Breaking News

ಇದೇ ಮೊದಲ ಬಾರಿಗೆ ತಾವೇ ಆಕ್ಷನ್ ಕಟ್ ಹೇಳುತ್ತಿದ್ದಾರೆ ಪವನ್..!

ಧೀರ ಸಾಮ್ರಾಟನ ಹವಾ ಶುರು....

SHARE......LIKE......COMMENT......

ಬೆಂಗಳೂರು:

ಧೀರ ಸಾಮ್ರಾಟ್​​​​​​​’. ಪವನ್ ಕುಮಾರ್ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಚಿತ್ರ.ಇದೇ ಮೊದಲ ಬಾರಿಗೆ ತಾವೇ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಿರುತೆರೆಯಲ್ಲಿ ವಿಡಿಯೋ ಜಾಕಿಯಾಗಿ ಸಾಕಷ್ಟು ಹೆಸರು ಮಾಡಿರುವ ಪವನ್, ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ನಾಯಕನಾಗಿದ್ದ ’ಟಾಸ್’, ‘ಮಂಡ್ಯ ಸ್ಟಾರ್’, ‘ನಾಯಿಗೆರೆ’, ಕಲಾವಿದ ಮತ್ತು ಇವನೇ ಶ್ರೀನಿವಾಸ ಸೇರಿದಂತೆ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ ‘ಬೆಸುಗೆ’ ಎಂಬ ಕಿರುಚಿತ್ರ ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ಪವನ್, ಈಗ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ‘ಧೀರ ಸಾಮ್ರಾಟ್​​​​​​​’ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ಧರಿಸುತ್ತಿರುವ ಪವನ್, ಈ  ಮೂಲಕ ನಿರ್ದೇಶಕನಾಗಿಯೂ ಅದೃಷ್ಟ ಪರೀಕ್ಷೆಗಳಿದಿದ್ದಾರೆ. ಈ ಚಿತ್ರದಲ್ಲಿ ಖುದ್ದು ವಿಲನ್ ಆಗಿಯೂ ನಟಿಸುತ್ತಿದ್ದಾರೆ.

ನೃತ್ಯ ನಿರ್ದೇಶಕ – ಮುರಳಿ ಮಾಸ್ಟರ್, ಛಾಯಾಗ್ರಾಹಕರು -ವಿರೇಶ್ ಹಾಗೂ ಅರುಣ್ ಸುರೇಶ್, ಡೈಲಾಗ್ – A .R ಸಾಯಿ ರಾಮ್ ಬರೆದಿದ್ದು ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು ಭರಾಟೆ ಖ್ಯಾತಿಯ ನಿರ್ದೇಶಕ ಚೇತನ್ ಕುಮಾರ್ 3 ಹಾಡುಗಳನ್ನು, ಕವಿರತ್ನ ಡಾ. ವಿ. ನಾಗೇಂದ್ರ ಪ್ರಸಾದ್ ಒಂದು ಹಾಗೂ ಖುದ್ದು ಪವನ್ ಕುಮಾರ್ ಟೈಟಲ್ ಸಾಂಗ್​ಗೆ ಸಾಹಿತ್ಯ ಬರೆದಿದ್ದಾರೆ. ರಾಘವ್ ಸುಭಾಷ್ ಧೀರ ಸಾಮ್ರಾಟನಿಗೆ ಸಂಗೀತ ಹೆಣೆದಿದ್ದಾರೆ. ಸಹ ನಿರ್ಮಾಣ – ಪವನ್ ಕುಮಾರ್ ಮತ್ತು ಅವತಾರ ಮೀಡಿಯಾ. ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ 4 ಫೈಟ್​ಗಳಿದ್ದು, ಕೌರವ ವೆಂಕಟೇಶ್ ಸಾಹಸ ನಿರ್ದೇಶನದಲ್ಲಿ ಮೂಡಿಬರಲಿವೆ.

ಈಗಾಗಲೇ ಧೀರ ಸಾಮ್ರಾಟ್​​ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಅಣಜಿ ನಾಗರಾಜ್ ರವರು ಉತ್ತಮ ನೈತಿಕ ಬೆಂಬಲವಾಗಿದ್ದು. ಸದ್ಯ ಪೋಸ್ಟ್ ಪ್ರೊಡಕ್ಷನ್​ನಲ್ಲಿ ಚಿತ್ರತಂಡ ಬ್ಯುಸಿಯಿದೆ. ತನ್ವಿ ಪ್ರೊಡಕ್ಷನ್ ಹೌಸ್ ಬ್ಯಾನರ್​​ ಅಡಿಯಲ್ಲಿ ಗುರು ಬಂಡಿ ಧೀರ ಸಾಮ್ರಾಟನಿಗೆ ಹಣ ಹೂಡಿದ್ದಾರೆ.

ಸಂಪಾದಕ ಸತೀಶ್ ಚಂದ್ರಯ್ಯ ನನಗೆ ಹಿಂದಿನಿಂದಲೂ ಬೆಂಬಲ ನೀಡುತ್ತಿರುವ ನನ್ನ ಒಳ್ಳೆಯ ಸ್ನೇಹಿತ. ಸೋಲಿನ ಸರಪಳಿಯಿಂದ ಹೊರಗೆ ಬರಬೇಕೆಂದರೆ “ತಾಳ್ಮೆ ಮತ್ತು ಗುರಿ” ಇವೆರಡೂ ಸಂಗಾತಿಯರು – ಧೃತಿಗೆಡದೆ ಫೆವಿಕಾಲ್‌ನಂತೆ ಗಟ್ಟಿಯಾಗಿರಬೇಕುಯೆನ್ನುವ ಪವನ್ “ಗೆದ್ದೇ ಗೆಲ್ಲುವ ಸವಾಲ್” ಹಾಕಿಕೊಂಡು ಸದಾ ಒಳ್ಳೆಯದನ್ನೇ ಮಾಡು, ಯಾರಿಗೂ ಕೆಡಕುಂಟು ಮಾಡಬೇಡ ಎಂದು ಹೇಳುವ ತಮ್ಮ ಅಮ್ಮನ ಮಾತನ್ನ ಚಾಚೂ ತಪ್ಪದೆ ಪಾಲಿಸುತ್ತಿರುವ ಪವನ್ ಅಲಿಯಾಸ್ ಪಚ್ಚಿ ಮುಕ್ಕೋಟಿ ದೇವರ ಅನುಗ್ರಹದಿಂದ ಡಬ್ಬಿಂಗ್ ಕೆಲಸವನ್ನ ಮುಗಿಸಿ ರಿಲೀಸ್​​ಗೆ ಪ್ಲಾನ್ ಮಾಡಿಕೊಂಡಿದೆ.

ರಾಕೇಶ್, ಅದ್ವಿತಿ ಶೆಟ್ಟಿ, ಪವನ್ ಕುಮಾರ್, ಹರೀಶ್ ಅರಸು, ರವಿರಾಜ್, ಸಂಕಲ್ಪ್, ಶೋಬ್ರಾಜ್, ರಮೇಶ್ ಭಟ್, ಬಲರಾಜವಾಡಿ, ಮಂಡ್ಯ ಚಂದ್ರು, ನಾಗೇಂದ್ರ urs, ಮನಮೋಹನ್ ರೈ, ರವೀಂದ್ರನಾಥ್, ಶಂಕರ್ ಭಟ್, ಯತಿರಾಜ್, ಜ್ಯೋತಿ ಮುರೂರು, ಸಂಕಲ್ಪ ಪಾಟೀಲ್, ಪುಟಾಣಿಗಳದಾ ನಂದಿತಾ ಮತ್ತು ಪರಿಣಿತಾ ಸೇರಿದಂತೆ ಹಲವರು ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್​ನಲ್ಲಿ ಚಿತ್ರತಂಡ ಬ್ಯುಸಿಯಿದೆ. ಎಲ್ಲವೂ ಅಂದುಕೊಂಡಂತಾಗಿದ್ದರೆ ‘ಧೀರ ಸಾಮ್ರಾಟ್​’ ಇದೇ ಜೂನ್ ಅಥವಾ ಜುಲೈನಲ್ಲಿ ತೆರೆಗೆ ಬರಬೇಕಿತ್ತು. ಆದರೆ ಕೊರೋನಾ ಅಟ್ಟಹಾಸ ಹಾಗೂ ಲಾಕ್​ಡೌನ್​​ನಿಂದಾಗಿ ತಡವಾಗಿದ್ದು, ಸದ್ಯ ಚಿತ್ರತಂಡ ಇದೇ ವರ್ಷಾಂತ್ಯಕ್ಕೆ ರಿಲೀಸ್​​ಗೆ ಪ್ಲಾನ್ ಮಾಡಿಕೊಂಡಿದೆ.

ಬಾಲ್ಯದಿಂದಲೂ ಕಲಾರಂಗದಲ್ಲಿ ಸಕ್ರಿಯ, ಏನಾದರೂ ಸಾಧಿಸಬೇಕೆಂದು ಛಲ ತೊಟ್ಟಿರುವ ನಮ್ಮ ‘ಧೀರ ಸಾಮ್ರಾಟ್​​​​​​​’ನಿಗೆ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ಧರಿಸುತ್ತಿರುವ ಪವನ್ ಅಲಿಯಾಸ್ ಪಚ್ಚಿಗೆ ನಮ್ಮ MEDIAISM ಕಡೆಯಿಂದ All the very best…..