Breaking News

ಮೈಸೂರಲ್ಲಿ ದಸರಾ ಹಬ್ಬದ ಸಂಭ್ರಮ ಮತ್ತಷ್ಟು ಜೋರಾಗಿದೆ..!

ಅರಮನೆಯಲ್ಲಿ ಎಲ್ಲಾ ಆಯುಧಗಳಿಗೆ ವಿಶೇಷ ಪೂಜೆ....

SHARE......LIKE......COMMENT......

ಮೈಸೂರು :

ಮೈಸೂರಲ್ಲಿ ದಸರಾ ಹಬ್ಬದ ಸಂಭ್ರಮ ಮತ್ತಷ್ಟು ಜೋರಾಗಿದೆ. ಆಯುಧ ಪೂಜೆ ಹಿನ್ನೆಲೆ ಅರಮನೆ ನಗರದಲ್ಲಿನ ಎಲ್ಲಾ ಆಯುಧಗಳಿಗೆ ವಿಶೇಷ ಪೂಜೆ ನಡೆಯುತ್ತಿದೆ. ಇಂದು ಬೆಳಿಗ್ಗೆ 11.05 ರಿಂದ 12.20 ಗಂಟೆವರೆಗೆ ಸಲ್ಲುವ ಶುಭ ಮುಹೂರ್ತದಲ್ಲಿ ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತೆ. ಇದಕ್ಕೂ ಮುನ್ನ ಇಂದು ಬೆಳಗ್ಗೆ 6 ಗಂಟೆಗೆ ಅರಮನೆಯಲ್ಲಿ ಚಂಡಿಕಾ ಹೋಮ ಸಲ್ಲಿಸಿದ್ದಾರೆ. ಹೋಮ ಹವನದ ಜೊತೆ ಹಲವು ಸಾಂಪ್ರದಾಯಿಕ ಪೂಜಾ ವಿಧಿ ವಿಧಾನವನ್ನ ಯದುವೀರ್ ನೆರವೇರಿಸಿದ್ರು. ಕೆಲವೇ ಸಮಯದಲ್ಲಿ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಜೊತೆ ಪಲ್ಲಕ್ಕಿಯಲ್ಲಿ ಆಯುಧಗಳನ್ನು ಅರಮನೆಗೆ ತರಲಾಗುತ್ತೆ. ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ಆಯುಧಗಳನ್ನು ತಂದು ಪೂಜಿಸಲಾಗುತ್ತೆ. ರಾಜರ ಕಾಲದ ಕತ್ತಿ, ಗುರಾಣಿ ಸೇರಿದಂತೆ ಹಲವು ರೀತಿಯ ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತೆ. ಪೂಜೆ ನಂತರ ಮತ್ತೆ ಅರಮನೆಗೆ ಹೋಗಿ ಕಲ್ಯಾಣ ಮಂಟಪದಲ್ಲಿ ಆಯುಧಗಳನ್ನು ಜೋಡಿಸಲಾಗುತ್ತೆ……