Breaking News

ಇಂದಿನಿಂದ 1-5ನೇ ತರಗತಿ ಅರ್ಧ ದಿನ ಶಾಲೆ..!

ಅ.30ರವರೆಗೆ ಅರ್ಧದಿನ ಮಾತ್ರ ತರಗತಿಗಳು....

SHARE......LIKE......COMMENT......

ಬೆಂಗಳೂರು:

ರಾಜ್ಯಾದ್ಯಂತ ಇಂದಿನಿಂದ ಪ್ರಾಥಮಿಕ ಶಾಲೆಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ಸಂಭ್ರಮದಿಂದ ಶಾಲೆಗಳತ್ತ ಧಾವಿಸಿ ಬರುತ್ತಿದ್ದಾರೆ. ಇಂದಿನಿಂದ 1-5ನೇ ತರಗತಿಯ ಶಾಲೆಗಳು ಆರಂಭವಾಗಿದ್ದು, 20 ತಿಂಗಳ ಬಳಿಕ ಮನೆ ಪಾಠಕ್ಕೆ ಬ್ರೇಕ್ ಬಿದ್ದಿದ್ದು, ತರಗತಿಗಳು ಆರಂಭವಾಗಿವೆ. ಮಕ್ಕಳನ್ನು ಸ್ವಾಗತಿಸಲು ಬಣ್ಣ ಬಣ್ಣದ ರಂಗೋಲಿ, ತಳಿರು ತೋರಣಗಳಿಂದ ಶಾಲೆಗಳನ್ನು ಶೃಂಗರಿಸಲಾಗಿದೆ. ಅ.30ವರೆಗೆ ಅರ್ಧ ದಿನ ಮಾತ್ರ ತರಗತಿಗಳು ಇರಲಿವೆ. ನ.2ರಿಂದ ಪೂರ್ಣ ಪ್ರಮಾಣದಲ್ಲಿ ತರಗತಿಗಳು ಆರಂಭವಾಗಲಿದೆ. ಅ.30ವರೆಗೆ ಶಾಲೆಗಳಲ್ಲಿ ಬಿಸಿಯೂಟದ ವ್ಯವಸ್ಥೆ ಇರಲ್ಲ.

ಮಾರ್ಗಸೂಚಿ:

ಮಕ್ಕಳು ಶಾಲೆಗೆ ಬರಲು ಪೋಷಕರ ಅನುಮತಿ ಕಡ್ಡಾಯವಾಗಿದೆ.
ಶಿಕ್ಷಕರಿಗೆ 2 ಡೋಸ್ ಲಸಿಕೆ ಕಡ್ಡಾಯ.
ಶೇ.50ರಷ್ಟು ಮಾತ್ರ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ.
ಶಾಲೆಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ.
ಅಗತ್ಯ ಕುಡಿಯುವ ಬಿಸಿನೀರಿನ ವ್ಯವಸ್ಥೆ.
ಆನ್ ಲೈನ್ ಹಾಗೂ ಆಫ್ ಲೈನ್ ಎರಡೂ ತರಗತಿಗಳಿಗೂ ಅವಕಾಶ.
ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:30ರವರೆಗೆ ತರಗತಿಗಳು.
ನವೆಂಬರ್ 2ರಿಂದ ಬೆಳಿಗ್ಗೆ 8ರಿಂದ ಪೂರ್ಣಪ್ರಮಾಣದಲ್ಲಿ ತರಗತಿಗಳು ಆರಂಭ.
ಎಲ್ ಕೆಜಿ, ಯುಕೆಜಿ ತರಗತಿಗಳಿಗೆ ಸದ್ಯಕ್ಕೆ ಅವಕಾಶವಿಲ್ಲ……