ಬೆಂಗಳೂರು:
ಇಂದು ಬೆಳ್ಳಂಬೆಳಗ್ಗೆ ACB ಭ್ರಷ್ಟ ಅಧಿಕಾರಿಗಳಿಗೆ ಶಾಕ್ ಕೊಟ್ಟಿದೆ ರಾಜ್ಯದಲ್ಲಿ 15 ಕ್ಕೂ ಹೆಚ್ಚು ಅಧಿಕಾರಿಗಳ ಮೇಲೆ ರಾಜ್ಯದ ವಿವಿಧೆಡೆ ಏಕಕಾಲಕ್ಕೆ ACBಯ ನೂರಾರು ಅಧಿಕಾರಿಗಳು 60 ಸ್ಥಳಗಳಲ್ಲಿ ರೇಡ್ ಮಾಡಿದ್ದಾರೆ. ಅಧಿಕಾರಿಗಳ ಮನೆಯಲ್ಲಿ ಕಂತೆ-ಕಂತೆ ನೋಟು, ಚಿನ್ನ, ಅಪಾರ ಪ್ರಮಾಣದ ಆಸ್ತಿ ಪತ್ರಗಳು ಪತ್ತೆಯಾಗಿದೆ…
ಸದ್ಯಕ್ಕೆ ಈ ಕೆಳಕಂಡ ಇಷ್ಟು ಅಧಿಕಾರಿಗಳು ಮೇಲೆ ರೇಡ್ ಆಗಿದೆ…!
1. ಮಂಗಳೂರು ಸ್ಮಾರ್ಟ್ ಸಿಟಿ EE ಕೆ.ಎಸ್.ಲಿಂಗೇಗೌಡ-
2. ಮಂಡ್ಯ HLBC ಎಕ್ಸ್ಕ್ಯೂಟಿವ್ ಎಂಜಿನಿಯರ್ ಕೆ.ಶ್ರೀನಿವಾಸ್
3. ದೊಡ್ಡಬಳ್ಳಾಪುರ ರೆವೆನ್ಯೂ ಇನ್ಸ್ಪೆಕ್ಟರ್ ಲಕ್ಷ್ಮೀಕಾಂತಯ್ಯ
4. ಬೆಂಗಳೂರು ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಮ್ಯಾನೇಜರ್ ವಾಸುದೇವ್
5. ಬೆಂಗಳೂರು ನಂದಿನಿ ಡೈರಿ ಜನರಲ್ ಮ್ಯಾನೇಜರ್ ಬಿ.ಕೃಷ್ಣಾರೆಡ್ಡಿ
6. ಗದಗ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ
7. ಬೈಲಹೊಂಗಲ ಸವದತ್ತಿಯ ಸಹಕಾರ ಇಲಾಖೆ ಅಭಿವೃದ್ಧಿ ಅಧಿಕಾರಿ ಎ.ಕೆ.ಮಸ್ತಿ
8. ಗೋಕಾಕ್ ಸೀನಿಯರ್ ಮೋಟಾರ್ ಇನ್ಸ್ಪೆಕ್ಟರ್ ಸದಾಶಿವ ಮರಲಿಂಗಣ್ಣನವರ್
9. ಬೆಳಗಾವಿ ಹೆಸ್ಕಾಂ ಗ್ರೂಪ್ ಸಿ ನೌಕರ ನಾತಾಜಿ ಹೀರಾಜಿ ಪಾಟೀಲ್
10. ಬಳ್ಳಾರಿಯ ರಿಟೈರ್ಡ್ ಸಬ್ ರಿಜಿಸ್ಟರ್ ಕೆ.ಎಸ್.ಶಿವಾನಂದ್
11. ಯಲಹಂಕ ಸರ್ಕಾರಿ ಆಸ್ಪತ್ರೆ ಫಿಜಿಯೋಥೆರಪಿಸ್ಟ್ ರಾಜಶೇಖರ್
12. ಬೆಂಗಳೂರು BBMP ರಸ್ತೆ ಮೂಲಸೌಕರ್ಯ ಎಫ್ಡಿಸಿ ಎಂ.ಮಾಯಣ್ಣ
13. ಬೆಂಗಳೂರು ಸಕಾಲ ಆಡಳಿತಾಧಿಕಾರಿ ಎಲ್.ಸಿ.ನಾಗರಾಜ್
14. ಯಶವಂತಪುರ ಡಿ ಗ್ರೂಪ್ ಸಿಬ್ಬಂದಿ ಜಿ.ವಿ.ಗಿರಿ
15. ಜೇವರ್ಗಿ PWD ಜ್ಯೂನಿಯರ್ ಎಂಜಿನಿಯರ್ ಎಸ್.ಎಂ.ಬಿರಾದಾರ್ ಮೇಲೆ ರೇಡ್…..