Breaking News

ಕೊಳಚೆ ನೀರು ಮತ್ತು ಮೂತ್ರ ಮಿಶ್ರಿತ ನೀರಿನಿಂದ ಬಿಯರ್ ತಯಾರಿಸಿದ ಕಂಪನಿ..!

ಕುಡಿದ ಗ್ರಾಹಕರು ಇದರ ರುಚಿಗೆ ಮನ ಸೋತಿದ್ದಾರಂತೆ....

SHARE......LIKE......COMMENT......

ಸಿಂಗಾಪುರ:

ಬಾರ್ಲಿ (Barley) ಇತ್ಯಾದಿಗಳಿಂದ ಬಿಯರ್ ಮಾಡ್ತಾರೆ ಎನ್ನುವುದು ಎಲ್ಲರಿಗೂ ಗೊತ್ತು. ಆದ್ರೆ ಇದೀಗ ಬಂದ ಹೊಸ ಸುದ್ದಿಯ ಪ್ರಕಾರ ಮಾನವ ಮೂತ್ರದಿಂದ (Human Urine) ಬಿಯರ್ ಮಾಡುತ್ತಾರಂತೆ. ಅಷ್ಟೇ ಅಲ್ಲ ಕೊಳಚೆ ನೀರಿನಿಂದಲೂ (Drainage Water) ಬಿಯರ್ ಕಂಡು ಹಿಡಿಯಲಾಗಿದ್ಯಂತೆ. ಇದನ್ನು ಕುಡಿದ ಗ್ರಾಹಕರು ಇದರ ರುಚಿಗೆ ಮನ ಸೋತಿದ್ದಾರಂತೆ.

ಬಹುಶಃ ಈ ಸುದ್ದಿ (News) ಓದಿದರೆ ನೀವು “ಇಶ್ಯೀ” ಅಂತ ಮೂಗು ಮುರಿಯೋದು ಗ್ಯಾರೆಂಟಿ! “ಹೀಗೆಲ್ಲಾ ಇರುತ್ತಾ ಛೀ…” ಅಂತ ಅಸಹ್ಯ ಪಟ್ಟುಕೊಳ್ಳೋದೂ ಗ್ಯಾರೆಂಟಿ. ಯಾಕೆಂದ್ರೆ ಇದು ಮೂತ್ರದಿಂದ (Urine) ಬಿಯರ್ (Beer) ಮಾಡುವ ಸುದ್ದಿ. ಹೌದು, ಬಾರ್ಲಿ (Barley) ಇತ್ಯಾದಿಗಳಿಂದ ಬಿಯರ್ ಮಾಡ್ತಾರೆ ಎನ್ನುವುದು ಎಲ್ಲರಿಗೂ ಗೊತ್ತು. ಆದ್ರೆ ಇದೀಗ ಬಂದ ಹೊಸ ಸುದ್ದಿಯ ಪ್ರಕಾರ ಮಾನವ ಮೂತ್ರದಿಂದ (Human Urine) ಬಿಯರ್ ಮಾಡುತ್ತಾರಂತೆ. ಅಷ್ಟೇ ಅಲ್ಲ ಕೊಳಚೆ ನೀರಿನಿಂದಲೂ (Drainage Water) ಬಿಯರ್ ಕಂಡು ಹಿಡಿಯಲಾಗಿದ್ಯಂತೆ. ಇದನ್ನು ಕುಡಿದ ಗ್ರಾಹಕರು (Customers) ಇದರ ರುಚಿಗೆ (Taste) ಈಗಾಗಲೇ ಮನ ಸೋತಿದ್ದಾರಂತೆ. ಸಿಂಗಾಪುರದಲ್ಲಿ (Singapore) ಇಂತದ್ದೊಂದು ಸ್ಪೆಷಲ್ ಬಿಯರ್ (Special Beer) ತಯಾರಿ ಆಗ್ತಿದೆ. ಈ ಬಗ್ಗೆ ಇಲ್ಲಿದೆ ಓದಿ.

ಮಾನವ ಮೂತ್ರದಿಂದಲೂ ತಯಾರಾಗುತ್ತೆ ಬಿಯರ್!

ಹೌದು, ಸಿಂಗಾಪುರದಲ್ಲಿ ಮಾನವನ ಮೂತ್ರ ಬಳಸಿ ಉತ್ತಮ ಗುಣಮಟ್ಟದ, ಶುದ್ಧ ಹಾಗೂ ರುಚಿಕರ ಬಿಯರ್ ತಯಾರಿಸಲಾಗಿದೆ. ನ್ಯೂಬ್ರೂ ಹೆಸರಿನ ಈ ಬಿಯರ್ ಈಗಾಗಲೇ ಮಾರುಕಟ್ಟೆಯಲ್ಲಿ ಹಂಗಾಮಾ ಮಾಡುತ್ತಿದೆ. ಸಾಮಾನ್ಯ ಬಿಯರ್‌ನಂತೆ ಇರುವ ಇದು ಸಾಂಪ್ರಾಯಿಕ ರುಚಿಗಿಂತ ಬೇರೆನೇ ರುಚಿ ಕೊಡುತ್ತಿದೆಯಂತೆ. ಇದಕ್ಕೆ ಕಾರಣ ಮಾನವ ಮೂತ್ರ ಅಂತ ಕಂಪನಿ ಹೇಳಿದೆ.

ಒಳ ಚರಂಡಿ ನೀರಿನಿಂದಲೂ ಬಿಯರ್ ತಯಾರಿಕೆ

ಮಾನವ ಮೂತ್ರ ಅಷ್ಟೇ ಅಲ್ಲ, ಒಳಚರಂಡಿಗಳಿಂದ ಬರುವ ಕೊಳಚೆ ನೀರಿನಿಂದಲೂ ಸಹ ಬಿಯರ್ ತಯಾರಿಸಲಾಗುತ್ತೆದೆ. ಅತ್ಯಾಧುನಿಕ ವಿಧಾನಗಳಿಂದ ಚರಂಡಿಯ ಕೊಳಚೆ ನೀರನ್ನು ಶುದ್ಧೀಕರಣ ಮಾಡಲಾಗುತ್ತದೆ. ಬಳಿಕ ಅದನ್ನು ಬಿಯರ್ ತಯಾರಿಕೆಗೆ ಬಳಸಲಾಗುತ್ತಿದೆ ಅಂತ ಸಿಂಗಾಪುರದ ಬಿಯರ್ ತಯಾರಿಕಾ ಕಂಪನಿ ಹೇಳಿದೆ.

ಹಲವು ಹಂತಗಳಲ್ಲಿ ಶುದ್ಧತೆಯ ಪರಿಶೀಲನೆ

ನ್ಯೂಬ್ರೂ ಎನ್ನುವುದು ಸಿಂಗಾಪುರ ನೀರು ಸರಬರಾಜ ಮಂಡಳಿಯು ಶುದ್ಧೀಕರಿಸಿ, ಸೋಸಿ, ಪೂರೈಕೆ ಮಾಡಿರುವ ಶುದ್ಧ ನೀರಿನಲ್ಲಿ ಉತ್ಪಾದಿಸಿದ ಬಿಯರ್ ಆಗಿದೆ. ಈ ಬಿಯರ್ ಉತ್ಪಾದನೆಗಾಗಿ ಪೂರೈಕೆ ಆಗುವ ಹೊಸ ನೀರನ್ನು ಕಟ್ಟುನಿಟ್ಟಾದ ಪರೀಕ್ಷಿಸಿ, ಹಲವು ಹಂತಗಳಲ್ಲಿ ಶೋಧಿಸಿ, ಕುಡಿಯುವುದಕ್ಕೆ ಸುರಕ್ಷಿತವಾಗಿದೆಯೇ ಎಂಬುದನ್ನು ಮೊದಲು ಖಾತ್ರಿಪಡಿಸಿಕೊಳ್ಳಲಾಗುತ್ತದೆ.

ಈ ವಿಶೇಷ ಬಿಯರ್ ಬಗ್ಗೆ ಕಂಪನಿ ಹೇಳಿದ್ದೇನು?

ಉತ್ಪಾದನಾ ಸಂಸ್ಥೆ,ಕೊಳಚೆ ನೀರು ಮತ್ತು ಮೂತ್ರ ಮಿಶ್ರಿತ ನೀರಿನಿಂದ ಬಿಯರ್ ತಯಾರಿಸೋದರ ಹಿಂದೆ ನಿರ್ದಿಷ್ಟ ಕಾರಣವೂ ಇದೆ. ಸಿಂಗಾಪುರದಲ್ಲಿ ಮಾದಕ ಪಾನೀಯಗಳ ಉತ್ಪಾದನೆಯನ್ನು ಪರಿಸರ ಸ್ನೇಹಿ ಎಂಬ ಸಂದೇಶವನ್ನು ಸಾರಲು ಮುಂದಾಗಿದೆ. ನ್ಯೂಬ್ರೂ ಬಿಯರ್ ಅನ್ನು ಮೂತ್ರ ಮತ್ತು ಕೊಳಚೆ ನೀರಿನಿಂದ ಉತ್ಪಾದಿಸಲಾಗುತ್ತದೆ. ಸಿಂಗಾಪುರದ ರಾಷ್ಟ್ರೀಯ ಜಲ ಮಂಡಳಿಯೂ ಈ ಕಲ್ಪನೆಯ ಹಿಂದೆ ಇದೆ. ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯನೀರಿನ ಸಂಸ್ಕರಣೆಗೆ ವಿವಿಧ ಯೋಜನೆಗಳು ಈಗಾಗಲೇ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇದರೊಂದಿಗೆ, ಬಿಯರ್ ಅನ್ನು ಮಾಲಿನ್ಯಕಾರಕಗಳು ಮತ್ತು ಮೂತ್ರದಿಂದ ತಯಾರಿಸಲಾಗುತ್ತದೆ. ಸಿಂಗಾಪುರದಲ್ಲಿ ಪ್ರಸ್ತುತ ನ್ಯೂಬ್ರೂ ಅನ್ನು ಹಸಿರು ಬಿಯರ್ ಎಂದು ಪ್ರಚಾರ ಮಾಡಲಾಗಿದೆ.

ನೀರಿನ ಅಭಾವದ ಬಗ್ಗೆ ಜಾಗೃತೆ ಮೂಡಿಸುವ ಕೆಲಸ

ಸಿಂಗಾಪುರದ ನೀರಿನ ಅಭಾವದ ಬಗ್ಗೆ ಜಾಗೃತಿ ಮೂಡಿಸಲು ಈ ಪಾನೀಯವನ್ನು ಪ್ರಾರಂಭಿಸುವ ಮೂಲಕ ದೇಶದ ಜಲ ಸಂಸ್ಥೆ ಅನಿವಾರ್ಯ ನೀರಿನ ಬಿಕ್ಕಟ್ಟನ್ನು ನಿಭಾಯಿಸಲು ಒಂದು ಮಾರ್ಗವನ್ನು ಕಂಡುಕೊಂಡಿದೆ.

ಈ ರೀತಿಯ ಪ್ರಯತ್ನ ಇದೇ ಮೊದಲೇನಲ್ಲ

ಈ ಹಿಂದೆ ಕ್ರಾಫ್ಟ್ ಬಿಯರ್ ಕಂಪನಿ ‘ಸ್ಟೋನ್ ಬ್ರೂಯಿಂಗ್’ 2017 ರಲ್ಲಿ ‘ಸ್ಟೋನ್ ಫುಲ್ ಸರ್ಕಲ್ ಪೇಲ್ ಆಲೆ’ ಅನ್ನು ಬಿಡುಗಡೆ ಮಾಡಿತ್ತು. ‘ಕ್ರಸ್ಟ್ ಗ್ರೂಪ್’ ಮತ್ತು ‘ಸೂಪರ್ ಲೊಕೊ ಗ್ರೂಪ್’ ನಂತಹ ಇತರ ಬ್ರೂವರಿಗಳು ಶುದ್ಧ ಒಳಚರಂಡಿ ಮರುಬಳಕೆಯ ನೀರನ್ನು ಬಳಸಿಕೊಂಡು ಕ್ರಾಫ್ಟ್ ಬಿಯರ್‌ನ ತಮ್ಮದೇ ಆದ ಆವೃತ್ತಿಯನ್ನು ಬಿಡುಗಡೆ ಮಾಡಿದ್ದವು…..