Breaking News

ಗಡುವು ಮುಗೀತು, ಗುಂಡಿ ಹಾಗೇ ಉಳೀತು..!

ಕೋರ್ಟ್‌ ಆದೇಶಕ್ಕೂ ಕ್ಯಾರೇ ಅನ್ನದ BBMP....

SHARE......LIKE......COMMENT......

ಬೆಂಗಳೂರು:

ನಗರದ ರಸ್ತೆ ಗುಂಡಿಗಳನ್ನು ಮುಚ್ಚಲು  ಹೈಕೋರ್ಟ್‌ ನೀಡಿದ್ದ ಗಡುವು ಮಂಗಳವಾರಕ್ಕೆ ಮುಗಿದಿದೆ ಬಹುತೇಕ ಕಡೆ ವಾಹನ ಸವಾರರ ಬಲಿಗಾಗಿ ಹೊಂಡ-ಗುಂಡಿಗಳು ಬಾಯ್ತೆರೆದು ಕುಳಿತಿದೆ ಆದರೆ ಪಾಲಿಕೆ ಅಧಿಕಾರಿಗಳು ಕೈಚೆಲ್ಲಿ ಕುಳಿತಿದ್ದಾರೆ.

ಹೈಕೋರ್ಟ್‌ ತರಾಟೆ ತೆಗೆದುಕೊಂಡ ಕೂಡಲೇ ಬಿಬಿಎಂಪಿಯು ನಗರದೆಲ್ಲೆಡೆ ಸಮರೋಪಾದಿಯಲ್ಲಿ ಗುಂಡಿ ಮುಚ್ಚುವ ಕಾಮಗಾರಿಯನ್ನು ಕೈಗೊಂಡಿತು. ಸತತವಾಗಿ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯ ಕೂಡ ಮೂರು ಬಾರಿ ಗಡುವು ವಿಸ್ತರಿಸಿ ಉದಾರತೆ ತೋರಿಸಿತು. ದಸರಾ ರಜೆ ಅವಧಿಯಲ್ಲಿ ನಗರದಲ್ಲಿ ವಾಹನಗಳ ದಟ್ಟಣೆ ಕಡಿಮೆ ಇರುತ್ತದೆ. ಈ ಅವಧಿಯಲ್ಲಿ ತ್ವರಿತವಾಗಿ ಗುಂಡಿ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಆದೇಶಿಸಿತ್ತು.

ನ್ಯಾಯಾಲಯ ನೀಡಿದ್ದ ಕಾಲಮಿತಿ ಮುಗಿದಿದೆ. ಈ ವಿಚಾರವು ಮಂಗಳವಾರ ವಿಚಾರಣೆಗೆ ಬರಲಿದೆ. ಆದರೆ, ಬಹುತೇಕ ರಸ್ತೆಗಳು ಗುಂಡಿ ಮುಕ್ತವಾಗಿಲ್ಲ. ಈಗಾಗಲೇ ಮುಚ್ಚಿರುವ ಗುಂಡಿಗಳು ಸಹ ಮತ್ತೆ ಬಾಯ್ತೆರೆದುಕೊಂಡಿವೆ. ಕಳಪೆ ಕಾಮಗಾರಿಯಿಂದ ಡಾಂಬರು ಕಿತ್ತು ಬಂದು ಗುಂಡಿಗಳು ನಿರ್ಮಾಣವಾಗಿವೆ. ಇದರಿಂದ ವಾಹನ ಸವಾರರು ನರಕಯಾತನೆ ಅನುಭವಿಸುವಂತಾಗಿದೆ. ಪಾಲಿಕೆ ಅಧಿಕಾರಿಗಳು ಅವೈಜ್ಞಾನಿಕವಾಗಿ ತೇಪೆ ಹಾಕಲಾಗಿದ್ದ ರಸ್ತೆಗಳಲ್ಲಿ ಮತ್ತೆ ಗುಂಡಿಗಳು ಬಿದ್ದಿವೆ, ಡಾಂಬರು ಕಿತ್ತು ಬಂದು ಗುಂಡಿ  , ರಸ್ತೆಗಳು ಹದಗೆಟ್ಟು ಕೂತಿದೆ…….