Breaking News

ಗಮನ ಸೆಳೆಯುತ್ತಿದೆ ವಾಟ್ಸ್​ಆ್ಯಪ್ ನ ನ್ಯೂ ಅಪ್​ಡೇಟ್​..!

ಹೊಸ 3 ಫೀಚರ್​ಗಳು ಬಳಕೆದಾರರ ಮುಂದೆ....

SHARE......LIKE......COMMENT......

ಲೈಫ್ ಸ್ಟೈಲ್:

ಅನೇಕ ಹೊಸ ಫೀಚರ್​ಗಳನ್ನು ಪರಿಚಯಿಸಿದ್ದ ವಾಟ್ಸ್​ಆ್ಯಪ್ ವರ್ಷಾಂತ್ಯದಲ್ಲೂ ಬಳಕೆದಾರರಿಗೆ ಹೊಸ ಅಪ್​ಡೇಟ್​ಗಳನ್ನು ನೀಡುತ್ತಿದೆ. ಪ್ರಮುಖವಾಗಿ ವಾಟ್ಸ್​ಆ್ಯಪ್ ಇದೀಗ ಮೂರು ಹೊಸ ಫೀಚರ್​ಗಳನ್ನು ಬಳಕೆದಾರರ ಮುಂದಿಟ್ಟಿದೆ. ಈ ನೂತನ ಅಪ್​ಡೇಟ್​ಗಳ ಮೂಲಕ ವಾಟ್ಸ್​ಆ್ಯಪ್​ ಬಳಕೆದಾರರ ಚಾಟಿಂಗ್-ಟಾಕಿಂಗ್ ಅನುಭವ ಮತ್ತಷ್ಟು ಉತ್ತಮಗೊಳ್ಳಲಿದೆ ಎಂದು ಫೇಸ್​ಬುಕ್ ಇಂಕ್ ಕಂಪೆನಿ ಹೇಳಿದೆ. ವಾಟ್ಸ್​ಆ್ಯಪ್ ಪರಿಚಯಿಸಿರುವ ನೂತನ ಫೀಚರ್​ನಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಕಾಲ್ ವೈಟಿಂಗ್ ಆಯ್ಕೆ. ಹೌದು, ಇನ್ಮುಂದೆ ನೀವು ವಾಟ್ಸ್​ಆ್ಯಪ್​ ಕರೆಯಲ್ಲಿ ನಿರತರಾಗಿದ್ದರೆ, ಮತ್ತೊಂದು ಕರೆಯನ್ನು ವೈಟಿಂಗ್​ನಲ್ಲಿ ಕಾಣಿಸಿಕೊಳ್ಳಲಿದೆ.

ಇದಲ್ಲದೆ ವಾಟ್ಸ್​ಆ್ಯಪ್ ರಿಮೈಂಡರ್ ಫೀಚರ್ (WhatsApp Reminder Feature) ಕೂಡ ಲಭ್ಯವಿರಲಿದೆ. ಈ ಫೀಚರ್​ ಸಹಾಯದಿಂದ ಬಳಕೆದಾರರು ತಮ್ಮ ಕಾರ್ಯಗಳ ಯೋಜನೆ ಮತ್ತು ದಿನಾಂಕಗಳನ್ನು ನೆನಪಿಟ್ಟುಕೊಳ್ಳುವಂತೆ ಮಾಡಬಹುದು.ಇದಕ್ಕಾಗಿ ಬಳಕೆದಾರರು ತಮ್ಮ ವಾಟ್ಸ್​ಆ್ಯಪ್ ಅಕೌಂಟ್​ನ್ನು ನೀವು Any.do ಜೊತೆ ಲಿಂಕ್ ಮಾಡಬೇಕಾಗಿದೆ. ಆ ಬಳಿಕ ರಿಮೈಂಡರ್ ಸೇವೆಯನ್ನು ಬಳಕೆದಾರರು ಪಡೆದುಕೊಳ್ಳಬಹುದು.ಹಾಗೆಯೇ ಈ ಹಿಂದೆ ತಿಳಿಸಿದ್ದ ವಾಟ್ಸ್ಆ್ಯಪ್ ಗೌಪ್ಯತೆ ಸೆಟ್ಟಿಂಗ್​​​ ಅನ್ನು ಎಲ್ಲಾ ಮೊಬೈಲ್​ಗಳಲ್ಲೂ ನೀಡಿದೆ. ಇದರಿಂದ ಇನ್ನು ಮುಂದೆ ವಾಟ್ಸ್ಆ್ಯಪ್​ನಲ್ಲಿ ಬೇರೆ ಗುಂಪಿಗೆ ಸೇರುವ ಮುನ್ನ ಬಳಕೆದಾರರ ಅನುಮತಿ ಕೇಳುವುದನ್ನು ಕಡ್ಡಾಯಗೊಳಿಸಿದೆ…..