Breaking News

ರಾಜ್ಯದಲ್ಲಿ ಇಂದು 299 ಮಂದಿಗೆ ಕೊರೋನಾ..!

ಸೋಂಕಿತರ ಸಂಖ್ಯೆ 3221ಕ್ಕೆ ಏರಿಕೆ....

SHARE......LIKE......COMMENT......

ಬೆಂಗಳೂರು:

ರಾಜ್ಯದಲ್ಲಿ ಇಂದು 299 ಮಂದಿಗೆ ಕೊರೊನಾ ಪಾಸಿಟಿವ್ ಕೇಸ್ ಕಾಣಿಸಿದೆ ಮೇ 30ರ ಸಂಜೆ 5ರಿಂದ ಮೇ 31ರ ಸಂಜೆ 5ರವರೆಗೆ 299 ಕೊರೋನಾ ಸೋಂಕು ಪ್ರಕರಣಗಳು ಕಾಣಿಸಿಕೊಂಡಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ರಾಯಚೂರಿನಲ್ಲಿ 83, ಯಾದಗಿರಿಯಲ್ಲಿ 44, ಬೀದರ್‌ನಲ್ಲಿ 33, ಬೆಂಗಳೂರು ನಗರದಲ್ಲಿ 21, ದಕ್ಷಿಣ ಕನ್ನಡದಲ್ಲಿ 14, ವಿಜಯಪುರದಲ್ಲಿ 26, ಬೆಳಗಾವಿ ಮತ್ತು ಮಂಡ್ಯದಲ್ಲಿ ತಲಾ 13 ಹೊಸ ಪ್ರಕರಣಗಳು ಬೆ ದೃಢಪಟ್ಟಿದೆ…..

ರಾಜ್ಯದಲ್ಲಿ COVID–19 ಸೋಂಕಿನಿಂದಾಗಿ 997 ಜನರು ಸೋಂಕಿನಿಂದ ಗುಣಮುಖರಾಗಿದ್ದು, 1,874 ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ. 15 ಕೊರೊನಾ ಪೀಡಿತರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಈ ಮಾಹಾಮಾರಿಯಿಂದ ಈವರೆಗೂ 51 ಮಂದಿ ಸಾವಿಗೀಡಾಗಿದ್ದಾರೆ…..