Breaking News

#MeToo ಬಿಗ್ ಬಿ ವಿರುದ್ಧ ಸಪ್ನಾ ಭವಾನಿ ಬಾಂಬ್!

ಖ್ಯಾತ ಕೇಶ ವಿನ್ಯಾಸಕಿ ಸಪ್ನಾ ಭವಾನಿ ಆರೋಪ....

SHARE......LIKE......COMMENT......

ಮುಂಬ್ಯೆ:

#MeToo ಅಭಿಯಾನದಲ್ಲಿ  ಘಟಾನುಘಟಿಗಳ ಹೆಸರು ಕೇಳಿಬರತೊಡಗಿದೆ. ಈ ಹಿಂದೆ ತಾವು ಅನುಭವಿಸಿದ ಲೈಂಗಿಕ ಕಿರುಕುಳ, ಅಸಭ್ಯ ವರ್ತನೆಗಳ ಕುರಿತಾಗಿ ಆರೋಪಿಸುತ್ತಿದ್ದಾರೆ. ಅದಕ್ಕೊಂದು ಹೊಸ ಸೇರ್ಪಡೆ ಎಂಬಂತೆ ಖ್ಯಾತ ಕೇಶ ವಿನ್ಯಾಸಕಿ ಸಪ್ನಾ ಭವಾನಿ ತನ್ನ ಟ್ವೀಟರ್ ಖಾತೆಯಲ್ಲಿ, ಅಮಿತಾಬ್ ಬಚ್ಚನ್ ವಿರುದ್ಧವೇ ತಿರುಗುಬಾಣ ಬಿಟ್ಟಿದ್ದಾರೆ.

“ಮಿ ಟೂ ಅಭಿಯಾನಕ್ಕೆ ಅಮಿತಾಬ್ ಬಚ್ಚನ್” ವ್ಯಕ್ತಪಡಿಸಿರುವ ಬೆಂಬಲದ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಸಪ್ನಾ, ಇದೊಂದು ದೊಡ್ಡ ಸುಳ್ಳು. ಸರ್  ಸಾಮಾಜಿಕ ಕಳಕಳಿಯ ಹೋರಾಟಗಾರನಾಗಿ ಗುರುತಿಸಿಕೊಂಡಿರುವ ನಿಮ್ಮ ಮುಖವಾಡ ಶೀಘ್ರವೇ ಕಳಚಿ ಬೀಳಲಿದೆ. ಅತೀ ಶೀಘ್ರದಲ್ಲಿಯೇ ನಿಮ್ಮ ಕುರಿತ ಸತ್ಯ ಬಹಿರಂಗವಾಗಲಿದೆ. ನೀವು ನಿಮ್ಮ ಉಗುರನ್ನು ಕಚ್ಚಿಕೊಳ್ಳುತ್ತಿರಬಹುದು ಎಂದು ಆಶಿಸುತ್ತೇನೆ..ಆದರೆ ಅದು ಸಾಕಾಗಲ್ಲ ಎಂದು ವ್ಯಂಗ್ಯವಾಡಿದ್ದಾರೆ…..