ಜಮ್ಮು-ಕಾಶ್ಮೀರ:
ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದ ದಲ್ ಸರೋವರದ ಬಳಿಯಿರುವ ಏಷ್ಯಾದ ಅತಿದೊಡ್ಡ ಟುಲಿಪ್ ಗಾರ್ಡನ್ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದೆ. ದೇಶ-ವಿದೇಶಗಳ ಸಾವಿರಾರು ಪ್ರವಾಸಿಗರನ್ನು ಈ ಗಾರ್ಡನ್ ಸೆಳೆಯುತ್ತಿದೆ. ಗಾರ್ಡನ್ನಲ್ಲಿ 48 ವಿವಿಧ ಬಗೆಯ 15 ಲಕ್ಷಕ್ಕೂ ಹೆಚ್ಚು ಟುಲಿಪ್ ಹೂವುಗಳು ಅರಳಿ ನಿಂತು ಪ್ರವಾಸಿಗರನ್ನ ಆಕರ್ಷಿಸುತ್ತಿದೆ. ರಾಜ್ಯದಲ್ಲಿ ಪ್ರವಾಸೋದ್ಯಮದ ಪುನಶ್ಚೇತನಕ್ಕಾಗಿ ಅಧಿಕಾರಿಗಳು ಈ ಬಾರಿ 15 ದಿನಗಳ ಬೃಹತ್ ಟುಲಿಪ್ ಉತ್ಸವ ಆಯೋಜಿಸಿದ್ದಾರೆ, ಪುಷ್ಪಪ್ರಿಯರು ಫೋಟೋ ಕ್ಲಿಕ್ಕಿಸಿಕೊಂಡು ಹೂಗಳ ಸೊಬಗನ್ನ ಎಂಜಾಯ್ ಮಾಡ್ತಿದ್ದಾರೆ…..