Breaking News

ಪುನೀತ್ ಅವರು ಕೊನೆಯಬಾರಿ ಆಯುಧ ಪೂಜೆ ಆಚರಿಸಿದ ಫೋಟೋ ವೈರಲ್..!

ಅಪ್ಪು ಹಳೆಯ ಫೋಟೋ ನೋಡಿ ಅಭಿಮಾನಿಗಳು ಭಾವುಕ....

SHARE......LIKE......COMMENT......

ಬೆಂಗಳೂರು:

ಪುನೀತ್ ರಾಜ್​ ಕುಮಾರ್ ಅವರು ಕೊನೆಯಬಾರಿ ಆಯುಧ ಪೂಜೆ ಆಚರಿಸಿದ ಫೋಟೋ ಈಗ ವೈರಲ್ ಆಗಿದೆ. ಇದರಲ್ಲಿ ಪತ್ನಿ ಅಶ್ವಿನಿ ಜೊತೆ ಕಾಣಿಸಿಕೊಂಡಿದ್ದಾರೆ ಅಪ್ಪು. ಎಲ್ಲಾ ಕಡೆಗಳಲ್ಲಿ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿದೆ. ರಾಜ್ಯದಲ್ಲಿಯೂ ಅದ್ಧೂರಿಯಾಗಿ ಆಯುಧ ಪೂಜೆ ಆಚರಿಸುತ್ತಿದ್ದಾರೆ. ಈ ಸಂದರ್ಭ ಅಪ್ಪು ಫ್ಯಾನ್ಸ್ ಭಾವುಕರಾಗಿದ್ದಾರೆ. ಪುನೀತ್ ಅವರು ಕೊನೆಯ ಬಾರಿ ಆಯುಧ ಪೂಜೆ ಆಚರಿಸಿದ ಫೋಟೋಗಳು ಈಗ ವೈರಲ್ ಆಗಿವೆ. ಕಳೆದ ವರ್ಷ ವಜ್ರೇಶ್ವರಿ ಕಛೇರಿಯಲ್ಲಿ ಆಯುಧ ಪೂಜೆ ಮಾಡಿದ್ದ ಅಪ್ಪು ಅವರು ಸಿಬ್ಬಂದಿ ಜೊತೆ ತೆಗೆಸಿಕೊಂಡಿದ್ದ ಫೋಟೋ ಈಗ ವೈರಲ್ ಆಗುತ್ತಿದೆ.ಮಡದಿ ಅಶ್ವಿನಿ ಜೊತೆಗೂಡಿ ವಿಜಯ ದಶಮಿ ಆಚರಿಸಿದ್ದ ಅಪ್ಪು ಆಯುಧ ಪೂಜೆ ದಿನ ಚೆಕ್ಸ್ ಶರ್ಟ್ ಧರಿಸಿ ಸಿಬ್ಬಂದಿ ಜೊತೆಗೆ ನಿಂತು ಗ್ರೂಪ್ ಫೋಟೋಗೆ ಪೋಸ್ ಕೊಟ್ಟಿದ್ದರು.

ಆಯುಧ ಪೂಜೆ ನಂತರ ಸಿಬ್ಬಂದಿಗಳ ಜೊತೆ ಫೋಟೊ ತೆಗೆಸಿಕೊಂಡಿದ್ದ ಅಪ್ಪು ಅವರ ಹಳೆಯ ಫೋಟೋ ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ. ಫೋಟೋಗಳನ್ನು ಈಗ ಅವರ ಅಭಿಮಾನಿಗಳು ವಾಟ್ಸಾಪ್ ಹಾಗೂ ಇತರ ಸೋಷಿಯಲ್ ಮೀಡಿಯಾ ಫ್ಲಾರ್ಟ್​ಫಾರ್ಮ್​ನಲ್ಲಿ ಶೇರ್ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಅಪ್ಪು ಅಭಿಮಾನಿಗಳು ಈ ಬಾರಿ ಪುನೀತಣ್ಣ ಇಲ್ಲ ಎನ್ನುವ ನೋವಿನಲ್ಲಿದ್ದಾರೆ……