Breaking News

ವೈರಲ್ ಆಗುತ್ತಿದೆ ಅಭಿಷೇಕ್ ತ್ರಿಪಾಠಿ ಮತ್ತು ಮಹೇಶ್ ಬಾಬು ಟ್ರೋಲ್ಸ್‌..!

ಹಳ್ಳಿ ಜನರು ಹೇಗೆಂದು ತೋರಿಸಿಕೊಟ್ಟ ಉತ್ತರ ಭಾರತೀಯರು....

SHARE......LIKE......COMMENT......

ಸಿನಿಮಾ:

ಹಲವು ವರ್ಷಗಳ ಹಿಂದೆ ಅಮೇಜಾನ್ ಪ್ರೈಮ್‌ನಲ್ಲಿ (Amazon Prime) ಪಂಚಾಯತ್ ಹೆಸರಿನ ವೆಬ್ ಸೀರಿಸ್‌ ಬಿಡುಗಡೆ ಮಾಡಲಾಗಿತ್ತು. ಹಳ್ಳಿ ಜನರ ಜೀವನ ಹೇಗಿರುತ್ತದೆ, ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾರೆ, ರಾಜಕಾರಣಿಗಳು ಮುಗ್ಧ ಮನಸ್ಸುಗಳನ್ನು ಹೇಗೆ ಬಳಸಿಕೊಳ್ಳುತ್ತಾರೆಂದು ಅದ್ಭುತವಾಗಿ ತೋರಿಸಿದ್ದಾರೆ. 90% ಸತ್ಯ ತೋರಿಸಿರುವ ಈ ಸೀರಿಸ್‌ನ ಮುಂದುವರೆಸಬೇಕು ಎಂದು ಡಿಮ್ಯಾಂಡ್‌ ಮಾಡಿದ್ದರಿಂದ, ಪಂಚಾಯತ್‌ 2ನೇ ಭಾಗವನ್ನು ಕೆಲವು ದಿನಗಳ ಹಿಂದೆ ರಿಲೀಸ್ ಮಾಡಿದ್ದಾರೆ.

ಪಂಚಾಯತ್‌ ಸಿನಿಮಾದಲ್ಲಿ ಪಂಚಾಯಿತಿ ಕಾರ್ಯದರ್ಶಿಯಾಗಿ ಬಾಲಿವುಡ್ ನಟ ಅಭಿಷೇಕ್ ತ್ರಿಪಾಠಿ (Abhishek Tripathi) ಕಾಣಿಸಿಕೊಂಡಿದ್ದಾರೆ. ಎರಡನೇ ಸೀರಿಸ್‌ ಕೂಡ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿರುವುದು ಅಭಿಷೇಕ್ ತ್ರಿಪಾಠಿ ಅವರಿಂದ ಎಂದು ಅಭಿಮಾನಿಗಳು ವಿಮರ್ಶೆ ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೆ ಟ್ರೋಲ್‌ ಪೇಜ್‌ಗಳು ಕೂಡ ಚಿತ್ರತಂಡಕ್ಕೆ ಸಾಥ್‌ ನೀಡುವುದಲ್ಲದೆ ಟಾಲಿವುಡ್ ನಟ ಮಹೇಶ್ ಬಾಬು (Mahesh Babu) ಕಾಲೆಳೆಯುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಮಹೇಶ್ ಬಾಬುಗೆ ‘ಬಾಲಿವುಡ್‌ ಸಿನಿಮಾಗಳಿಂದ ನನಗೆ ತುಂಬಾ ಆಫರ್‌ಗಳು ಬರುತ್ತದೆ ಆದರೆ ಅವರೆಲ್ಲಾ ನನಗೆ ಹಣ ಕೊಟ್ಟು ಖರೀದಿ ಮಾಡಲು ಆಗುವುದಿಲ್ಲ. ಹೀಗಾಗಿ ಸುಮ್ಮನೆ ಕಾದು ಸಮಯ ವ್ಯರ್ಥ ಮಾಡಿಕೊಳ್ಳುವುದಕ್ಕೆ ನನಗೆ ಇಷ್ಟವಿಲ್ಲ. ನನಗೆ ಸೌತ್ ಚಿತ್ರರಂಗದಲ್ಲಿ ಸಿಗುವ ಪ್ರೀತಿ ಮತ್ತು ಆಫರ್‌ ಎಲ್ಲೂ ಸಿಗುವುದಿಲ್ಲ. ಸದಾ ಸಿನಿಮಾ ಮಾಡಬೇಕು ದೊಡ್ಡ ಮಟ್ಟದಲ್ಲಿ ಹೆಸರು ಮಾಡಬೇಕು ಅಷ್ಟೇ ನನ್ನ ಗುರಿ. ನನ್ನ ಕನಸು ನನಸು ಆಗುತ್ತಿದೆ ಇದಕ್ಕಿಂತ ಸಂತೋಷ ಬೇಕಾ?’ ಎಂದು ಹೇಳಿದ್ದರು. ಹೀಗಾಗಿ ಉತ್ತರ ಭಾರತದ ಟ್ರೋಲ್‌ ಪೇಜ್‌ಗಳು ಪ್ರಿನ್ಸ್‌ನ ಟ್ರೋಲ್ ಮಾಡುತ್ತಿದ್ದಾರೆ.

‘ಹಳ್ಳಿ ಜನರು ಇರುವುದು ಹೀಗೆ, ನೀನು ಸಿನಿಮಾದಲ್ಲಿ ತೋರಿಸಿದ ಹಾಗಲ್ಲ’ ಎನ್ನುವ ಮೆಸೇಜ್ ಹಿಡಿದುಕೊಂಡು ಮಹೇಶ್‌ರನ್ನು ಟ್ರೋಲ್ ಮಾಡುತ್ತಿದ್ದಾರೆ. ಬಾಲಿವುಡ್‌ ಚಿತ್ರರಂಗದ ಬಗ್ಗೆ ಆದ ಕಾಂಟ್ರವರ್ಸಿ ಮತ್ತು ಟ್ರೋಲ್‌ಗಳ ಬಗ್ಗೆ ಮಹೇಶ್ ಕ್ಲಾರಿಟಿ ಕೊಟ್ಟರೂ ಟ್ರೋಲ್ ಅಗಲು ಕಾರಣ ಏನೆಂದು ಹುಡುಕಿದಾಗ ತಿಳಿಯಿತ್ತು ಅವರ ಸಿನಿಮಾಗಳು ಎಂದು. ಮಹೇಶ್‌ ತಮ್ಮ ಪ್ರತಿ ಸಿನಿಮಾದಲ್ಲೂ ಹಳ್ಳಿ ಜನರನ್ನು ತೋರಿಸುತ್ತಾರೆ, ಅವರ ಮಹತ್ವವನ್ನು ಸಾರುತ್ತಾರೆ ಅಲ್ಲದೆ ಅವರ ‘ಶ್ರೀಮಂತುಡು’ ಮತ್ತು ‘ಮರ್ಷಿ’ ಸಿನಿಮಾ ದೊಡ್ಡ ಫ್ಲಾಪ್‌ ನೋಡಿದೆ.

ಐಷಾರಾಮಿ ಬಿಲ್ಡಿಂಗ್‌ಗಳು ಇರುವ ಫೋಟೋ ಹಂಚಿಕೊಂಡು ‘ಮಹೇಶ್ ಬಾಬು ಪಂಚಾಯಿತಿ ಕಾರ್ಯದರ್ಶಿ ಆದರೆ ಇಡೀ ಊರನ್ನು ಹೀಗೆ ಬದಲಾಯಿಸುತ್ತಾರೆ’ ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಟ್ರೋಲ್‌ನಲ್ಲಿ ಮಹೇಶ್ ಬಾಬು ಅವರ ಹಣೆ ಮತ್ತು ಬಾಯಿ ಹಿಡಿದುಕೊಂಡು ಅಭಿಷೇಕ್‌ ‘ನೋಡಿ ಜನರು ಹೀಗೆ ಇರುತ್ತಾರೆ ನೀನು ಅಂದುಕೊಂಡ ರೀತಿಯಲ್ಲಿ ಅಲ್ಲ’ ಎಂದು ಹೇಳಿದ್ದಾರೆ. ಒಂದೆರಡು ಟ್ರೋಲ್‌ ಅಲ್ಲ, ನೂರಾರು ಟ್ರೋಲ್‌ಗಳು ಹರಿದಾಡುತ್ತಿದೆ. ಮಹೇಶ್ ಬಾಬು ಎಂಟರ್‌ ಆಗುತ್ತಿದ್ದಂತೆ ಡಬಲ್ ಟೆಕ್ಕರ್ ಬಸ್‌ನಲ್ಲಿ ಬರುವುದು, ಹಳ್ಳಿಯನ್ನು ದತ್ತು ಪಡೆದುಕೊಳ್ಳುವಾಗಲೇ ನಾನು ಬದಲಾಯಿಸುತ್ತೀನಿ ಎಂದು ಜನರಿಗೆ ಬರವಸೆ ಕೊಡುವುದು ಹೀಗೆ ಪ್ರತಿಯೊಂದು ವೈರಲ್ ಆಗುತ್ತಿದೆ.

ಮಹೇಶ್ ಬಾಬು ಸಂಭಾವನೆ:

ಬಾಲಿವುಡ್ ಮಂದಿಗೆ ತನ್ನನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಮಹೇಶ್ ಬಾಬು ಮಾತು ವೈರಲ್ ಆದ ಬೆನ್ನಲ್ಲೇ ಮಹೇಶ್ ಬಾಬು ಒಂದು ಸಿನಿಮಾಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎನ್ನುವ ಚರ್ಚೆ ಜೋರಾಗಿದೆ. ಅನೇಕ ಮಾಧ್ಯಮಗಳು ವರದಿ ಮಾಡಿದ ಪ್ರಕಾರ ನಟ, ನಿರ್ಮಾಪಕ ಮಹೇಶ್ ಬಾಬು ಸಿನಿಮಾವೊಂದಕ್ಕೆ ಬರೋಬ್ಬರಿ 60 ಕೋಟಿ ರೂಪಾಯಿ ಸಂಭಾವನೆ ಪಡೆಯತ್ತಿದ್ದರು. ಇದೀಗ ಮತ್ತೆ ಸಂಭಾವನೆ ಏರಿಸಿಕೊಂಡಿದ್ದು ಒಂದು ಚಿತ್ರಕ್ಕೆ ಮಹೇಶ್ ಬಾಬು 80 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ……