ಮೈಸೂರು:
ಕೊರೋನಾ ಲಾಕ್ ಡೌನ್ ನಿಂದ ದೇಶಾದ್ಯಂತ ವಿಮಾನ ಹಾರಾಟ ಸಂಪೂರ್ಣ ಸ್ತಬ್ಧವಾಗಿದ್ದವು ಆದರೆ ನಾಳೆಯಿಂದ ಮೈಸೂರು-ಬೆಂಗಳೂರು ವಿಮಾನ ಹಾರಾಟಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ,ಸದ್ಯಕ್ಕೆ ರಾಜ್ಯದೊಳಗೆ ಮಾತ್ರ ಹಾರಾಟ ಮಾಡಲು ಅವಕಾಶ ಸಿಕ್ಕಿದೆ….
ಮೊದಲನೇದಾಗಿ ಮೈಸೂರು-ಬೆಂಗಳೂರು ಹಾಗೂ ಮೈಸೂರು-ಬೆಳಗಾವಿ ಮಧ್ಯೆ ಮಾತ್ರ ಸಂಚಾರ ಶುರುವಾಗಲಿದೆ,ವಿಮಾನ ನಿಲ್ದಾಣದಲ್ಲಿ ಕೊರೋನಾ ಸೋಂಕು ಹರಡದಂತೆ ಪ್ರಯಾಣಿಕರ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಿದ್ದು,ವಿಮಾನ ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಸಾಮಾಜಿಕ ಅಂತರ ಕಾಯ್ದಿರಿಸಿ ಸಂಚಾರಕ್ಕೆ ಸರ್ಕಾರದ ಅನುಮತಿ ಕೊಟ್ಟಿದೆ.
ಮೈಸೂರಿನಿಂದ ವಿಮಾನ ಹಾರಾಟದ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ….
*ಸೋಮವಾರ ಮಧ್ಯಾಹ್ನ 4.30ಕ್ಕೆ ಬೆಂಗಳೂರಿನಿಂದ ಹೊರಟು ಸಂಜೆ 5.30ಕ್ಕೆ ಮೈಸೂರು….
*ಸಂಜೆ 6.15ಕ್ಕೆ ಮೈಸೂರಿನಿಂದ ಹೊರಟು ಸಂಜೆ 7.15ಕ್ಕೆ ಬೆಂಗಳೂರು
*ಮಂಗಳವಾರ ಮಧ್ಯಾಹ್ನ 3.30ಕ್ಕೆ ಬೆಂಗಳೂರಿನಿಂದ ಹೊರಡು ಮಧ್ಯಾಹ್ನ 4ಕ್ಕೆ ಮೈಸೂರು…
*ರಾತ್ರಿ 9.45ಕ್ಕೆ ಮೈಸೂರಿನಿಂದ ಹೊರಟು 10.45ಕ್ಕೆ ಬೆಂಗಳೂರು….