Breaking News

ದ ಸೂಟ್ ಚಿತ್ರದ ಪೋಸ್ಟರ್ ರಿಲೀಸ್..!

ಡಾ||ವಿ.ನಾಗೇಂದ್ರಪ್ರಸಾದ್ ಅವರಿಂದ ಅನಾವರಣ

SHARE......LIKE......COMMENT......

ಸಿನಿಮಾ:..
ಒಂದು ಸೂಟಿನ ಕಥೆ .ಕನ್ನಡದಲ್ಲಿ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳು ಹೆಚ್ಚು ನಿರ್ಮಾಣವಾಗುತ್ತಿದೆ. ಅಂತಹುದೇ ಉತ್ತಮ ಕಂಟೆಂಟ್ ವುಳ್ಳ “ದ ಸೂಟ್” ಚಿತ್ರದ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಯಿತು. ಸಾಹಿತಿ ಡಾ||ವಿ.ನಾಗೇಂದ್ರ ಪ್ರಸಾದ್ ಹಾಗೂ ನೀರ್ ದೋಸೆ ನಿರ್ದೇಶಕರಾದ ವಿಜಯ್ ಪ್ರಸಾದ್ ಮತ್ತು ನಿರ್ಮಾಪಕರು ನಾಗೇಶ್ ಕುಮಾರ್ ಈ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಶುಭ ಕೋರಿದರು.
ಈ ಚಿತ್ರದಲ್ಲಿ ನಾವು ಧರಿಸುವ ಸೂಟೇ ಪ್ರಮುಖ ಪಾತ್ರಧಾರಿ. ಸೂಟ್ ಗೆ ಅದರದೇ ಆದ ವಿಶೇಷತೆ ಇದೆ. ಮದುವೆ, ಮೀಟಿಂಗ್ ಮುಂತಾದ ಕಡೆ ಸೂಟ್ ಧರಿಸಿದರೆ, ಒಂದು ವಿಶೇಷ ಕಳೆ. ಎಷ್ಟೋ ವಿವಾಹಗಳು ಸೂಟು – ಬೂಟು ಕೊಡಲಿಲ್ಲ ಅಂತ ಮದುವೆ ನಿಂತದ್ದು ಇದೆ. ಕುವೆಂಪು, ಸರ್ ಎಂ ವಿಶ್ವೇಶ್ವರಯ್ಯ, ಅಂಬೇಡ್ಕರ್ . ಕಸ್ತೂರಿ ನಿವಾಸದ ಅಣ್ಣಾವ್ರು. ವಿಷ್ಣುವರ್ಧನ್. ಪುನೀತ್ ರಾಜ್ ಕುಮಾರ್ ಮುಂತಾದ ಗಣ್ಯರು ಸೂಟ್ ಧರಿಸುತ್ತಿದ್ದುದ್ದನ್ನು ನಾವು ನೋಡಿದ್ದೇವೆ ಹಾಗೂ ಕೇಳಿದ್ದೇವೆ . ಇಂತಹ ತನ್ನದೇ ಆದ ಗತ್ತು ಇರುವ “ಸೂಟ್” ಬಗ್ಗೆ ನಮ್ಮ ಸಿನಿಮಾ ಕಥೆ ಇದೆ. ಮಾಲತಿ ಬಿ.ರಾಮಸ್ವಾಮಿ ಅವರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಆರು ಹಾಡುಗಳಿಗೆ ಕಿರಣ್ ಶಂಕರ್ ಸಂಗೀತ ನೀಡಿದ್ದಾರೆ‌. ಕಿರಣ್ ಹಂಪಾಪುರ ನಮ್ಮ ಚಿತ್ರದ ಛಾಯಾಗ್ರಹಕರು ಹಾಗೂ ಸುರೇಶ್ ಡಿ.ಹೆಚ್ ಸಂಕಲನಕಾರು ಎಂದು “ದ ಸೂಟ್” ಚಿತ್ರದ ಬಗ್ಗೆ ನಿರ್ದೇಶಕ ಎಸ್ ಭಗತ್ ರಾಜ್ ಸಂಪೂರ್ಣ ಮಾಹಿತಿ ನೀಡಿದ್ದಾರೆ.

“ದ ಸೂಟ್” ಚಿತ್ರದ ಶೀರ್ಷಿಕೆ ನೊಂದಾಯಿಸಿ ಕನ್ನಡ ಚಿತ್ರರಂಗದ ನಿರ್ದೇಶಕರು, ಚಿತ್ರ ಸಾಹಿತಿಗಳು ಮತ್ತು ಸಾಹಿತಿಗಳು “ದ ಸೂಟ್” ಟೈಟಲ್ ಮೇಲೆ ಕವನಗಳು ಬರೆದಿದ್ದಾರೆ . ಅದು ಪುಸ್ತಕ ರೂಪದಲ್ಲಿ ಹೊರಬಂದಿದೆ. ಕಾಶಿನಾಥ್. ಪುಟ್ಟಣ್ಣ ಕಣಗಾಲ್ ಅವರ ಪತ್ನಿ ನಾಗಲಕ್ಷ್ಮಿ, ಪತ್ರಕರ್ತ ಜೋಗಿ, ವಿ.ಮನೋಹರ್ ಮುಂತಾದ ಗಣ್ಯರು ಈ ಪುಸ್ತಕ ಬಿಡುಗಡೆಗೊಳಿಸಿ ಶುಭ ಕೋರಿದ್ದರು. ಆನಂತರ ಚಿತ್ರಿಕರಣ ಪ್ರಾರಂಭವಾಯಿತು .