Breaking News

ಐಪಿಎಲ್‌ ಕಪ್‌ ಗೆಲ್ಲುವ ಆರ್‌ಸಿಬಿ ಕನಸು ಮತ್ತೊಮ್ಮೆ ಭಗ್ನ..!

ಆರ್‌ಸಿಬಿ ಸೋತರೂ ಬೆಂಬಲಕ್ಕೆ ನಿಂತ ಅಭಿಮಾನಿಗಳು....

SHARE......LIKE......COMMENT......

ಬೆಂಗಳೂರು :

2016ರ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು ಐಪಿಎಲ್‌ ಫೈನಲ್‌ಗೇರುವ ಕನಸನ್ನು ರಾಜಸ್ಥಾನ ರಾಯಲ್ಸ್‌ (Rajasthan Royals) ತಂಡವು ನುಚ್ಚುನೂರು ಮಾಡಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ ಎದುರು ರಾಜಸ್ಥಾನ ರಾಯಲ್ಸ್ ತಂಡವು 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಎರಡನೇ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿದೆ.

ಕಳೆದ 14 ಆವೃತ್ತಿಯ ಐಪಿಎಲ್ ಟೂರ್ನಿಯಿಂದಲೂ ಚೊಚ್ಚಲ ಟ್ರೋಫಿಯ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ಶತಾಯಗತಾಯ ಕಪ್ ಗೆದ್ದೇ ತೀರಲಿದೆ ಎಂದು ಅಭಿಮಾನಿಗಳು ಭಾವಿಸಿದ್ದರು. ಅದರಲ್ಲೂ ಎಲಿಮಿನೇಟರ್‌ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಎದುರು ಅಮೋಘ ಪ್ರದರ್ಶನ ತೋರುವ ಮೂಲಕ ಐಪಿಎಲ್‌ ಫೈನಲ್‌ಗೆ ಮತ್ತಷ್ಟು ಹತ್ತಿರವಾಗಿದ್ದ ಫಾಫ್ ಡು ಪ್ಲೆಸಿಸ್‌ ಮೇಲೆ ರೆಡ್ ಆರ್ಮಿ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆಯಿಟ್ಟಿದ್ದರು. ಇಷ್ಟು ವರ್ಷ ಒಂದು ಲೆಕ್ಕವಾದರೇ, ಈ ವರ್ಷ ಮತ್ತೊಂದು ಲೆಕ್ಕಾ ಎಂದು ಫ್ಯಾನ್ಸ್‌ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಹಾಕುವ ಮೂಲಕ ಆರ್‌ಸಿಬಿ ತಂಡವನ್ನು ಹುರಿದುಂಬಿಸಿದ್ದರು.

ಆರ್‌ಸಿಬಿ ಪ್ಲೇ ಆಫ್‌ಗೇರುವುದೇ ಕಷ್ಟ ಎನ್ನುವಂತ ಸಂದರ್ಭದಲ್ಲಿ ಅದೃಷ್ಟ ಕೂಡಾ ಸಾಥ್ ನೀಡಿತ್ತು. ಲೀಗ್‌ ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸುವ ಮೂಲಕ ಆರ್‌ಸಿಬಿ ಪ್ಲೇ ಆಫ್ ಹಾದಿ ಸುಗಮವಾಗಿತ್ತು. ಇನ್ನು ಎಲಿಮಿನೇಟರ್‌ ಪಂದ್ಯದಲ್ಲಿ ಸ್ಟಾರ್ ಆಟಗಾರರ ವೈಫಲ್ಯದ ಹೊರತಾಗಿಯೂ ಆರ್‌ಸಿಬಿ ಉಳಿದ ಆಟಗಾರರು ತೋರಿದ ಕೆಚ್ಚೆದೆಯ ಪ್ರದರ್ಶನ ಕಂಡು ಆರ್‌ಸಿಬಿ ಅಭಿಮಾನಿಗಳಲ್ಲಿ ಈ ಸಲ ಕಪ್‌ ನಮ್ದೇ ಎನ್ನುವ ಘೋಷಣೆಗೆ ಮತ್ತಷ್ಟು ಬಲ ಬಂದಂತೆ ಆಗಿತ್ತು.

ರಾಯಲ್‌ ಚಾಲೆಂಜ​ರ್ಸ್‌ ಬೆಂಗಳೂರು(ಆರ್‌ಸಿಬಿ) ತಂಡದ ಐಪಿಎಲ್ ಕಪ್‌ ಗೆಲ್ಲುವ ಆಸೆ ಈ ಸಲವೂ ಈಡೇರಲಿಲ್ಲ. ರಾಜಸ್ಥಾನ ರಾಯಲ್ಸ್‌ ವಿರುದ್ಧ ಶುಕ್ರವಾರ ನಡೆದ ಕ್ವಾಲಿಫೈಯರ್‌-2 ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಸೋತ ಆರ್‌ಸಿಬಿ, 15ನೇ ಆವೃತ್ತಿಯ ಐಪಿಎಲ್‌ನಿಂದ ಹೊರಬಿದ್ದಿದೆ. ಸೆಮಿಫೈನಲ್‌ನಂತಿದ್ದ ಪಂದ್ಯದಲ್ಲಿ ಆರ್‌ಸಿಬಿ ಎಲ್ಲಾ ವಿಭಾಗಗಳಲ್ಲೂ ವೈಫಲ್ಯ ಕಂಡಿತು. ಮೊದಲು ಬ್ಯಾಟರ್‌ಗಳ ಕಳಪೆ ಆಟದಿಂದಾಗಿ 20 ಓವರಲ್ಲಿ 8 ವಿಕೆಟ್‌ಗೆ ಕೇವಲ 157 ರನ್‌ ಕಲೆಹಾಕಿದರೆ, ಜೋಸ್‌ ಬಟ್ಲರ್‌ರ ಅಬ್ಬರವನ್ನು ತಡೆಯಲು ಬೌಲರ್‌ಗಳು ವಿಫಲರಾದ ಕಾರಣ ಕೇವಲ 18.1 ಓವರಲ್ಲಿ ಆರ್‌ಸಿಬಿ ರಾಯಲ್ಸ್‌ಗೆ ಶರಣಾಯಿತು.

ಆರ್‌ಸಿಬಿ (RCB) ಸೋತಿದ್ದಕ್ಕೆ ಹಲವು ಅಭಿಮಾನಿಗಳಿಗೆ ಬೇಜಾರಾಗಿಲ್ಲ, ಆದರೆ ನಿರಾಶಾದಾಯಕ ಪ್ರದರ್ಶನ ತೋರಿದ್ದರ ಬಗ್ಗೆ ಕೊಂಚ ಬೇಸರ ವ್ಯಕ್ತಪಡಿಸಿದ್ದಾರೆ. ಇದೆಲ್ಲದರ ಹೊರತಾಗಿಯೂ ಅಭಿಮಾನಿಗಳು ಮತ್ತೊಮ್ಮೆ ಎಂದಿನಂತೆ ಆರ್‌ಸಿಬಿ ಬೆಂಬಲಕ್ಕೆ ನಿಂತಿದ್ದಾರೆ. ಸೋತರೂ ಗೆದ್ದರೂ ಆರ್‌ಸಿಬಿ ಫಾರ್ ಎವರ್ ಎಂದು ಸ್ಟೇಟಸ್‌ ಹಾಗೂ ಟ್ವೀಟ್ ಮಾಡುವ ಮೂಲಕ ತಾವು ನಿಷ್ಟಾವಂತ ಫ್ಯಾನ್ಸ್‌ ಎನ್ನುವುದನ್ನು ಸಾಬೀತು ಮಾಡಿದ್ದಾರೆ…..