Breaking News

ಧೀರ ಸಾಮ್ರಾಟ್ ಫೆಬ್ರವರಿ 16ಕ್ಕೆ ಗ್ರ್ಯಾಂಡ್‌ ರಿಲೀಸ್..!

ಪವನ್ ಕುಮಾರ್ ಪಚ್ಚಿಯ ಮಸ್ತ್ ಆಕ್ಷನ್ ಕಟ್ ....

SHARE......LIKE......COMMENT......

ಸಿನಿಮಾ:
ಪವನ್ ಕುಮಾರ್ ನಿರ್ದೇಶನದ , ತನ್ವಿ ಪ್ರೊಡಕ್ಷನ್ ಗುರು ಬಂಡಿ ನಿರ್ಮಾಣದ ಚಿತ್ರ. ವಿಭಿನ್ನ ಮಾಸ್ ಟೈಟಲ್ ಕಟ್ಟಿಕೊಂಡು, ಸ್ಯಾಂಡಲ್ವುಡ್ ನಲ್ಲಿ ಫಸ್ಟ್ ಲುಕ್ ನಿಂದ ಇಲ್ಲಿಯವರೆಗೂ ಸದ್ದು ಮಾಡುತ್ತಲೇ ಬಂದಿರುವ ಧೀರ ಸಾಮ್ರಾಟ್ ಚಿತ್ರ ಇದೀಗ ಚಿತ್ರದ ಟ್ರೈಲರ್ ಲಾಂಚ್ ಮಾಡಲು ಸಜ್ಜಾಗಿದೆ. ಸಿನಿಮಾ ಇದೇ ತಿಂಗಳು ಫೆಬ್ರವರಿ 16 ರಂದು ರಾಜ್ಯಾದ್ಯಾಂತ ಗ್ರ್ಯಾಂಡ್ ರಿಲೀಸ್ ಆಗಲಿದೆ, ಈಗಾಗಲೇ ರಿಲೀಸ್‌ ಆಗಿರುವ ಸಾಂಗ್ಸ್‌ ಹಾಗೂ ಟೀಸರ್‌ಗಳು ಸಿನಿಮಾದ ಬಗ್ಗೆ ಮತ್ತಷ್ಟು ಹೆಚ್ಚು ಕ್ಯೂರ್ಯಾಸಿಟಿ ಮೂಡಿಸಿದೆ.
ಅಂದು ರೋರಿಂಗ್ ಸ್ಟಾರ್ ಶ್ರೀಮುರಳಿ ಫಸ್ಟ್ ಲುಕ್ ಲಾಂಚ್ ಮಾಡಿ ಸಾತ್ ಕೊಟ್ಟಿದು , ಚಿತ್ರದ ಮುಹೂರ್ತಕ್ಕೆ ಮತ್ತು ಫಸ್ಟ್ ವಿಡಿಯೋ ಸಾಂಗ್ ರಿಲೀಸ್ ಮಾಡಿದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಚಿತ್ರದ ಪ್ರಚಾರಕ್ಕೆ ದೊಡ್ಡ ಶಕ್ತಿಯಾದರು,ಸದ್ಯದ ಸೆನ್ಸೇಷನ್ ವಿಷಯ, ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಟ್ರೈಲರ್ ಲಾಂಚ್ ಮಾಡುತ್ತಿದ್ದಾರೆ.
ನಟಿ ಅಧ್ವಿತಿ ಶೆಟ್ಟಿ, ನಟ ರಾಕೇಶ್ ಬಿರಾದರ್, ಬಾಲರಾಜ್ ವಾಡಿ, ರಮೇಶ್ ಭಟ್, ಶೋಭಾರಾಜ್, ನಾಗೇಂದ್ರ ಅರಸ್, ಮಂಡ್ಯ ಚಂದ್ರು, ರವೀಂದ್ರನಾಥ್,ಶಂಕರ್ ಭಟ್, ಯತಿರಾಜ್, ಜ್ಯೋತಿ ಮೂರೂರು, ಇಂಚರ, ಮುಂತಾದವರು ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಚಿತ್ರಕ್ಕೆ ರಾಘವ್ ಸುಭಾಷ್ ಸಂಗೀತ , ವಿನು ಮನಸು ಬ್ಯಾಗ್ರೌಂಡ್ ಸ್ಕೋರ್, ವೀರೇಶ್ NTA ಛಾಯಾಗ್ರಹಣ , ಏ ಆರ್ ಸಾಯಿ ರಾಮ್ ಸಂಭಾಷಣೆ, ಮುರಳಿ ರವರ ಕೊರಿಯೋಗ್ರಫಿ, ಚೇತನ್ ಕುಮಾರ್ ಮತ್ತು ನಾಗೇಂದ್ರ ಪ್ರಸಾದ್ ರವರ ಸಾಹಿತ್ಯ, ಕೌರವ ವೆಂಕಟೇಶ್ ಸಾಹಸ ಚಿತ್ರಕ್ಕಿದೆ….ಫೆಬ್ರವರಿ 16 ರಂದು ನಿಮ್ಮ ನೆಚ್ಚಿನ ಚಿತ್ರ ಮಂದಿರದಲ್ಲಿ ತೆರೆಕಾಣಲು ಎಲ್ಲಾ ಸಕಲ ಸಿದ್ಧತೆಯನ್ನ ಸಿನಿಮಾ ತಂಡ ಮಾಡಿಕೊಂಡಿದೆ,ಸೆನ್ಸಾರ್ ಮಂಡಳಿಯಿಂದ U/A (NO CUTS) ಸರ್ಟಿಫೈಡ್ ಪಡೆದು ಸೆನ್ಸಾರ್ ರವರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ..