Breaking News

ರಾಜ್ಯದಲ್ಲಿ ಇಂದು 130 ಮಂದಿಗೆ ಕೊರೋನಾ..!

ಸೋಂಕಿತರ ಸಂಖ್ಯೆ 2,089ಕ್ಕೆ ಏರಿಕೆ......

SHARE......LIKE......COMMENT......

ಬೆಂಗಳೂರು:

ರಾಜ್ಯದಲ್ಲಿ ಇಂದು 130 ಮಂದಿಗೆ ಕೊರೊನಾ ಪಾಸಿಟಿವ್ ಕೇಸ್ ಕಾಣಿಸಿದೆ,ಮೇ 23ರ ಸಂಜೆ 5ರಿಂದ ಮೇ 24ರ ಸಂಜೆ 5ರವರೆಗೆ 130 ಕೊರೋನಾ ಸೋಂಕು ಪ್ರಕರಣಗಳು ಕಾಣಿಸಿಕೊಂಡಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಚಿಕ್ಕಬಳ್ಳಾಪುರ 27 ಪಾಸಿಟಿವ್ ಕೇಸ್ ,ಉಡುಪಿ 23 ಕೊರೋನಾ ಸೋಂಕು ಪ್ರಕರಣಗಳು,ಯಾದಗಿರಿ 24 ಕೊರೊನಾ ಕೇಸ್ ಇನ್ನು ಹಾಸನದಲ್ಲಿ ಇವತ್ತು ಕೂಡ 14 ಕೇಸ್ ಕಾಣಿಸಿದೆ, ಬೀದರ್ 6,ದಾವಣಗೆರೆ 4, ಉಡುಪಿ 23, ವಿಜಯಪುರ 1, ಉತ್ತರ ಕನ್ನಡ 2, ಬೆಂಗಳೂರು ನಗರ 1, ಮಂಡ್ಯ 15, ಕಲಬುರಗಿ 6, ದಕ್ಷಿಣ ಕನ್ನಡ 1, ಧಾರವಾಡ 1, ಶಿವಮೊಗ್ಗ 2, ತುಮಕೂರು 2 ಮತ್ತು ಕೊಡಗು ಜಿಲ್ಲೆಯಲ್ಲಿ ತಲಾ 1 ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ರಾಜ್ಯದಲ್ಲಿ COVID–19 ಸೋಂಕಿನಿಂದಾಗಿ ಇದುವರೆಗೂ 42 ಜನರು ಮೃತಪಟ್ಟಿದ್ದಾರೆ. ಇದುವರೆಗೆ ಒಟ್ಟು 654 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ 1,391 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ….