ಪಂಚಾಂಗ:
ದಿನಾಂಕ: 07/10/2020ನೇ
ಶ್ರೀ ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ವರ್ಷ ಋತು, ಅಧಿಕ ಆಶ್ವಯುಜ ಮಾಸ
ಕೃಷ್ಣಪಕ್ಷ, ಪಂಚಮಿ ತಿಥಿ ಬುಧವಾರ ರೋಹಿಣಿ ನಕ್ಷತ್ರ
ವ್ಯತೀಪಾತ ಯೋಗ, ತೈತಲೆ ಕರಣ
ಅಮೃತಗಳಿಗೆ
ಸಂಜೆ 04:30 ರಿಂದ 06:00ಕ್ಕೆ
ಪ್ರಯಾಣಕ್ಕೆ ಅನುಕೂಲವಾದ ಯೋಗ(ಶುಭ – ಕಲ್ಯಾಣ)
ರಾಹುಕಾಲ: ಮಧ್ಯಾಹ್ನ 12:11 ರಿಂದ 01:41
ಗುಳಿಕಕಾಲ: ಬೆಳಗ್ಗೆ 10:41 ರಿಂದ ಮಧ್ಯಾಹ್ನ 12:11
ಯಮಗಂಡಕಾಲ: ಬೆಳಗ್ಗೆ 07:41 ರಿಂದ 09:11
ಮೇಷರಾಶಿ
ನಿಗದಿತ ಕಾರ್ಯಗಳೆಲ್ಲ ಸುಲಭವಾಗಿ ಪೂರ್ಣವಾಗುತ್ತದೆ. ಬೇಡವಾದ ವಿಷಯದ ಬಗ್ಗೆ ಹೆಚ್ಚು ಯೋಚಿಸುವಿರಿ,ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.
ವೃಷಭರಾಶಿ
ಪ್ರಯಾಣಕಾಲದಲ್ಲಿ ಎಚ್ಚರಿಕೆ ಅಗತ್ಯ ,ಹೊಸ ಕಾರ್ಯ ಆರಂಭಿಸಲು ಶುಭ ದಿನ. ಖರ್ಚಿಗೆ ತಕ್ಕಷ್ಟು ಹಣ ಬರುವುದರಿಂದ ಈ ದಿನ ತೊಂದರೆ ಇರುವುದಿಲ್ಲ.
ಮಿಥುನರಾಶಿ
ನಿಮ್ಮ ಕಾರ್ಯಗಳು ಅಡೆ-ತಡೆಯಿಲ್ಲದೆ ಮುಂದೆ ಸಾಗುವುದು. ಸಾರ್ವಜನಿಕ ಕ್ಷೇತ್ರಗಳಲ್ಲಿ ಸಂಘ ಸಂಸ್ಥೆಗಳಿಂದ ಸನ್ಮಾನ ದೊರೆಯುವ ಸಾಧ್ಯತೆ ಇರುವುದು. ಹಣಕಾಸು ಸ್ಥಿತಿ ಉತ್ತಮವಾಗಿರುತ್ತದೆ.
ಕರ್ಕಾಟಕರಾಶಿ
ವೃತ್ತಿ ಜೀವನದಲ್ಲಿ ಏರುಪೇರುಗಳಾಗುತ್ತವೆ ,ಅವಿವಾಹಿತರಿಗೆ ವಿವಾಹ ಯೋಗವಿದೆ. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ.
ಸಿಂಹರಾಶಿ
ಹೊಸದಾದ ಸಂಕಲ್ಪ ನಿಮಗೆ ಹೊಸತನ ಮತ್ತು ಹೊಸ ಹುಮ್ಮಸ್ಸನ್ನು ಹುಟ್ಟುಹಾಕುವುದು. ಪ್ರಚಲಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ,ಮಿತ್ರರು ಮತ್ತು ಸಂಬಂಧಿಕರ ಆಗಮನವಾಗಲಿದೆ.
ಕನ್ಯಾರಾಶಿ
ಧಾರ್ಮಿಕ ಮತ್ತು ಮಂಗಳ ಕಾರ್ಯಕ್ರಮಗಳಲ್ಲಿ ಭೇಟಿ ನೀಡುವಿರಿ. ಮಿತ್ರರ ಭೇಟಿಯಿಂದ ಆರ್ಥಿಕ ಲಾಭ ದೊರೆಯಲಿದೆ.ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.
ತುಲಾರಾಶಿ
ಇಂದು ಆರೋಗ್ಯ ಕೊಂಚ ಏರುಪೇರಾಗಲಿದೆ. ಹೊಸ ಕಾರ್ಯವನ್ನು ಆರಂಭಿಸಲು ಅನುಕೂಲಕರ ದಿನ.ಸಭೆ-ಸಮಾರಂಭಗಳಿಗೆ ಭೇಟಿ ನೀಡುವಿರಿ,
ವೃಶ್ಚಿಕರಾಶಿ
ನೀವು ಆಡಿದ ತಮಾಷೆ ಮಾತು ಪತಿಪತ್ನಿಯರಲ್ಲಿ ವಿರಸವುಂಟು ಮಾಡುವ ಸಾಧ್ಯತೆ ಇದೆ. ಹಾಗಾಗಿ ಎರಡು ಬಾರಿ ಚಿಂತಿಸಿ ಮಾತನ್ನು ಆಡಿ.ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಲಿದ್ದೀರಿ. ವಿದೇಶದಿಂದ ಶುಭ ಸಮಾಚಾರ ಬರಲಿದೆ.
ಧನುರಾಶಿ
ಇವತ್ತು ದಿನದ ಆರಂಭ ಅತ್ಯಂತ ಆರಾಮದಾಯಕವಾಗಿಯೂ ಮತ್ತು ಸ್ಪೂರ್ತಿದಾಯಕವಾಗಿಯೂ ಇರುತ್ತದೆ.ಕಾಸಿನ ವಿಚಾರದಲ್ಲಿ ಹೆಚ್ಚು ಅಭಿವೃದ್ಧಿ ಕಂಡು ಬರುತ್ತದೆ,ಮಕ್ಕಳ ವಿದ್ಯೆಯಲ್ಲಿ ಹಿನ್ನಡೆ ಉಂಟು ಮಾಡುವುದು.
ಮಕರರಾಶಿ
ಅಂದುಕೊಂಡ ಕಾರ್ಯ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳದೇ ಇರುವುದರಿಂದ ಮಾನಸಿಕ ಚಿಂತೆ ಉಂಟಾಗುವುದು,ಆತ್ಮವಿಮರ್ಶೆ ಮಾಡಿಕೊಳ್ಳುವುದು ಒಳಿತು.ಸಿನಿಮಾ ಹಾಗೂ ಮನೋರಂಜನೆ ಗೋಸ್ಕರ ಹೆಚ್ಚು ಸಮಯ ಕಳೆಯಿರಿ
ಕುಂಭರಾಶಿ
ಮಂಗಳ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದೀರಿ. ತೀರ್ಥಯಾತ್ರೆ ಮಾಡುವ ಯೋಗವಿದೆ.ನಿರ್ಧಾರಗಳನ್ನು ತಳೆಯುವಾಗ ಹಿರಿಯರ ಸಲಹೆಯನ್ನು ತೆಗೆದುಕೊಳ್ಳಿ.
ಮೀನರಾಶಿ
ಅಧಿಕ ಗಳಿಕೆಗೆ ಇಂದು ಶುಭದಿನವಾಗಿದೆ. ವ್ಯಾಪಾರಿಗಳಿಗೆ ಬಾಕಿ ಹಣ ದೊರೆಯಲಿದೆ. ಇಂದು ಪ್ರತಿಯೊಂದು ಕಾರ್ಯವೂ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ.