Breaking News

ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ ಮೇಘನಾ ರಾಜ್..!

ಸಂಭ್ರಮದಲ್ಲಿ ಚಿರು ಸರ್ಜಾ ಫ್ಯಾಮಿಲಿ....

SHARE......LIKE......COMMENT......

ಬೆಂಗಳೂರು:

ಸರ್ಜಾ ಕುಟುಂಬಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಕೆಲ ತಿಂಗಳ ಹಿಂದಷ್ಟೇ ಗಂಡ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿದ್ದ ನಟಿ ಮೇಘನಾ ರಾಜ್​ ಈಗ ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಸರ್ಜಾ ಕುಟುಂಬಕ್ಕೆ ಜೂನಿಯರ್​ ಸರ್ಜಾ ಅವರ ಆಗಮನವಾಗಿದೆ. ವೈದ್ಯರು ಡೇಟ್​ ಕೊಟ್ಟ ಹಿನ್ನೆಲೆಯಲ್ಲಿ ಮೇಘನಾ ರಾಜ್​ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಗ್ಗೆ 11:07ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷ ಎಂದರೆ, ಇಂದು ಚಿರು ಸರ್ಜಾ- ಮೇಘನಾ ನಿಶ್ಚಿತಾರ್ಥದ ದಿನ. ಅದೇ ದಿನವೇ ಮೇಘನಾಗೆ ಮಗುವಾಗಿದೆ. ಮೇಘನಾ ರಾಜ್​ಗೆ ಮಗು ಜನಿಸುತ್ತಿದ್ದಂತೆ ಚಿರು ಸರ್ಜಾ ಅಜ್ಜಿ ಲಕ್ಷ್ಮೀದೇವಿ ಆಸ್ಪತ್ರೆಯಿಂದ ಹೊರಬಂದು, ಸ್ವೀಟ್ಸ್ ಖರೀದಿಸಿದ್ದಾರೆ. ಸರ್ಜಾ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿರುವುದು ಎಲ್ಲರಲ್ಲೂ ಸಂತಸ ತಂದಿದೆ……