Breaking News

ಮಂಡ್ಯ ಜಿಲ್ಲೆ ಕೆರಗೋಡು ಕಿಚ್ಚು ನಿಯಂತ್ರಣಕ್ಕೆ..!

ಪೊಲೀಸರು ಬಿಗಿ ಭದ್ರತೆ, ಕಟ್ಟೆಚ್ಚರ ....

SHARE......LIKE......COMMENT......

ರಾಜ್ಯ
ಮಂಡ್ಯ ಜಿಲ್ಲೆ ಕೆರಗೋಡು ಗ್ರಾಮದಲ್ಲಿ ನಡೆದಿದ್ದ ಹನುಮಧ್ವಜ ಕಿಚ್ಚು ಸದ್ಯ ನಿಯಂತ್ರಣಕ್ಕೆ ಬಂದಿದೆ. ಧ್ವಜ ಸ್ತಂಬದ ಬಳಿ 100 ಮೀಟರ್​​​ ಸುತ್ತ ನಿಷೇಧಾಜ್ಞೆ ವಿಸ್ತರಣೆ ಮಾಡಲಾಗಿದ್ದು ಧ್ವಜ ಸ್ತಂಬದ ಬಳಿ ಯಾರೂ ಹೋಗದಂತೆ ನಿರ್ಬಂಧ ಹೇರಲಾಗಿದೆ. ಕೆರಗೋಡು ಗ್ರಾಮದಲ್ಲಿ ಕ್ಷಣಕ್ಷಣಕ್ಕೂ ಟೆನ್ಷನ್​​ ಉದ್ವಿಗ್ನಗೊಂಡಿದ್ದು ಗ್ರಾಮದಲ್ಲಿ ಬೂದಿಮುಚ್ಚಿದ ಕೆಂಡದಂತಹ ಪರಿಸ್ಧಿತಿ ಎದುರಾಗಿದೆ,ಹನುಮ ಧ್ವಜ ದಂಗಲ್​ನಿಂದಾಗಿ ಸೆಕ್ಷನ್​​ 144 ಮುಂದುವರಿಕೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್​​ ಬಂದೋಬಸ್ತ್​​​ ಮಾಡಲಾಗಿದೆ.ಸರ್ಕಾರ ಈಗಾಗಲೇ PDO ಜೀವನ್​​ ಅವರನ್ನು ಅಮಾನತು ಮಾಡಲಾಗಿದ್ದು ಕೆರಗೋಡು ಬೂದಿ ಮುಚ್ಚಿದ ಕೆಂಡದಂತಿದೆ. ಗ್ರಾಮದಲ್ಲಿ ಪೊಲೀಸರು ಬಿಗಿ ಭದ್ರತೆ ಮಾಡಿದ್ದು ಕಟ್ಟೆಚ್ಚರ ವಹಿಸಲಾಗಿದೆ.