ಮುಂಬೈ:
ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಮತ್ತು ಇತರರನ್ನು ಬಿಟ್ಟುಕಳಿಸುವುದಕ್ಕೆ 25 ಕೋಟಿ ರೂಪಾಯಿ ಲಂಚದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಎನ್ ಸಿ ಬಿ ಮುಂಬೈ ನ ತನ್ನ ವಿಭಾಗೀಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ವಿಜಿಲೆನ್ಸ್ ತನಿಖೆಗೆ ಆದೇಶ ನೀಡಿದೆ.ಪ್ರಭಾಕರ್ ಸೈಲ್ ಎಂಬಾತ ಕ್ರೂಸ್ ಡ್ರಗ್ಸ್ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದು, ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಆರ್ಯನ್ ಖಾನ್ ನ್ನು ಈ ಪ್ರಕರಣದಿಂದ ಕೈಬಿಡಲು ಎನ್ ಸಿಬಿ ಅಧಿಕಾರಿ ಹಾಗೂ ಇತರರು 25 ಕೋಟಿ ರೂಪಾಯಿ ಕೇಳಿದ್ದರು ಎಂಬ ಗಂಭೀರ ಆರೋಪವನ್ನು ಅ.24 ರಂದು ಮಾಡಿದ್ದರು.
ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ 25 ಕೋಟಿ ಲಂಚ ಆರೋಪ..!
ಸಮೀರ್ ವಾಂಖೆಡೆ ವಿರುದ್ಧ ವಿಚಾರಣೆಗೆ NCB ಆದೇಶ...
Article Updated: October 25, 2021
Comments Off on ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ 25 ಕೋಟಿ ಲಂಚ ಆರೋಪ..!
