ಸ್ಯಾಂಡಲ್‌ವುಡ್:
ನಟಿ ರಾಧಿಕಾ ಕುಮಾರಸ್ವಾಮಿ ನಿರ್ಮಿಸಿರುವ ಹಾಗೂ ನಾಯಕಿಯಾಗೂ ನಟಿಸಿರುವ ಬಹು ನಿರೀಕ್ಷಿತ “ಭೈರಾದೃವಿ” ಚಿತ್ರ ಅಕ್ಟೋಬರ್ 3 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ನಾಡಹಬ್ಬ ನವರಾತ್ರಿಯ ಮೊದಲ ದಿನವೇ ಈ ಚಿತ್ರ ಬಿಡುಗಡೆಯಾಗುತ್ತಿರುವುದು ವಿಶೇಷ.
ಬಿಡುಗಡೆ ದಿನಾಂಕ ಘೋಷಣೆ ಯಾಗಿರುವುದರಿಂದ ರಾಧಿಕಾ ಕುಮಾರಸ್ವಾಮಿ ಅವರು ಇತ್ತೀಚಿಗೆ ಅವರ ನಿವಾಸದ ಬಳಿ “ಭೈರಾದೇವಿ” ಚಿತ್ರದ ಪ್ರಚಾರದ ಮೊದಲ ಹೆಜ್ಜೆಯಾಗಿ ಟ್ಯಾಬ್ಲೊ ಹಾಗೂ ಆಟೋ ಪ್ರಚಾರಕ್ಕೆ ಚಾಲನೆ ನೀಡಿದರು. ರಾಧಿಕಾ ಕುಮಾರಸ್ವಾಮಿ ಅವರು ಸ್ವತಃ ತಾವೇ ಆಟೋ ಚಾಲನೆ ಮಾಡಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ನೂರಾರು ಪುರುಷ ಹಾಗೂ ಮಹಿಳಾ ಆಟೋ ಚಾಲಕರು ಉಪಸ್ಥಿತರಿದ್ದರು. “ಭೈರಾದೇವಿ” ಚಿತ್ರದ ಪೋಸ್ಟರ್ ವುಳ್ಳ ಟ್ಯಾಬ್ಲೊ ಹಾಗೂ ಆಟೋಗಳು ರಾಜ್ಯಾದ್ಯಂತ ಸಂಚರಿಸಲಿದೆ.
ಶ್ರೀಜೈ ಅವರು ನಿರ್ದೇಶಿಸಿರುವ ಈ ಚಿತ್ರಕ್ಕೆ ರವಿರಾಜ್ ಹಾಗೂ ಯಾದವ್ ಅವರ ಸಹ ನಿರ್ಮಾಣವಿದೆ. ಜೆ.ಎಸ್.ವಾಲಿ ಛಾಯಾಗ್ರಹಣ, ಕೆ.ಕೆ.ಸೆಂಥಿಲ್ ಪ್ರಸಾದ್ ಸಂಗೀತ ನಿರ್ದೇಶನ ಹಾಗೂ ರವಿಚಂದ್ರನ್ ಅವರ ಸಂಕಲನವಿರುವ “ಭೈರಾದೇವಿ” ಚಿತ್ರದ ತಾರಾಬಳಗದಲ್ಲಿ ರಮೇಶ್ ಅರವಿಂದ್, ರಾಧಿಕಾ ಕುಮಾರಸ್ವಾಮಿ, ರವಿಶಂಕರ್, ರಂಗಾಯಣ ರಘು ಮುಂತಾದವರಿದ್ದಾರೆ. .