Breaking News

ನಿಮ್ಮ ವಾಟ್ಸಾಪ್ ಬ್ಯಾನ್ ಆಗುತ್ತೆ ಹುಷಾರ್..!

ಕೋಮುದ್ವೇಷದ ಸಂದೇಶ ಕಳಿಸಿದ್ರೆ ಅಕೌಂಟ್ ಹೊಗೆ....

SHARE......LIKE......COMMENT......

ಬೆಂಗಳೂರು:
ಕೋಮುದ್ವೇಷದ ಸಂದೇಶ , ಸುಳ್ಳು ಮಾಹಿತಿ ಕಳಿಸಿದ್ರೆ ವಾಟ್ಸಾಪ್​ ಖಾತೆಗಳು ಬಂದ್ ಆಗಲಿವೆ. ಏಪ್ರಿಲ್​​​​​​ ಒಂದೇ ತಿಂಗಳಲ್ಲಿ ಭಾರತದಲ್ಲಿ 16 ಲಕ್ಷಕ್ಕೂ ಅಧಿಕ ವಾಟ್ಸಾಪ್​​​ ಖಾತೆಗಳನ್ನು ನಿಷೇಧಿಸಲಾಗಿದೆ.ವಾಟ್ಸಾಪ್​​​​ ಬಳಕೆದಾರರೇ ಹುಷಾರ್​​​. ಸೋಷಿಯಲ್​ ಮೀಡಿಯಾ ನೀತಿಗಳನ್ನು ಉಲ್ಲಂಘಿಸಿದರೆ ನಿಮ್ಮ ಅಕೌಂಟ್ ಕಂಪ್ಲೀಟ್ ಬ್ಯಾನ್‌ ಆಗಲಿದೆ,ಭಾರತದಲ್ಲಿ 20 ಲಕ್ಷಕ್ಕೂ ಅಧಿಕ ವಾಟ್ಸಾಪ್​​ ಖಾತೆಗಳನ್ನು ನಿಷೇಧಿಸಲಾಗಿದೆ. ಹೊಸಐಟಿ ನೀತಿ ಜಾರಿಗೆ ಬಂದ ನಂತರ ಪ್ರತಿ ತಿಂಗಳೂ ದೂರು ಸಂಬಂಧಿಸಿ ಕಂಪನಿ ಕ್ರಮ ಕೈಗೊಳ್ತಿದೆ.

ಡೆಟಾ ವಿಜ್ಞಾನಿಗಳು, ತಜ್ಞರು ಇಂಥಾ ಖಾತೆಗಳನ್ನು ಪತ್ತೆ ಮಾಡಲಿದ್ದಾರೆ. ಕಿರುಕುಳ, ನಕಲಿ ಮಾಹಿತಿಯನ್ನು ಪಾರ್ವರ್ಡ್ ಮಾಡುವಂತಿಲ್ಲ. ಇತರೆ ಬಳಕೆದಾರರನ್ನು ವಂಚಿಸಿದರೂ ಖಾತೆ ರದ್ದು, ಅಶ್ಲೀಲ, ಮಾನಹಾನಿಕರ, ದ್ವೇಷಪೂರಿತ ಮೆಸೇಜ್​​ ಮಾಡುವಂತಿಲ್ಲ. ಹಿಂಸಾತ್ಮಕ ಅಪರಾಧಗಳನ್ನು ಪ್ರಚೋದಿಸಿದರೂ ಶಿಸ್ತು ಕ್ರಮ ಕೈಗೊಳ್ಳಲಾಗ್ತಿದೆ.