ಸಿನಿಮಾ:
ಸಮಂತಾ ಒಂದಲ್ಲ ಒಂದು ಸುದ್ದಿಯಲ್ಲಿ ಸೌಂಡ್ ಮಾಡ್ತಾನೆ ಇರ್ತಾರೆ. ಈಗ ಮತ್ತೆ ಹಸೆಮಣೆ ಏರ್ತಾರೆ ಅನ್ನೋ ಸುದ್ದಿ ಟಾಲಿವುಡ್ನಲ್ಲಿ ಜೋರಾಗಿ ಸದ್ದು ಮಾಡ್ತಿದೆ. ಸಮಂತಾ ಮದುವೆ ಸುದ್ದಿ ಚರ್ಚೆ ಆಗಲು ಕಾರಣ ಇತ್ತೀಚಿಗೆ ನಟಿ ಶೇರ್ ಮಾಡಿಕೊಂಡ ಹುಡುಗನ ಪೋಸ್ಟ್. ಸಮಂತಾ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಒಬ್ಬ ವ್ಯಕ್ತಿಯ ಫೋಟೋ ಶೇರ್ ಮಾಡಿ, ಬರ್ತ್ಡೇ ವಿಶ್ ಮಾಡಿದ್ದಾರೆ. ಇದ್ರ ಜೊತೆಗೆ ಮೈ ಬೇಬಿ ಬಾಯ್ ಐ ಲವ್ ಯೂ ಅಂತ ಬರೆದುಕೊಂಡಿದ್ದಾರೆ ಆತ ಪ್ರೀತಮ್ ಜುಕಲ್ಕರ್.. ಈತ ಇಂಡಿಯನ್ ಇಂಡಸ್ಟ್ರಿಯ ಸ್ಟೈಲಿಶ್ ಫ್ಯಾಷನ್ ಡಿಸೈನರ್.. ರಶ್ಮಿಕಾ, ಅಲ್ಲು ಅರ್ಜುನ್, ಪೃಥ್ವಿರಾಜ್, ರಮ್ಯಾ ಕೃಷ್ಣ, ರಾಶಿ ಖನ್ನಾ, ಬಾಲಿವುಡ್ ನಾಯಕಿಯರಾದ ಅನುಷ್ಕಾ ಶರ್ಮಾ, ಕತ್ರಿನಾ ಕೈಫ್, ಅಜಯ್ ದೇವಗನ್ ಸೇರಿದಂತೆ ಅನೇಕ ಸಾಕಷ್ಟು ಸೆಲೆಬ್ರಿಟಿಗಳಿಗೆ ಪ್ರೀತಮ್ ಜುಕಲ್ಕರ್ ಫ್ಯಾಷನ್ ಡಿಸೈನರ್ಆಗಿದ್ದಾರೆ.
ಅಂದ್ಹಾಗೆ ಸಮಂತಾ ಜೊತೆ ಪ್ರೀತಮ್ ಜುಕಲ್ಕರ್ ಸಖತ್ ಕ್ಲೋಸ್ ಆಗಿದ್ದಾರೆ.. ಅಲ್ಮೋಸ್ಟ್ ಸ್ಯಾಮ್ ಎಲ್ಲಾ ಪ್ರೋಗ್ರಾಮ್ಗಳಿಗೂ ಪ್ರೀತಮ್ ಜುಕಲ್ಕರ್ ಫ್ಯಾಷನ್ ಡಿಸೈನರ್.. ಆಗಾಗ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ತಾರೆ.. ಪ್ರೀತಮ್ ವಯಸ್ಸಿನಲ್ಲಿ ಸಮಂತಾಕ್ಕಿಂತ ಚಿಕ್ಕವರು.. ಆದ್ರೂ ಕೂಡ ಸಮ್ಮು ಬೇಬಿಗೆ ಪ್ರೀತಮ್ ಅಂದ್ರೆ ಬೇಬಿ ಬಾಯ್ ಇದ್ದಂತೆ.. ಸೋ ಇದೀಗ ಈ ಬೇಬಿ ಬಾಯ್ ಪ್ರೀತಮ್ ಜುಕಲ್ಕರ್ಗೆ ಬರ್ತ್ಡೇ ವಿಶ್ ಮಾಡಿ ಪೋಸ್ಟ್ ಹಾಕಿರೋದೇ ಸೋಷಿಯಲ್ ಮೀಡಿಯಾ ಸಾಮ್ರಾಜ್ಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿರೋದು.. ಮೂಲಗಳ ಪ್ರಕಾರ ಇವರಿಗೆ ತಕ್ಕಂತಹ ಹುಡುಗ ಸಿಕ್ಕಿದ್ರೆ ಖಂಡಿತಾ ಮದುವೆಯಾಗ್ತಾರಂತೆ.. .. ಯಾವ ಹುಡುಗನ ಜೊತೆ ಸಮಂತಾ ಕಲ್ಯಾಣವಾಗುತ್ತೆ ಅನ್ನೋದನ್ನ ಸಮ್ಮು ಬೇಬಿ ಅಧಿಕೃತ ಮಾಡುವವರೆಗೂ ವೇಟ್ ಮಾಡಲೇಬೇಕು.