಮಿಗೋಸ್ ಸಿನಿಮಾ ಮೂಲಕ. ನಂದಮೂರಿ ಕಲ್ಯಾಣ್‌ಗೆ ನಾಯಕಿಯಾಗಿದ್ದ ಈ ಸುಂದರಿನ ಕಂಡು. ಇಡೀ ತೆಲುಗು ಮಂದಿಗೆ ಫಿದಾ ಆಗ್ಬಿಟ್ಟಿದ್ರು.. ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಹೇಳಿಕೊಳ್ಳದ ಗೆಲುವು ಕಾಣದೇ ಇದ್ರೂ ಆಶಿಕಾ ಅಪೀರಿಯನ್ಸ್ ಸಿಕ್ಕಪಟ್ಟೆ ಸೌಂಡ್ ಮಾಡಿತ್ತು.. ಆಗ್ಲೇ ನಾಯಕಿಯಾಗಿದ್ದು ಟಾಲಿವುಡ್ ಕಿಂಗ್ ನಾಗರ್ಜುನ್‌ಗೆ..

‘ನಾ ಸಾಮಿ ರಂಗ’ ಸಿನಿಮಾದಲ್ಲಿ ನಾಗರ್ಜುನ್ ಜೊತೆ ಹಾಡಿ ಕುಣಿದಿದ್ದೇ ತಡ.. ಆಶಿಕಾ ಖದರೇ ಬದಲಾಗಿ ಹೋಯ್ತು.. ನಸಿಬೇ ಚೇಂಜ್​ ಆಯ್ತು.. ಟಾಲಿವುಡ್‌ನಲ್ಲಿ ಆಕೆಗಾಗಿ ನಾಯಕಿ ಪ್ಲೇಸ್ ಫಿಕ್ಸ್ ಆಗೇ ಬಿಡ್ತು.. ಆಕೆಯ ಸೌಂದರ್ಯಕ್ಕೆ ಅದ್ಭುತ ನಟನೆಗೆ ಸೌತ್​​ ಫಿಲ್ಮೀ ನಗರ ಕಂಪ್ಲೀಟ್ ಬೋಲ್ಡ್ ಆಗಿ ಬಿಡ್ತು,.ಇದರ ಜೊತೆಗೆ ಟಾಲಿವುಡ್ ಮೆಗಸ್ಟಾರ್ ಚಿರಂಜೀವಿಗೆ ನಾಯಕಿಯಾಗುವ ಮೂಲಕ ಎಲ್ಲರೂ ಉಬ್ಬೇರುವಂತೆ ಮಾಡಿದ್ದಾರೆ.. ಸದ್ಯ ಚಿರಂಜೀವಿ ಗಾರು ‘ವಿಶ್ವಂಬರ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ…ಒಟ್ನಲ್ಲಿ ಮೆಗಸ್ಟಾರ್‌ಗೆ ಆಶಿಕಾ ನಾಯಕಿ ಅನ್ನುತ್ತಿದ್ದಾಗೆ ಆಕೆಯ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಬೆಟ್ಟದಷ್ಟು ಯಶಸ್ಸು ಆಶಿಕಾಗೂ ಸಿಗಲಿ ..