Breaking News

ಸಿನಿಮಾ ಪ್ರಚಾರಕ್ಕೆ ಧನಂಜಯ್ ಮತ್ತು ತಂಡಕ್ಕೆ ರೆಟ್ರೋ ಗೆಟಪ್..!

ಸಿನಿಮಾ ಅಕ್ಟೋಬರ್ 21ಕ್ಕೆ ವಿಶ್ವದಾದ್ಯಂತ ರಿಲೀಸ್....

SHARE......LIKE......COMMENT......

ಬೆಂಗಳೂರು:

ಧನಂಜಯ್ ಮತ್ತು ಇತರ ಕಲಾವಿದರು ಬೆಲ್ ಬಾಟಂ ತೊಟ್ಟು ಅಂಬಾಸಿಡರ್ ಕಾರಿನಲ್ಲಿ ಪ್ರಯಾಣಿಸಿದ್ದಾರೆ. ಇವರ ಪ್ರಚಾರ ತಂತ್ರಗಳ ಬಗ್ಗೆ ಹೆಡ್ ಬುಷ್ ತಂಡ ಸಂತೋಷಪಡುತ್ತಿದೆ. ಹೆಡ್ ಬುಷ್ ಸಿನಿಮಾ ಅಕ್ಟೋಬರ್ 21ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗ್ತಿದೆ. ಈ ಹಿನ್ನೆಲೆಯಲ್ಲಿ ಧನಂಜಯ್, ನಿರ್ಮಾಪಕರನ್ನೊಳಗೊಂಡ ತಂಡ ವಿಶ್ವ ಪರ್ಯಟನೆ ಮಾಡ್ತಾ, ಸಿನಿಮಾ ಪ್ರಚಾರ ಮಾಡುತ್ತಿದೆ.

ಬೆಂಗಳೂರು ಮಾಫಿಯಾ ಕುರಿತು ಅಗ್ನಿಶ್ರೀಧರ್‌ ಬರೆದಿರುವ ‘ದಾದಾಗಿರಿಯ ದಿನಗಳು’ ಕೃತಿಯಾಧಾರಿತ ಹೆಡ್ ಬುಷ್ ಚಿತ್ರವನ್ನು ಶೂನ್ಯ ಅವರು ನಿರ್ದೇಶಿಸಿದ್ದಾರೆ. ಇದು 1970 ರ ಬೆಂಗಳೂರು ಭೂಗತ ಜಗತ್ತಿನ ಸುತ್ತ ನಡೆಯುವ ಸಿನಿಮಾವಾಗಿದೆ. ಧನಂಜಯ್ ಮತ್ತಿತರ ನಟರ ರೆಟ್ರೊ ಅವತಾರದ ಫೋಟೋಗಳು, ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸ್ಟೈಲಿಸ್ಟ್ ಶಚಿನಾ ಹೆಗ್ಗರ್, ಹೆಡ್ ಬುಷ್‌ನ ಪ್ರಚಾರಕ್ಕಾಗಿಯೇ ಆ ಅವಧಿಯ 100 ಬೆಲ್-ಬಾಟಮ್ ಪ್ಯಾಂಟ್ ಮತ್ತು ಶರ್ಟ್‌ಗಳನ್ನು ವಿನ್ಯಾಸ ಮಾಡಿದ್ದಾರೆ. ಇದಕ್ಕಾಗಿ ನಿರ್ಮಾಪಕರು ಒಂದು ಡಜನ್ ಅಂಬಾಸಿಡರ್ ಕಾರುಗಳನ್ನು ಬಾಡಿಗೆಗೆ ಪಡೆದಿದ್ದಾರೆ.

ಹೆಡ್ ಬುಷ್ ಚಿತ್ರದ ಹೊಸ ಪ್ರಚಾರ ತಂತ್ರ ಕುರಿತು ಮಾತನಾಡಿದ ಧನಂಜಯ್, ಬಡವ ರಾಸ್ಕಲ್ ಗಾಗಿ ಮಾಡಿದ ಅಂತಹ ಸೃಜನಶೀಲ ಪ್ರಚಾರಗಳ ಯಶಸ್ಸು ಈ ಸಿನಿಮಾ ಅದೇ ರೀತಿ ಮಾಡಲು ಪ್ರೇರೆಪಿಸಿತು ಎಂದರು. ಇಂದು, ಪ್ರೇಕ್ಷಕರು, ಚಿತ್ರ ಬಿಡುಗಡೆ ದಿನಾಂಕಕ್ಕಾಗಿ ಮಾತ್ರವಲ್ಲ, ಪ್ರಚಾರಕ್ಕಾಗಿಯೂ ಕಾಯುತ್ತಿದ್ದಾರೆ. ಅಭಿಮಾನಿಗಳು ಕೂಡ ಬೆಲ್ ಬಾಟಮ್‌ ಟ್ರೆಂಡ್ ಗೆ ಮರಳುತ್ತಿದ್ದಾರೆ. ನಿಸ್ಸಂದೇಹವಾಗಿ, ಚಿತ್ರವು ತುಂಬಾ ಚೆನ್ನಾಗಿ ಮೂಡಿಬಂದಿದೆ. ಪ್ರತಿಯೊಬ್ಬ ತಂತ್ರಜ್ಞರು ಮತ್ತು ನಟರು ಅದ್ಭುತವಾದ ಕೆಲಸವನ್ನು ಮಾಡಿದ್ದಾರೆ ಮತ್ತು ಇದು ಪ್ರೇಕ್ಷಕರಿಗೆ ಒಂದು ರೀತಿಯ ಅನುಭವ ನೀಡುತ್ತದೆ. ಪ್ರೇಕ್ಷಕರನ್ನು ತಲುಪಲು ಈ ರೀತಿಯ ಪ್ರಚಾರ ತಂತ್ರ ಅನುಸರಿಸಲಾಗುತ್ತಿದೆ. ನಂತರ ಅದನ್ನು ಹೇಗೆ ತೆಗೆದುಕೊಂಡು ಹೋಗ್ತಾರೆ ಎಂಬುದನ್ನು ಅವರ ತೀರ್ಮಾನಕ್ಕೆ ಬಿಡಲಾಗುವುದು ಎಂದು ಧನಂಜಯ್ ಹೇಳಿದರು.

ಸೋಮಣ್ಣ ಟಾಕೀಸ್ ಸಹಯೋಗದಲ್ಲಿ ಡಾಲಿ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ಪಾಯಲ್ ರಜಪೂತ್ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ವಸಿಷ್ಟ ಎನ್ ಸಿಂಹ, ರವಿಚಂದ್ರನ್, ಶ್ರುತಿ ಹರಿಹರನ್, ಯೋಗಿ, ಮತ್ತು ರಘು ಮುಖರ್ಜಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ……