ಬೆಂಗಳೂರು:
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಐಟಿ ಕಚೇರಿಗೆ ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ತಾಯಿ ಪುಷ್ಪಲತಾ ಹಾಜರಾಗಿದ್ದಾರೆ .ಕಳೆದ ವಾರ ಐಟಿ ರೇಡ್ ಹಿನ್ನಲೆ ಯಶ್ ಮನೆಯಲ್ಲಿ ಸಿಕ್ಕಿರುವ ಒಡವೆ, ಆಸ್ತಿ ಪತ್ರಗಳ ಬಗ್ಗೆ ವಿವರ ವಿವರಣೆ ಕೊಡಲು ಆಗಮಿಸಿದ್ದಾರೆ…
ನೆನ್ನೆ ನಟ ಯಶ್ ಆಡಿಟರ್ ಕಚೇರಿಗಳಲ್ಲಿ ತಡರಾತ್ರಿವರೆಗೂ ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಯಶ್ ಆಡಿಟರ್ ಆಗಿದ್ದ ಬಸವರಾಜುಗೆ ಸೇರಿದ ಬೆಂಗಳೂರಿನ ಮೂರು ಕಚೇರಿಗಳಲ್ಲಿ ಶೋಧ ನಡೆದಿದೆ. ಶೇಷಾದ್ರಿಪುರದ ಸಿಎ ಕಚೇರಿ ಸೇರಿ ಮೂರು ಕಡೆ ಹುಡುಕಾಟ ನಡೆದಿದೆ. ದಾಳಿ ವೇಳೆ ಸಿಸಿಟಿವಿ ಡಿವಿಆರ್ ಸೇರಿ ಹಲವು ಮಹತ್ವದ ದಾಖಲೆಗಳನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.