ಬೆಂಗಳೂರು:
ಬಂಗಾರದ ಬೆಳೆ ಬೆಳೆದಿದ್ದ ಕೃಷಿ ಇಲಾಖೆ ಜೆಡಿ ರುದ್ರೇಶಪ್ಪ ಜೈಲುಪಾಲಾಗಿದ್ದಾರೆ. ಗದಗ ಜಿಲ್ಲೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಮನೆಯಲ್ಲಿ ಎಸಿಬಿ ರೇಡ್ ವೇಳೆ ಕೋಟಿಕೋಟಿ ಸಂಪತ್ತು ಪತ್ತೆಯಾಗಿತ್ತು. ಚಿನ್ನದ ಬಿಸ್ಕೆಟ್, ಚಿನ್ನದ ಆಭರಣ, ಲಕ್ಷಾಂತರ ರೂ ನಗದು, ಶಿವಮೊಗ್ಗದಲ್ಲಿ ಎರಡು ಮನೆ, ನಾಲ್ಕು ಸೈಟು ಪತ್ತೆಯಾದ ಹಿನ್ನೆಲೆಯಲ್ಲಿ ಎಸಿಬಿ ಅರೆಸ್ಟ್ ಮಾಡಿತ್ತು. ಆದಾಯ ಮೀರಿ ಹಣ, ಆಸ್ತಿಗಳಿಸಿದ್ದ ಹಿನ್ನೆಲೆಯಲ್ಲಿ ಬ್ಯಾಂಕ್ ಬ್ಯಾಲೆನ್ಸ್, ಲಾಕರ್ ಸರ್ಚ್ ಮಾಡಲಾಗಿದೆ. ಜಡ್ಜ್ ಮುಂದೆ ರುದ್ರೇಶಪ್ಪನ ಹಾಜರುಪಡಿಸಿದ್ದು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ…..