ಆಟೋ ವರ್ಲ್ಡ್:
ಭಾರತೀಯ ಮಾರುಕಟ್ಟೆಯಲ್ಲಿ ಬಹುದೊಡ್ಡ ಹೆಸರು ಹೊಂದಿರುವ ಟೋಯೋಟಾ ಕಂಪನಿಯು ಅಯ್ಗೋ ಎಕ್ಸ್ ಎಂಬ ಹೊಸ ಸಬ್ ಕಾಂಪಾಕ್ಟ್ ಕಾರನ್ನು ಅನಾವರಣಗೊಳಿಸಿದೆ. ಈ ಅಯ್ಗೋ ಎಕ್ಸ್ ಟಾಟಾ ಕಂಪನಿಯ ಪಂಚ್ ಸೇರಿದಂತೆ ಮೈಕ್ರೋ ಎಸ್‌ಯುವಿಗಲಿಗೆ ತೀವ್ರ ಸ್ಪರ್ಧೆಯನ್ನು ನೀಡಲಿವೆ.
ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಮೈಕ್ರೋ ಎಸ್‌ಯುವಿಗಳಿಗೆ ಬೇಡಿಕೆ ಹೆಚ್ಚುತ್ತಿದ್ದಂತೆ ಬಹುತೇಕ ಕಂಪನಿಗಳು ಇದೇ ಸೆಗ್ಮೆಂಟ್‌ನಲ್ಲಿ ತಮ್ಮ ಹೊಸ ಬ್ರ್ಯಾಂಡ್ ಕಾರುಗಳನ್ನು ಪರಿಚಯಿಸುತ್ತಿವೆ. ಟಾಟಾ (Tata) ಕಂಪನಿ ತನ್ನ ಪಂಚ್ (Punch) ಮೂಲಕ ಭರ್ಜರಿ ಎಂಟ್ರಿ ಕೊಟ್ಟಿದ್ದರೆ, ಪಂಚ್‌ಗೆ ಠಕ್ಕರ್ ನೀಡಲು ಟೋಯೋಟಾ (Toyota) ಕಂಪನಿ ಅಯ್ಗೊ ಎಕ್ಸ್ (Aygo X) ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಹಾಕಲಿದೆ. ಈ ಹೊಸ ಸಬ್ ಕಾಂಪಾಕ್ಟ್ ಕ್ರಾಸ್‌ಓವರ್ ಎಸ್‌ಯುವಿ ಸ್ಟೈಲ್ ಹೊಂದಿರುವ ಅಯ್ಗೊ ಎಕ್ಸ್ (Aygo X) ಕಾರನ್ನು ಅನಾವರಣ ಮಾಡಿರುವ ಯೋಟೋಟಾ, ಇತ್ತೀಚೆಗೆ ಲಾಂಚ್ ಆಗಿ ಭರ್ಜರಿ ಮಾರಾಟ ಕಾಣುತ್ತಿರುವ ಟಾಟಾದ ಪಂಚ್‌ಗೆ ಪೈಪೋಟಿ ನೀಡುವ ಸಾಧ್ಯತೆ ಇದೆ. ಜತೆಗೆ ಬೇರೆ ಕಂಪನಿಯು ಮೈಕ್ರೋ ಎಸ್‌ಯುವಿಗಳಿಗೂ ಪೈಪೋಟಿ ನೀಡುವ ಸಾಮರ್ಥ್ಯವನ್ನು ಹೊಂದಿದೆ.
ಅಯ್ಗೊ ಎಕ್ಸ್ ಸಬ್ ಕಾಂಪಾಕ್ಟ್ ಎಸ್‌ಯುವಿಯನ್ನು ಟೋಯೋಟಾ ಜಿಎ-ಬಿ (GA-B) ಪ್ಲಾಟ್‌ಫಾರ್ಮ್‌ನಲ್ಲಿ ಉತ್ಪಾದಿಸಲಿದೆ. ಇದೇ ಪ್ಲಾಟ್‌ಫಾರ್ಮ್‌ನಲ್ಲಿ ಟೋಯೋಟಾ ಯಾರೀಸ್ (Yaris) ಮತ್ತು ಟೋಯೋಟಾ ಯಾರಿಸ್ ಕ್ರಾಸ್ಓವರ್ (Yaris Crossover) ನಿರ್ಮಾಣವಾಗುತ್ತಿದ್ದವು. ಟೋಯೋಟಾ ಅಯ್ಗೋ ಎಕ್ಸ್ (Aygo X) 3700 ಎಂಎಂ ಉದ್ದ ಮತ್ತು 1740 ಎಂಎಂ ಅಗಲ ಮತ್ತು 1510 ಎಂಎಂ ಎತ್ತರವಿದೆ. ಟಾಟಾ ಕಂಪನಿಯ ಪಂಚ್ ಹೋಲಿಸಿದರೆ ಉದ್ದ, ಅಗಲ ಮತ್ತು ಎತ್ತರದಲ್ಲಿ ಕೊಂಚ ಕಡಿಮೆ ಎಂದು ಹೇಳಬಹುದು.
ಅನಾವರಣಗೊಂಡಿರುವ ಟೋಯೋಟಾ ಅಯ್ಗೋ ಎಕ್ಸ್ (Aygo X) ಟು ಟೋನ್ಡ್ ಹೊರಂಗಾಣ ಬಣ್ಣಗಳನ್ನು ಹೊಂದಿದೆ. ಇದಿರಂದಾಗಿ ಕಾರಿಗೆ ರಗ್ಡ್ ಲುಕ್ ಬಂದಿದೆ. ಡುಯಲ್ ಟೋನ್ಡ್ ಕಲರ್ ಸ್ಕೀಮ್ ಅನ್ನು ಸಾಮಾನ್ಯವಾಗಿ ಇತರ ಕಾರುಗಳಿಗೆ ಬಳುವುದಕ್ಕಿಂತಲೂ ತುಂಬ ಭಿನ್ನವಾಗಿ ಬಳಸಿರುವುದರಿಂದ ಒಟ್ಟಾರೆ ಅದರ ಲುಕ್ ಡಿಫರೆಂಟ್ ಆಗಿ ಕಾಣುತ್ತಿದೆ. ಅಯ್ಗೋ ಎಕ್ಸ್ ಕಾರಿನ ಸಿ ಪಿಲ್ಲರ್ (C-Pillar) ಬ್ಲ್ಯಾಕ್ ಟೋನ್‌ನಲ್ಲಿದ್ದರೆ, ಉಳಿದ ಕಾರಿನ ಭಾಗ ನಾಲ್ಕು ಬಣ್ಣಗಳಲ್ಲಿ ಆಯ್ಕೆಯಲ್ಲಿ ದೊರೆಯಲಿದೆ. ಅಂದರೆ, ಕೆಂಪು (Red), ನೀಲಿ (Blue), ಕಾರ್ಡ್‌ಮಮ್ ಗ್ರೀನ್ (Cardamom Green) ಮತ್ತು Beige ಬಣ್ಣಗಳಲ್ಲಿ ಇರಲಿದೆ.
ಟೋಯೋಟಾ ಅಯ್ಗೋ ಎಕ್ಸ್ ಮುಂಭಾಗದಲ್ಲಿ ಬೃಹತ್ ಗ್ರೀಲ್, ಫಾಗ್ ಲ್ಯಾಂಪ್ಸ್, ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಹೆಡ್‌ಲೈಟ್ಸ್‌ಗಳನ್ನು ಹೊಂದಿದೆ. ಬ್ರೈಟ್ ಲೈಟ್‌ನೊಂದಿಗೆ ಸುತ್ತುವರಿದ ಇಂಡಿಕೇಟರ್‌ಗಳನ್ನು ಗಮನಿಸಬಹುದು. ಬೆಣೆಯಾಕಾರದ ರೂಫ್ ಕಾರಿಗೆ ಸ್ಪೋರ್ಟಿವ್ ಲುಕ್ ಒದಗಿಸಿದೆ. 18 ಇಂಚಿನ್ ಚಕ್ರಗಳು ಒಟ್ಟಾರೆ ಕಾರಿನ ಸ್ಪೋರ್ಟಿವ್ ಲುಕ್ ಅನ್ನು ಇಮ್ಮಡಿಗೊಳಿಸಿವೆ. ಹೊರ ವಿನ್ಯಾಸದಲ್ಲಿ ಈ ಅಯ್ಗೋ ಎಕ್ಸ್ (Aygo X) ಕಾರು ನೋಡಲು ಸೂಪರ್ ಆಗಿದೆ ಮತ್ತು ಮೊದಲ ನೋಟದಲ್ಲೇ ನಿಮ್ಮನ್ನು ಸೆಳೆಯುತ್ತದೆ.
ಕಾರಿನ ಒಳಾಗಂಣವು ಸಾಕಷ್ಟು ಆಕರ್ಷಕವಾಗಿದೆ. 9 ಇಂಚ್ ಡಿಜಿಯಲ್ ಡ್ರೈವರ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಗೆ ಸಪೋರ್ಟ್ ಮಾಡಬಲ್ಲ ಇನ್ಫೋಟೈನ್‌ಮೆಂಟ್ ಕೂಡ ಇದೆ. ಸಾಕಷ್ಟು ಅತ್ಯಾಧುನಿಕ ಫೀಚರ್‌ಗಳನ್ನು ಗಮನಿಸಬಹುದಾಗಿದೆ. ಜೊತೆಗೆ, ಬೂಟ್ ಸ್ಪೇಸ್ ಕೂಡ ಸಾಕಷ್ಟಿದೆ. 231 ಲೀಟರ್‌ನಷ್ಟು ಸ್ಪೇಸ್ ದೊರೆಯುತ್ತದೆ.
ಇನ್ನು ಎಂಜಿನ್ ಬಗ್ಗ ಹೇಳುವುದಾದರೆ, ಟೋಯೋಟಾ ಅಯ್ಗೋ ಎಖ್ಸ್ 1.0 ಲೀಟರ್ ಮೂರು ಸಿಲಿಂಡರ್ ಎಂಜಿನ್‌ಗಳೊಂದಿಗೆ ಬರುತ್ತದೆ. ಈ ಎಂಜಿನ್ ಗರಿಷ್ಟ 72 ಎಚ್‌ಪಿ ಮತ್ತು 205 ಎನ್ ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಸಿವಿಟಿ ಗೇರ್ ಬಾಕ್ಸ್ ಇರಲಿದೆ. ಟೋಯೋಟಾ ಅಯ್ಗೋ ಎಕ್ಸ್, ಟಾಟಾ ಕಂಪನಿಯ ಪಂಚ್, ಮಾರುತಿಯ ಬಲೆನೋ ಆಧರಿತ ಮೈಕ್ರೋ ಎಸ್‌ಯುವಿ, ಹುಂಡೈನ ಕ್ಯಾಸ್ಪರ್‌ಗೆ ಪೈಪೋಟಿ ನೀಡುವ ಸಾಧ್ಯತೆ ಇದೆ……
Variety is the spice of life! 🌶️🌶️🌶️🌶️ Introducing the all-new Toyota #AygoX. What would you like to know? pic.twitter.com/q5GaPA4e4g
— ToyotaUK (@ToyotaUK) November 5, 2021