ಸಿನಿಮಾ:
ಈಗೆಲ್ಲಾ ಯಾವುದೇ ಸಿನಿಮಾ ಮಡಿದರೂ ಎಲ್ಲ ಭಾಷೆ (Language)ಗಳಲ್ಲಿ ಬಿಡುಗಡೆ ಮಾಡುವ ಪ್ಲ್ಯಾನ್ ಇರುತ್ತೆ. ಪ್ಯಾನ್ ಇಂಡಿಯಾ (Pan India) ಸಿನಿಮಾಗಳದ್ದೇ ಹವಾ ಈಗ. ಅದರಂತೆ ಬಾಲಿವುಡ್ನ ಕ್ಯೂಟ್ ಕಪಲ್ (Cute Couple) ನಟ ರಣಬೀರ್ ಕಪೂರ್ (Ranbir Kapoor) ಹಾಗೂ ಆಲಿಯಾ ಭಟ್ (Alia Bhatt) ಅಭಿನಯದ ಬ್ರಹ್ಮಾಸ್ತ್ರ ಸಿನಿಮಾ ಈಗಾಗಲೇ ತನ್ನ ಮೋಷನ್ ಪೋಸ್ಟರ್ (Motion Poster) ಮೂಲಕವೇ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. 5 ಭಾಷೆಗಳಿಗಿಂತ ಹೆಚ್ಚು ಭಾಷೆಗಳಲ್ಲಿ ಬ್ರಹ್ಮಾಸ್ತ್ರ ಸಿನಿಮಾ ರಿಲೀಸ್ ಆಗುತ್ತಿದೆ. ಇದೇ ಮೊದಲ ಬಾರಿಗೆ ಗಂಡ -ಹೆಂಡತಿ ಇಬರೂ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ನ ‘ಬ್ರಹ್ಮಾಸ್ತ್ರ’ (Brahmastra Movie) ಸಿನಿಮಾ ಸಹ ಕನ್ನಡದಲ್ಲಿ ತೆರೆಕಾಣಲಿದೆ. ಇದೀಗ ಟ್ವೀಟ್ಟರ್ ನಲ್ಲಿ ಹೊಸ ವಿಚಾರವೊಂದು ಟ್ರೇಡಿಂಗ್ನಲ್ಲಿದೆ.
ಬ್ರಹ್ಮಾಸ್ತ್ರ ಚಿತ್ರತಂಡದಿಂದ ಫ್ಯಾನ್ಸ್ಗೆ ಗುಡ್ನ್ಯೂಸ್!
ಅದೇನು ಅಂದರೆ, ಬ್ರಹ್ಮಾಸ್ತ್ರ ಸಿನಿಮಾ ರಿಲೀಸ್ಗೆ ಸರಿಯಾಗಿ ನೂರು ದಿನಗಳು ಬಾಕಿ ಇದೆ. ಹೀಗಾಗಿ ಟ್ವಿಟ್ಟರ್ನಲ್ಲಿ ##100DaysToBrahmastra ಎಂಬ ಹ್ಯಾಷ್ಟ್ಯಾಗ್ ಟ್ರೇಡಿಂಗ್ ಆಗುತ್ತಿದೆ. ಜೊತೆಗೆ ಚಿತ್ರತಂಡ ಕೂಡ ಸ್ಪೆಷಲ್ ವಿಡಿಯೋವೊಂದನ್ನು ರಿಲೀಸ್ ಮಾಡಿದೆ. ಜೊತೆಗೆ ಚಿತ್ರತಂಡ ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟಿದೆ. ಅದೇನಪ್ಪಾ ಅಂದರೆ ಬ್ರಹ್ಮಾಸ್ತ್ರ ಸಿನಿಮಾದ ಟ್ರೈಲರ್ ಜೂನ್ 15ರಂದು ರಿಲೀಸ್ ಆಗಲಿದೆ ಎಂಬ ಮಾಹಿತಿಯನ್ನು ಚಿತ್ರತಂಡ ಹೇಳಿಕೊಂಡಿದೆ.
ಸಖತ್ ಸೌಂಡ್ ಮಾಡುತ್ತಿದೆ ಬ್ರಹ್ಮಾಸ್ತ್ರ!
ಮೊದಲ ಭಾಗಕ್ಕೆ ‘ಬ್ರಹ್ಮಾಸ್ತ್ರ: ಪಾರ್ಟ್ ಒನ್ ಶಿವ’ ಎಂದು ಶೀರ್ಷಿಕೆ ಇಡಲಾಗಿದೆ. ಇದರಲ್ಲಿ ನಟ ರಣಬೀರ್ ಕಪೂರ್ ಅವರು ಶಿವನ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್ ಅಭಿಮಾನಿಗಳಲ್ಲಿ ಭಾರಿ ಕೌತುಕ ನಿರ್ಮಾಣ ಆಗಿದೆ. ರಣಬೀರ್ ಕಪೂರ್ ಅವರ ಲುಕ್ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದೆ. ಇನ್ನೂ ಜೂನ್ 15ರಂದು ಟ್ರೈಲರ್ ರಿಲೀಸ್ ಆಗಲಿದ್ದು, ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಬಾಲಿವುಡ್ನಲ್ಲಿ ಸಖತ್ ಬೇಡಿಕೆ ಇಟ್ಟುಕೊಂಡಿರುವ ರಣಬೀರ್ ಹಾಗೂ ಆಲಿಯಾ ಅವರು ಇದೇ ಮೊದಲ ಬಾರಿಗೆ ‘ಆರ್ಆರ್ಆರ್’ ಸಿನಿಮಾದಲ್ಲಿ ನಟಿಸುವ ಮೂಲಕ ದಕ್ಷಿಣ ಭಾರತದ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.
‘ಬ್ರಹ್ಮಾಂಡದಲ್ಲಿ ಮಹಾಶಕ್ತಿಶಾಲಿಯಾದ ಅಸ್ತ್ರವೊಂದು ಉದ್ಭವಿಸಲಿದೆ. ಮಹಾಯೋಧನೊಬ್ಬನ ಉದಯವಾಗಲಿದೆ. 09.09.2022 ಈ ದಿನಾಂಕದೊಂದಿಗೆ ಬ್ರಹ್ಮಾಸ್ತ್ರ ಪಾರ್ಟ್ ಒನ್: ಶಿವನನ್ನು ನೀವು ತಪ್ಪಿಸಿಕೊಳ್ಳುವಂತಿಲ್ಲ’ ಎಂದು ಆಲಿಯಾ ಭಟ್ ಕನ್ನಡಲ್ಲೇ ಟ್ವೀಟ್ ಮಾಡಿದ್ದರು.‘ಈಶಾ ವಿಶ್ವದಲ್ಲಿ ಏನೋ ನಡೆಯುತ್ತಿದೆ. ಇದು ಸಾಮಾನ್ಯ ಜೀವಿಗಳ ತಿಳುವಳಿಕೆಯನ್ನು ಮೀರಿದೆ’ ಎಂದು ರಣಬೀರ್ ಕಪೂರ್ ಮೋಷನ್ ಪೋಸ್ಟರ್ನಲ್ಲಿ ಹೇಳಿದ್ದರು. ಇದೀಗ ರಿಲೀಸ್ ಆಗಲಿರುವ ಟ್ರೈಲರ್ ಯಾವ ರೀತಿ ಇರಬಹುದು ಎಂಬ ಕುತೂಹಲ ಹೆಚ್ಚಾಗಿದೆ.
ಅಯಾನ್ ಮುಖರ್ಜಿ ನಿರ್ದೇಶನದ ಬ್ರಹ್ಮಾಸ್ತ್ರ್ ಸಿನಿಮಾ ದೊಡ್ಡ ಬಜೆಟ್ ನಲ್ಲಿ ಸಿದ್ಧವಾದ ಸಿನಿಮಾ. ಈ ಸಿನಿಮಾದಲ್ಲಿ ರಣಬೀರ್ ಮತ್ತು ಅಲಿಯಾ ಜೊತೆಗೆ ಅಮಿತಾಬ್ ಬಚ್ಚನ್, ಮೌನಿ ರಾಯ್, ನಾಗಾರ್ಜುನ್ ಸೇರಿದಂತೆ ಅನೇಕ ಸ್ಟಾರ್ ಕಲಾವಿದರು ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಸೆಟ್ಟೇರಿ ಅನೇಕ ವರ್ಷಗಳೇ ಆಗಿತ್ತು. 2018ರಲ್ಲಿ ಸೆಟ್ಟೇರಿದ ಬ್ರಾಹ್ಮಾಸ್ತ್ರ ಸಿನಿಮಾದ ಚಿತ್ರೀಕರಣ ಇತ್ತೀಚಿಗಷ್ಟೆ ಮುಗಿಸಿದ್ದಾರೆ. ರಣಬೀರ್ ಕಪೂರ್ ಬರೋಬ್ಬರಿ 30 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ನಾಯಕಿಯಾಗಿ ಮಿಂಚಿರುವ ರಣಬೀರ್ ಪತ್ನಿ, ಸ್ಟಾರ್ ನಟಿ ಅಲಿಯಾ ಭಟ್ 12 ಕೋಟಿ ರೂಪಾಯಿ ಪಡೆದಿದ್ದಾರಂತೆ…..