ಬೆಂಗಳೂರು:
ಡ್ರಗ್ ಕೇಸ್ನಲ್ಲಿ ಈಗಾಗಲೇ ಸಿಸಿಬಿ ಅಧಿಕಾರಿಗಳು ಸಾಕಷ್ಟು ಜನರ ವಿಚಾರಣೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಇತ್ತೀಚೆಗೆ ನಿಧನರಾದ ಮಾಜಿ ಡಾನ್ ಮುತ್ತಪ್ಪ ರೈ ಅವರ ಮನೆ ಮೇಲೆ ಇಂದು ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮುತ್ತಪ್ಪ ರೈ ಮಗ ರಿಕ್ಕಿ ರೈ ಹೆಸರು ಡ್ರಗ್ ಜಾಲದಲ್ಲಿ ಕೇಳಿಬಂದಿರುವ ಹಿನ್ನೆಲೆಯಲ್ಲಿ ಬಿಡದಿ ಹಾಗೂ ಸದಾಶಿವನಗರ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸದಾಶಿವನಗರದ ರಾಜಮಹಲ್ ಅಪಾರ್ಟ್ಮೆಂಟ್ ಪ್ಲಾಟ್ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗ್ಗೆ 6.30ಕ್ಕೆ ಸಿಸಿಬಿ ಅಧಿಕಾರಿಗಳು ರೇಡ್ ಮಾಡಿದ್ದ ವೇಳೆ ಮನೆಯವರು ಯಾರೂ ಸಹ ಪ್ಲಾಟ್ನಲ್ಲಿ ಇರಲಿಲ್ಲ. ಮನೆ ಕೆಲಸದ ಸಿಬ್ಬಂದಿ ಮಾತ್ರ ಇದ್ದರು. ಫ್ಲಾಟ್ನಲ್ಲೇ ಪರಿಶೀಲನೆ ನಡೆಸುತ್ತಿರುವ ಸಿಸಿಬಿ ಅಧಿಕಾರಿಗಳು ನಿನ್ನೆ ಸರ್ಚ್ ವಾರೆಂಟ್ ಪಡೆದಿದ್ದರು. ಮುತ್ತಪ್ಪ ರೈಗೆ ಸೇರಿದ್ದ ಎರಡು ಕಡೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸಿಪಿ ವೇಣುಗೋಪಾಲ್ ಹಾಗೂ ತಂಡದಿಂದ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಈಗಾಗಲೇ ಬಂಧಿತರಾಗಿರುವ ಕೆಲವು ಡ್ರಗ್ ಪೆಡ್ಲರ್ಗಳು ರಿಕ್ಕಿ ರೈ ಜೊತೆಗೆ ಸಂಪರ್ಕ ಹೊಂದಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದ್ದರಿಂದ ದಾಳಿ ನಡೆಸಲಾಗಿದೆ…….