Breaking News

ಸಂಜೆ 4 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿರುವ ಮೋದಿ..!

ನಾಳೆಯಿಂದ ಅನ್ ಲಾಕ್ 2 ಜಾರಿ....

SHARE......LIKE......COMMENT......

ನವದೆಹಲಿ:

ಇಂದು ಸಂಜೆ 4 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿದ್ದು, ಅವರು ಮಾತನಾಡಬಹುದು ಎಂಬ ಕುತೂಹಲ ನಿರ್ಮಾಣವಾಗಿದೆ. ಇಂದಿಗೆ ಅನ್ ಲಾಕ್ 1 ಮುಕ್ತಾಯವಾಗಿ ನಾಳೆಯಿಂದ ಅನ್ ಲಾಕ್ 2 ಜಾರಿಗೊಳ್ಳಲಿದೆ.‌ ಜೊತೆಗೆ ದೇಶದಲ್ಲಿ ಕೋವಿಡ್-19 ವ್ಯಾಪಕವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಬಹುದು ಎಂದು ಹೇಳಲಾಗುತ್ತಿದೆ. ಅಲ್ಲದೆ ಭಾರತ-ಚೀನಾ ಗಡಿಯ ಗಾಲ್ವಾನ್ ಕಣಿವೆಯಲ್ಲಿ ಜೂನ್ 15 ರಂದು ನಡೆದ ಘರ್ಷಣೆಯಲ್ಲಿ 20 ಭಾರತೀಯ ಸೇನಾ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. ಇದರ ಬಳಿಕವೂ ಗಡಿಯಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ. ಗಡಿಪ್ರದೇಶದಲ್ಲಿ ಎರಡೂ ದೇಶಗಳ ಸೇನಾ ಬಲಗಳು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆಗೊಂಡಿವೆ. ಇದರ ಬಗ್ಗೆಯೂ ಮಾತನಾಡಬಹುದು.

ದೇಶದಲ್ಲಿ COVID-19 ಶುರುವಾದ ಬಳಿಕ ಇದು ಪ್ರಧಾನ ಮಂತ್ರಿ ಮಾಡುತ್ತಿರುವ ಆರನೇ ಭಾಷಣವಾಗಿದೆ. ಕರೋನಾವೈರಸ್ ಪ್ರೇರಿತ ಲಾಕ್‌ಡೌನ್‌ನಿಂದ ಚೇತರಿಸಿಕೊಳ್ಳುತ್ತಿರುವ ಆರ್ಥಿಕತೆಯನ್ನು ಹೆಚ್ಚಿಸಲು ಮೋದಿ ಮೇ 12 ರಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನ್ನಾಡಿದ್ದರು. ಆಗ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಿಸಿದ್ದರು. ಕಳೆದ ಭಾನುವಾರ ತಮ್ಮ ಮಾಸಿಕ “ಮನ್ ಕಿ ಬಾತ್” ಭಾಷಣದಲ್ಲಿ, ಲಡಾಖ್ನಲ್ಲಿ ತನ್ನ ಭೂಪ್ರದೇಶದ ಮೇಲೆ ಕೆಟ್ಟ ಕಣ್ಣು ಹಾಕುವವರಿಗೆ ಭಾರತ ಸೂಕ್ತ ಉತ್ತರ ನೀಡಿದೆ ಎಂದು ಹೇಳಿದ್ದರು. ಜೊತೆಗೆ COVID-19 ವಿಷಯದಲ್ಲಿ ಜನರು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದರು, ಹಾಗೆ ಮಾಡದಿರುವುದು ಅವರ ಜೀವ ಮತ್ತು ಇತರರ ಅಪಾಯಕ್ಕೆ ಕಾರಣವಾಗುತ್ತದೆ ಎಂದು ಒತ್ತಿ ಹೇಳಿದ್ದರು…….