Breaking News

ಬೆಲೆ ಏರಿಕೆಯ ಬಿಸಿ; ಅಡುಗೆ ಅನಿಲದ ದರ ಮತ್ತೆ ಏರಿಕೆ..!

ಜನಸಾಮಾನ್ಯರಿಗೆ ಬರೆ ಮೇಲೆ ಬರೆ....

SHARE......LIKE......COMMENT......

ಬೆಂಗಳೂರು:

ಜನಸಾಮಾನ್ಯರಿಗೆ ಬರೆ ಮೇಲೆ ಬರೆ ಬೀಳುತ್ತಾ ಇದೆ. ಬೆಲೆ ಏರಿಕೆ (Price Hike) ಬಿಸಿಗೆ ಸುಟ್ಟು ಸಂಕಷ್ಟಪಡುವಂತೆ ಆಗಿದೆ. ಯಾಕೆಂದ್ರೆ ಒಂದೆಡೆ ಅಕಾಲಿಕ ಮಳೆಯಿಂದ (Rain) ಭಾರೀ ಅವಾಂತರ ಸೃಷ್ಟಿಯಾಗಿದೆ. ಇದರ ಜೊತೆ ತರಕಾರಿ (Vegetables) ಸೇರಿದಂತೆ ಅಗತ್ಯ ಆಹಾರ ಸಾಮಗ್ರಿಗಳ (Food Items) ಬೆಲೆ ಏರುತ್ತಿದೆ. ಇವೆಲ್ಲ ಸಾಲದು ಅಂತ ಇದೀಗ ದಿನ ಬಳಕೆಗೆ ಅಗತ್ಯವಾಗಿ ಬೇಕಾದ ಅಡುಗೆ ಅನಿಲದ (Cooking Gas) ಬೆಲೆ ಏರಿಕೆಯಾಗಿದೆ. ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳು (LPG Cylinder) ಪ್ರತಿ ಕಿಲೋಗ್ರಾಂಗೆ 3.50 ರೂ.ಗಳಷ್ಟು ದುಬಾರಿಯಾಗಿದೆ, ಈಗ ದೇಶದಾದ್ಯಂತ ಬೆಲೆ 1000 ರೂ. ವಾಣಿಜ್ಯ ಸಿಲಿಂಡರ್ (Commercial Cylinder) ಬೆಲೆ ಪ್ರತಿ ಕಿಲೋಗ್ರಾಂಗೆ 8 ರೂಪಾಯಿಗಳಷ್ಟು ಏರಿಕೆಯಾಗಿದೆ.

ಅಡುಗೆ ಅನಿಲದ ಬೆಲೆ ಏರಿಕೆ

ಜನಸಾಮಾನ್ಯರಿಗೆ ಅಗತ್ಯವಾಗಿ ಬೇಕಾದ ದಿನಬಳಕೆಯ ಅಡುಗೆ ಅನಿಲ ಬೆಲೆ ಮತ್ತೆ ಏರಿಕೆಯಾಗಿದೆ. 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 3.5 ರೂಪಾಯಿ ಏರಿಕೆಯಾಗಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ. ಈ ಮೂಲಕ ಇಂದಿನಿಂದ ಗೃಹಬಳಕೆಯ ಸಿಲಿಂಡರ್ ಬೆಲೆ 1003 ರೂಪಾಯಿ ಆಗಿದೆ. ಈ ಮೊದಲು 999.50 ರೂಪಾಯಿಗಳಿದ್ದವು.

ಏಲ್ಲಾ ನಗರಗಳಲ್ಲಿ ಗ್ಯಾಸ್ ಬೆಲೆ ಏರಿಕೆ

ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾದ ನಂತರ ಇಂದಿನಿಂದ ದೆಹಲಿ ಮತ್ತು ಮುಂಬೈನಲ್ಲಿ 14.2 ಕೆಜಿ ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ 1003 ರೂ., ಕೋಲ್ಕತ್ತಾದಲ್ಲಿ 1029 ರೂ., ಚೆನ್ನೈನಲ್ಲಿ 1018.5 ರೂ.ಗೆ ಏರಿಕೆಯಾಗಿದೆ.

ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯೂ ಏರಿಕೆ

ಇನ್ನು ಇದರೊಂದಿಗೆ ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಬೆಲೆಯನ್ನು 8 ರೂಪಾಯಿ ಹೆಚ್ಚಿಸಲಾಗಿದೆ. ಈಗ, 14.2 ಕೆಜಿ ಅಡುಗೆ ಅನಿಲ ಸಿಲಿಂಡರ್‌ ಬೆಲೆ ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿ 1000 ರೂಪಾಯಿ ಗಡಿಯನ್ನು ಮೀರಿದೆ. ಹೊಸ ದರದನ್ವಯ ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ 2354 ರೂ., ಕೋಲ್ಕತ್ತಾದಲ್ಲಿ 2454 ರೂ., ಮುಂಬೈನಲ್ಲಿ 2306 ರೂ. ಮತ್ತು ಚೆನ್ನೈನಲ್ಲಿ 2507 ರೂ. ಆಗಿರಲಿದೆ.

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಿಂದ ಶಾಕ್

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಾದ ಹಿನ್ನೆಲೆಯಲ್ಲಿ ಭಾರತ ಸರ್ಕಾರವೂ ಬೆಲೆ ಹೆಚ್ಚಿಸಲು ನಿರ್ಧರಿಸಿದೆ. ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್​ ಬೆಲೆಯು 1,000 ರೂಪಾಯಿ ದಾಟಿದೆ. ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಸಿಲಿಂಡರ್ ಬೆಲೆ 1,000 ರೂಪಾಯಿಗೂ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಪ್ರಸ್ತುತ ಗೃಹಬಳಕೆ ಸಿಲಿಂಡರ್ 1,006 ರೂಪಾಯಿಗೆ ಮಾರಾಟವಾಗುತ್ತಿದೆ. ಕೊಲ್ಕತ್ತಾದಲ್ಲಿ 1,029 ರೂಪಾಯಿ, ಚೆನ್ನೈನಲ್ಲಿ 1,058ಕ್ಕೆ ಮಾರಾಟವಾಗುತ್ತಿದೆ. ಈ ಹಿಂದೆ ಮೇ 7ರಂದು ಎಲ್​ಪಿಜಿ ಸಿಲಿಂಡರ್​ ಬೆಲೆಯನ್ನು 50 ರೂಪಾಯಿ ಹೆಚ್ಚಿಸಲಾಗಿತ್ತು.

ಒಂದೇ ತಿಂಗಳಲ್ಲಿ ಎರಡೆರಡು ಬಾರಿ ಬೆಲೆ ಏರಿಕೆ

ಈ ಹಿಂದೆ ಮೇ 7 ರಂದು ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ನಲ್ಲಿ 50 ರೂ.ಗಳಷ್ಟು ಏರಿಕೆಯಾಗಿತ್ತು. ಇದಾದ ನಂತರ ಗೃಹೋಪಯೋಗಿ ಗ್ಯಾಸ್ ಸಿಲಿಂಡರ್ ಬೆಲೆ 999.50 ರೂ.ಗೆ ತಲುಪಿತ್ತು. ಈ ಹಿಂದೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಮೇ 7 ರಂದು ಪ್ರತಿ ಸಿಲಿಂಡರ್‌ಗೆ 10 ರೂಪಾಯಿ ಹೆಚ್ಚಿಸಲಾಗಿತ್ತು. ಇದೀಗ ಮತ್ತೆ ಗ್ಯಾಸ್ ಬೆಲೆ ಏರಿಕೆಯಾಗಿದ್ದು, ಜನ ಸಾಮಾನ್ಯರಿಗೆ ಹೊರೆಯಾದಂತಾಗಿದೆ……