Breaking News

ರಾಜ್ಯದಲ್ಲಿ ಇಂದು 187 ಮಂದಿಗೆ ಕೊರೋನಾ..!

ಸೋಂಕಿತರ ಸಂಖ್ಯೆ 3408ಕ್ಕೆ ಏರಿಕೆ.....

SHARE......LIKE......COMMENT......

ಬೆಂಗಳೂರು:

ರಾಜ್ಯದಲ್ಲಿ ಇಂದು 187 ಮಂದಿಗೆ ಕೊರೊನಾ ಪಾಸಿಟಿವ್ ಕೇಸ್ ಕಾಣಿಸಿದೆ,ಮೇ 31ರ ಸಂಜೆ 5ರಿಂದ ಜೂನ್ 1 ಸಂಜೆ 5ರವರೆಗೆ 187 ಕೊರೋನಾ ಸೋಂಕು ಪ್ರಕರಣಗಳು ಕಾಣಿಸಿಕೊಂಡಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಉಡುಪಿಯಲ್ಲಿ 73 ಕೇಸ್ ಗಳು ಕಾಣಿಸಿಕೊಂಡಿದೆ,ಬೆಂಗಳೂರು ನಗರದಲ್ಲಿ 28,ಕಲಬುರಗಿ 24,ಹಾಸನ 16,ಮಂಡ್ಯ 15, ಚಿಕ್ಕಬಳ್ಳಾಪುರ 5, ದಕ್ಷಿಣ ಕನ್ನಡದಲ್ಲಿ 4, ಬಳ್ಳಾರಿ 3, ಧಾರವಾಡ 2, ವಿಜಯಪುರದಲ್ಲಿ 26, ಶಿವಮೊಗ್ಗ 9, ಬೆಳಗಾವಿ ಮತ್ತು ಮಂಡ್ಯದಲ್ಲಿ 15, ಬಾಗಲಕೋಟೆಯಲ್ಲಿ ,ಬೀದರ್,ವಿಜಯಪುರ, ಕೋಲಾರ, ಹಾವೇರಿಯಲ್ಲಿ ತಲಾ 1 ಕೇಸ್ ಕಾಣಿಸಿಕೊಂಡಿದೆ….

ರಾಜ್ಯದಲ್ಲಿ COVID–19 ಸೋಂಕಿನಿಂದಾಗಿ , 1,328 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. 2,020 ಕ್ರಿಯಾಶೀಲ ಪ್ರಕರಣಗಳಿದ್ದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ. ರಾಜ್ಯದಾದ್ಯಂತ 110 ಕೊರೊನಾ ಸೋಂಕಿತರು ಗುಣಮುಖರಾದ ಕಾರಣ ವಿವಿಧ ಆಸ್ಪತ್ರೆಗಳಿಂದ ಇಂದು ಅವರನ್ನು ಬೀಳ್ಕೊಡಲಾಗಿದೆ. …ಕೊರೊನಾ ಸೋಂಕಿನಿಂದ ಈವರೆಗೂ 52 ಮಂದಿ ಸಾವಿಗೀಡಾಗಿದ್ದಾರೆ.