ಬೆಂಗಳೂರು:
ನಗರದೆಲ್ಲೆಡೆ ಗಾಳಿ ಸಹಿತ ಜೋರು ಮಳೆ ಸುರಿದಿದೆ ಮಧ್ಯಾಹ್ನ 3ರ ಸುಮಾರಿಗೆ ಆರಂಭವಾದ ಮಳೆಯ ಆರ್ಭಟ, ಸುಮಾರು ಒಂದು ಗಂಟೆಕಾಲ ಸತತವಾಗಿ ಮಳೆ ಆರ್ಭಟಿಸಿತು,ಜಯನಗರ, ಬಸವೇಶ್ವರನಗರ, ರಾಜಾಜಿನಗರ, ಕೋರಮಂಗಲ, ಮಡಿವಾಳ, ಇಂದಿರಾನಗರ, ಯಶವಂತಪುರ, ಮಲ್ಲೇಶ್ವರ, ಮತ್ತಿಕೆರೆ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ 40ಕ್ಕೂ ಹೆಚ್ಚು ಮರಗಳು ಉರುಳಿಬಿದ್ದವು. 50ಕ್ಕೂ ಹೆಚ್ಚು ಕಡೆಗಳಲ್ಲಿ ಮರಗಳ ಕೊಂಬೆಗಳು ಮುರಿದು ಬಿದ್ದಿದ್ದವು.ನಗರದಲ್ಲಿ ಕರ್ಫ್ಯೂ ಜಾರಿ ಹಿನ್ನಲೆ ಹೀಗಾಗಿ, ರಸ್ತೆಯಲ್ಲಿ ಜನರ ಓಡಾಟ ಕಡಿಮೆ ಇತ್ತು. ಮಳೆಯಿಂದ ಜನರಿಗೆ ಮಳೆಯಿಂದ ಹೆಚ್ಚು ತೊಂದರೆ ಆಗಲಿಲ್ಲ.ಮಳೆ ಕೊಂಚ ಕಡಿಮೆಯಾಗುತ್ತಿದ್ದಂತೆ ಬಿಬಿಎಂಪಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮರಗಳು ತೆರವು ಕಾರ್ಯಚರಣೆ ನಡೆಸಿದರು….