Breaking News

ಉಡುಪಿಯಲ್ಲಿ ಕೊರೋನಾ ತಾಂಡವ..!

ದಿನಕ್ಕೆ 210 ಪ್ರಕರಣ ಪಾಸಿಟಿವ್....

SHARE......LIKE......COMMENT......

ಉಡುಪಿ:

ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವಲ್ಲಿ ಕೊರೋನಾ ಸೋಂಕು ಹೆಚ್ಚಾಗಿ ಕಾಣಿಸುತ್ತಿದ್ದು ಇಂದು ಒಂದೇ ದಿನದಲ್ಲಿ 210 ಪ್ರಕರಣಗಳು ಕಾಣಿಸಿಕೊಳ್ಳುವುದರ ಮೂಲಕ ಶ್ರ‍್ರೀಕೃಷ್ಣನ ನಗರಿ ಉಡುಪಿಯನ್ನು ಬೆಚ್ಚಿ ಬೀಳಿಸಿದೆ. ದಿನ ದಿನಕ್ಕೆ ಸೋಂಕಿತ ಪ್ರಮಾಣ ಹೆಚ್ಚುತ್ತಲೇ ಸಾಗಿದೆ. ಈ ಕುರಿತಂತೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ರಾಜ್ಯದ ಕಂದಾಯ ಸಚಿವ ಆರ್. ಅಶೋಕ, ಇಂದು ಉಡುಪಿಯಲ್ಲಿ 210ಪ್ರಕರಣಗಳೂ ಕೋವಿಡ್-19 ಪಾಸಿಟಿವ್ ಆಗಿದ್ದು ಮಹಾರಾಷ್ಟ್ರದಿಂದ ಉಡುಪಿಗೆ ಇಪ್ಪತ್ತು ಸಾವಿರ ಮಂದಿ ಬಂದಿದ್ದಾರೆ. ಅದರಲ್ಲಿ ಮುಂಬೈ ಮತ್ತು ಪುಣೆಯಿಂದ ಬಂದವರಲ್ಲಿ ಹೆಚ್ಚಿನ ಪ್ರಕರಣಗಳು ಪಾಸಿಟಿವ್ ಆಗುತ್ತಿದೆ ಎಂದಿದ್ದಾರೆ……