Breaking News

ಪ್ರಧಾನಿ ನರೇಂದ್ರ ಮೋದಿಯವರು 8ನೇ ಯೋಗಾ ದಿನಕ್ಕೆ ಮೈಸೂರಿಗೆ ಆಗಮಿಸಲಿದ್ದಾರೆ..!

ಮೈಸೂರಿನ ರೇಸ್‌ಕೋರ್ಸ್ ನಲ್ಲಿ ಕಾರ್ಯಕ್ರಮ....

SHARE......LIKE......COMMENT......

ಹಾಸನ;

ಪ್ರಧಾನಿ ನರೇಂದ್ರ ಮೋದಿಯವರು 8ನೇ ಯೋಗಾ ದಿನಕ್ಕೆ ಮೈಸೂರಿಗೆ ಆಗಮಿಸಲಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಈ ಬಗ್ಗೆ ಹಾಸನದಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಕುಟುಂಬ ಸಮೇತ ಮೋದಿ ಅವ್ರಿಗೆ ಆಹ್ವಾನ ನೀಡಿದ್ದೆ. ಈ ಹಿನ್ನೆಲೆ ಮೋದಿಜಿಯವರು ಮೈಸೂರಿಗೆ ಬರುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಮಹಾರಾಜರು ಹಾಕಿಕೊಟ್ಟ ಪರಂಪರೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮೋದಿ ಆಗಮಿಸುತ್ತಿದ್ದಾರೆ. ಮೈಸೂರಿನ ರೇಸ್‌ಕೋರ್ಸ್ ನಲ್ಲಿ ಕಾರ್ಯಕ್ರಮ ಮಾಡುವ ಉದ್ದೇಶವಿದೆ. ಅರಮನೆ ಆವರಣದಲ್ಲೂ ಕಾರ್ಯಕ್ರಮ ನಡೆಸಲು ಸೂಚಿಸಲಾಗಿದೆ. ಕಾರ್ಯಕ್ರಮಕ್ಕೆ ಒಂದೂವರೆ ಲಕ್ಷ ಯೋಗಪಟುಗಳನ್ನ ಭಾಗವಹಿಸಲು ಸಜ್ಜುಗೊಳಿಸಲಾಗಿದೆ ಎಂದು ಹೇಳಿದ್ದಾರೆ……