Breaking News

ವಿವಾಹಕ್ಕೆ ಯಾವ ದೋಷ ಅತಿಯಾಗಿ ಕಾಡುತ್ತದೆ..?

ಜಾತಕದಲ್ಲಿ ಯಾವ ದೋಷ ನಿಮಗೆ ಕಂಟಕವಾಗುತ್ತೆ....

SHARE......LIKE......COMMENT......

ಧರ್ಮ-ಜ್ಯೋತಿ:

ವಿವಾಹಕ್ಕೆ ಮುನ್ನ ಜಾತಕಗಳನ್ನು ಪರಿಶೀಲಿಸುವುದು ಸಾಮಾನ್ಯ. ಈ ಪ್ರಕ್ರಿಯೆ ಏಕೆ ನಡೆಯುತ್ತದೆ? ಜಾತಕ ಮೇಳಾಮೇಳಿಯ ಉದ್ದೇಶವೇನು?
ಪ್ರತಿಯೊಬ್ಬ ಮನುಷ್ಯನ ಜಾತಕದಲ್ಲಿ ಅವರವರ ಕುಂಡಲಿಯಲ್ಲಿರುವ ಗ್ರಹದಂತೆ ಫಲ ಕೊಡುತ್ತದೆ. ಇದು ಅವರ ಹಿಂದಿನ ಜನ್ಮದ ಕರ್ಮಾನುಸಾರವಾಗಿರುತ್ತದೆ. ವಿವಾಹ ಕೂಡಾ ಕರ್ಮಾನುಸಾರವಾಗಿರುತ್ತದೆ. ವಿಧಿ ಬರಹವನ್ನು ಬದಲಾಯಿಸಲು ಅಸಾಧ್ಯ.

ಜಾತಕದಲ್ಲಿ ಶುಕ್ರ ಶನಿಗಳು ತಮ್ಮ ತಮ್ಮ ಕ್ಷೇತ್ರವನ್ನು ಬದಲಾಯಿಸುವುದು, ಶುಕ್ರ ಶನಿ ಒಟ್ಟಿಗೆ ಇರುವುದು ಇದು ಶುಕ್ರನ ಯೋಗವನ್ನು ಕೆಡಿಸುವುದು. ಜಾತಕದಲ್ಲಿ ಸಮಸ್ಯೆ ಇದ್ದರೆ ಹಲವು ಸಮಸ್ಯೆಗಳು ಬರುವುವು. ಮದುವೆಯಾಗುವ ವಯಸ್ಸಿನಲ್ಲಿ ಎಷ್ಟು ಒದ್ದಾಡಿದರೂ ಸಮಯ ಕೂಡಿ ಬರುವುದಿಲ್ಲ, ಪ್ರೀತಿಸಿದ ಹೆಣ್ಣು ಕೈಕೊಟ್ಟು ಬೇರೆಯವರನ್ನು ಮದುವೆಯಾಗುವುದು, ಗಂಡ ಮಕ್ಕಳಾದರೆ ಮದುವೆಗೆ ಮುನ್ನ ಮತ್ತೊಬ್ಬರ ಸ್ತ್ರೀ ಸಂಬಂಧ ಇರುವುದು, ಕೈ ಹಿಡಿದ ಹೆಂಡತಿಗೆ ಕಾಯಿಲೆಗಳು ಬರುವುದು, ಮದುವೆಯ ನಂತರ ಗಂಡ- ಹೆಂಡತಿ ವಾದ ವಿವಾದ ಮಾಡಿ ಹೆಣ್ಣನ್ನು ಬಿಡುವುದು, ಬೇರೆ ಸ್ತ್ರೀ ಸಂಬಂಧದಿಂದ ಕಾಯಿಲೆಗಳು ಬರುವುದು, ಶನಿಯು ನೀಚ ಸ್ಥಾನದಲ್ಲಿರುವುದರಿಂದ ಇದರಿಂದ ನೀಚ ಜಾತಿಯ ಸ್ತ್ರೀ ಸಂಬಂಧವಾಗುವುದು, ಬೇರೆ ಬೇರೆ ರೀತಿಯ ತೊಂದರೆಗಳು ಬರುತ್ತವೆ. ಇಂಥವೆಲ್ಲ ಒಂದು ಸಮಸ್ಯೆಯಾಗಿ ಕಾಡುತ್ತವೆ.

ಆದರೆ, ಇದಕ್ಕೆ ಕಾರಣವೇನು ಎಂದು ತಿಳಿಯುವುದು ಕೂಡಾ ಇಲ್ಲ. ಇಂಥವರಿಗೆ ದಾಂಪತ್ಯ ಜೀವನದಲ್ಲಿ ಸುಖ ಎಂಬುದು ಕನಸಿನಲ್ಲಿಯೂ ಇರುವುದಿಲ್ಲ. ಇವರ ದೇವತಾರಾಧನೆಗೆ ವೈರಾಗ್ಯ ನಿಷ್ಠೆ, ಗುರು ಅನುಗ್ರಹ ಇತ್ಯಾದಿ ಒಳ್ಳೆಯ ಗುಣಗಳಿರುತ್ತದೆ. ಇವರಿಂದ ಬೇರೆಯವರಿಗೆ ಸಹಾಯ ಸಿಗುತ್ತದೆ. ಇತರರು ಇವರು ಒಳ್ಳೆಯವರು, ಇವರಿಗೆ ಈ ರೀತಿಯ ಕಷ್ಟ ಸಿಗಬಾರದಿತ್ತು ಎಂದು ಹೇಳುತ್ತಾರೆ. ಇವರಿಗೆ ಬಡವರಲ್ಲಿ ಪ್ರೀತಿ, ಕೆಲಸಗಾರರಲ್ಲಿ ಪ್ರೀತಿ ಇರುತ್ತದೆ. ಇವರು ಶಾಂತಿಪಾಲಕರಾಗಿರುತ್ತಾರೆ. ಶುಕ್ರನಿಗೆ ಗುರು ಯೋಗ ಇದ್ದರೆ ಮಕ್ಕಳಾಗುತ್ತದೆ.

ಶನಿ ಮತ್ತು ಚಂದ್ರರು ಒಂದೇ ಮನೆಯಲ್ಲಿದ್ದರೆ ವಿವಾಹಕ್ಕೆ ಅಡೆತಡೆಯಾಗುತ್ತದೆ. ಸಂಬಂಧಗಳು ಬೇಕಾದಷ್ಟು ಬಂದರೂ ವಿವಾಹವಾಗುವುದಿಲ್ಲ. ಶನಿ ಚಂದ್ರನ ಮೇಲೆ ದೃಷ್ಟಿ ಇದ್ದಾಗ ಮತ್ತು ಚಂದ್ರ ಶನಿಯು ಕೇಂದ್ರ ಸ್ಥಾನದಲ್ಲಿ ಇದ್ದರೂ ಮದುವೆಗೆ ಅಡೆತಡೆಯಾಗುವುದು ಖಂಡಿತ.

2-7-11 ಮನೆಯು ವಿವಾಹಕ್ಕೆ ಪ್ರಮುಖ ಸ್ಥಾನ. ಶುಭ ಗ್ರಹಗಳಾದ ಗುರು ಚಂದ್ರ ಬುಧ ಶುಕ್ರ ಇದ್ದರೆ ಅಥವಾ 2-7-11ನೇ ಮನೆಯ ಅಧಿಧಿಪತಿಯೊಡನೆ ಶುಭಗ್ರಹ ಇದ್ದರೂ ಶುಭಗ್ರಹಗಳು 2-7-11ನೇ ಮನೆಗಳನ್ನು ಅಥವಾ ಆ ಮನೆಯ ಅಧಿಧಿಪತಿಯನ್ನು ನೋಡಿದರೂ ಇಂತಹ ಜಾತಕರ ಮದುವೆಯು ಸರಿಯಾದ ಸಮಯಕ್ಕೆ ನಡೆಯುತ್ತದೆ, ಒಳ್ಳೆಯ ಸಂಬಂಧ ಸಿಗುತ್ತದೆ……