Breaking News

ಮೇಲ್ಸೇತುವೆ ಕಾಮಗಾರಿಗೆ ಚಾಲನೆ..!

ಭಾಗಮಂಡಲ ವ್ಯಾಪ್ತಿಯ ಜನರಿಗೆ ಸಂತಸ....

SHARE......LIKE......COMMENT......
ಹೌದು, ಮಳೆಗಾಲದಲ್ಲಿ ಸಂಪೂರ್ಣ ಜಲಾವೃತಗೊಂಡು ವಾರಗಟ್ಟಲೆ ಸಂಪರ್ಕ ಕಡಿತವಾಗಿ ಪರದಾಡುತ್ತಿದ್ದವರ ಬಹುಬೇಡಿಕೆಯ ಮೇಲ್ಸೇತುವೆ ಕಾಮಗಾರಿಗೆ ಚಾಲನೆ ಸಿಕ್ಕಿದೆ.
ಮಳೆಗಾಲದಲ್ಲಿ ಕಾವೇರಿ, ಕನ್ನಿಕೆ ಮತ್ತು ಸಜ್ಯೋತಿ ನದಿಗಳ ನೀರಿನ ಏರಿಕೆಯಿಂದ ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತಗೊಂಡು ಮಡಿಕೇರಿ ಮತ್ತು ಅಯ್ಯಂಗೇರಿ ನಡುವೆ ಸಂಪರ್ಕ ಕಳೆದುಕೊಂಡು ವಾರಗಟ್ಟಲೆ ತಲಕಾವೇರಿ, ಚೇರಂಗಾಲ, ಕೊರಂಗಾಲ ಸೇರಿದಂತೆ ಕೆಲವು ಗ್ರಾಮಗಳ ಜನರು ಪರದಾಡುತ್ತಿದ್ದರು.

ಮಾಜಿ ಸಿಎಂ ಯಡಿಯೂರಪ್ಪ ಸರ್ಕಾರದಲ್ಲಿ ಆರಂಭವಾಗಬೇಕಿದ್ದ ಈ ಮೇಲ್ಸೇತುವೆ ಕಾಮಗಾರಿ 10 ವರ್ಷಗಳ ಬಳಿಕ ಚಾಲನೆ ದೊರೆತಿದೆ. ಅಂದಾಜು 30 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಈ ಕಾಮಗಾರಿಯನ್ನು ಎ.ವಿ ಆರ್ ತೇಜಸ್ ಇನ್ಪ್ರಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ವಹಿಸಲಾಗಿದೆ. ಸುಮಾರು ಒಂದೂವರೆ ವರ್ಷದ ಅವಧಿಯಲ್ಲಿ ಕಾಮಗಾರಿ ಪೂರ್ಣಗೂಳ್ಳುವ ಭರವಸೆಯನ್ನು ಸಂಸ್ಥೆ ನೀಡಿದ್ದು, ಮಳೆ ಸಂಭವಿಸಿದ ಸಂದರ್ಭ ವಿಳಂಬವಾಗುವ ಸಾಧ್ಯತೆ ಇದೆ.

ಈ ಹಿಂದೆ ಸಹ ಒಂದು ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಪ್ರವಾಹ ಸಂದರ್ಭದಲ್ಲಿ ಈ ಸೇತುವೆ ಸಹ ಮುಳುಗಡೆಯಾಗುತ್ತಿತ್ತು. ಬಳಿಕ ಸದ್ಯಕ್ಕೆ ಇರುವ ಸೇತುವೆಗಿಂತ ಇನ್ನಷ್ಟು ಎತ್ತರಕ್ಕೆ ನಿರ್ಮಿಸಲು ನಿರ್ಧರಿಸಲಾಗಿದೆ. ನೀಲಿ ನಕ್ಷೆಯನ್ನು ತಯಾರಿಸಿ ಇದೀಗ ಕಾಮಗಾರಿ ಆರಂಭಿಸಲಾಗಿದೆ……