Breaking News

ಸಿಎಂಗೆ ಬುದ್ಧಿವಂತನ ಸಲಹೆ..!

ಮಲಗಿದ್ರೆ ಸಾವು.. ಕೂತಿದ್ರೆ ರೋಗ.. ನಡೀತಿದ್ರೆ ಜೀವನ..?!

SHARE......LIKE......COMMENT......

ಸ್ಯಾಂಡಲ್‌ವುಡ್:

ಕಿಲ್ಲರ್ ಕೊರೊನಾ ಅಟ್ಟಹಾಸಕ್ಕೆ ದೇಶವೇ ತತ್ತರಿಸಿ ಹೋಗಿದೆ. ಕೊರೊನಾ ನಿಯಂತ್ರಣಕ್ಕೆ ಪ್ರಧಾನಮಂತ್ರಿಗಳೇ ದೇಶವನ್ನ ಲಾಕ್ಡೌನ್ ಮಾಡಿ, ಮನೆಯಿಂದ ಯಾರು ಹೊರ ಬರಬೇಡಿ ಅಂತ ಮನವಿ ಮಾಡಿಕೊಂಡಿದ್ದಾರೆ. 21 ದಿನಗಳ ಲಾಕ್ಡೌನ್ ಅವಧಿ ಏಪ್ರಿಲ್ 14ಕ್ಕೆ ಮುಕ್ತಾಯವಾಗಲಿದೆ. ಆ ನಂತ್ರ ಲಾಕ್ಡೌನ್ ತೆರವುಗೊಳ್ಳುತ್ತಾ..? ಇಲ್ವಾ ಅನ್ನೋ ಚರ್ಚೆ ಜೋರಾಗಿದೆ. ಕಷ್ಟವಾದ್ರೂ ಲಾಕ್ಡೌನ್ ಮುಂದುವರಿಸಲೇಬೇಕಾದ ಅನಿವಾರ್ಯತೆ ಅಂತೂ ಎದುರಾಗಿದೆ.
ಉಪೇಂದ್ರ. ವಿಭಿನ್ನ ರೀತಿಯ ಸಿನಿಮಾಗಳ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ ನಿರ್ದೇಶಕ. ಹೀರೋ ಆಗಿಯೂ ಸಕ್ಸಸ್ ಕಂಡ ಬುದ್ಧಿವಂತ. ಸದ್ಯ ಉತ್ತಮ ಪ್ರಜಾಕೀಯ ಪಕ್ಷ ಕಟ್ಟಿ ರಾಜಕಾರಣಕ್ಕೂ ಧುಮುಕಿದ್ದಾರೆ. ವಿಭಿನ್ನ ಆಲೋಚನೆಗಳ ಮೂಲಕ ಜನ ಸೇವೆ ಮಾಡೋಕ್ಕೆ ತಯಾರಿ ನಡೆಸಿದ್ದಾರೆ. ಕೊರೊನಾ ಕ್ರೈಸಿಸ್ ನಡುವೆ ಲಾಕ್ ಡೌನ್ ಮುಂದುವರೆಸಬೇಕೋ ಬೇಡ್ವೋ ಅನ್ನೋದ್ರ ಬಗ್ಗೆ ಸಿಎಂಗೆ ಎರಡು ಸಲಹೆಗಳನ್ನ ಕೊಟ್ಟಿದ್ದಾರೆ.

1. ಶೇಕಡ ನೂರು ಲಾಕ್ ಡೌನ್… ಸಂಪೂರ್ಣ ಸರ್ಕಾರಿ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದ ಯೋಜನೆಯಿಂದ ಬಳಸಿಕೊಂಡು ಅಗತ್ಯ ವಸ್ತುಗಳನ್ನು ಮನೆ ಮನೆಗೆ ತಲುಪಿಸಿ.

2. ಜನರಿಗೇ ಜವಾಬ್ದಾರಿ ಕೊಟ್ಟು ಸಂಪೂರ್ಣವಾಗಿ ಲಾಕ್ ಡೌನ್ ತೆರೆಯಿರಿ. ಅಂದರೆ ಅವರವರೇ ಜವಾಬ್ದಾರಿ ತೆಗೆದುಕೊಂಡು ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಅವರವರ ವ್ಯವಹಾರ ಮುಂದುವರಿಸುವುದು.

ಇಷ್ಟೆಲ್ಲಾ ಲಾಕ್ ಡೌನ್ ಮಾಡೀನೇ ನಮ್ ಜನರು ಹೀಗೆ, ಇನ್ನು ಲಾಕ್ಡೌನ್ ತೆಗೆದ್ರೆ ರೋಡ್ ರೋಡಲ್ಲಿ ಹೆಣಗಳು ಬೀಳುತ್ತೆ ಅಂತ ಹೇಳೊರಿಗೆ ಒಂದು ಕಿವಿಮಾತು. ಹೀಗೇ ಲಾಕ್ಡೌನ್ ಮುಂದುವರಿಸಿದರೂ ಅದೇ ಪರೀಸ್ಥಿತಿ ಬರಬಹುದು ಯೋಚನೆ ಮಾಡಿ.

ರಿಯಲ್ ಸ್ಟಾರ್ ಉಪೇಂದ್ರ ಸೋಷಿಯಲ್ ಮೀಡಿಯಾ ಮೂಲಕ ಈ ರೀತಿ ಮುಖ್ಯಮಂತ್ರಿಗಳಿಗೆ ಎರಡು ಸಲಹೆಗಳನ್ನ ಕೊಟ್ಟಿದ್ದಾರೆ. ಉಪೇಂದ್ರ ಅವರ ಸಲಹೆಗಳ ಬಗ್ಗೆ ಕಾಮೆಂಟ್ ಬಾಕ್ಸ್ನಲ್ಲಿ ಪರ- ವಿರೋಧ ಚರ್ಚೆ ಜೋರಾಗಿ ನಡೀತಿದೆ.

ಲಾಕ್ ಡೌನ್ ನಿಯಮಗಳನ್ನ ಸಂಪೂರ್ಣವಾಗಿ ಪಾಲನೆ ಮಾಡ್ತಿರೋ ಉಪೇಂದ್ರ, ಕೃಷಿ ಚಟುವಟಿಕೆಗಳಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮದೇ ರುಪ್ಪೀಸ್ ರೆಸಾರ್ಟ್ ಪಕ್ಕದಲ್ಲಿರೋ ಜಾಗದಲ್ಲಿ ಸ್ನೇಹಿತರ ಜೊತೆ ಸೇರಿ ಸಾವಯವ ಕೃಷಿಯಲ್ಲಿ ಮಗ್ನರಾಗಿದ್ದಾರೆ. ಟೊಮೆಟೋ, ಬಾಳೆ ಸೇರಿದಂತೆ ಬಗೆಬಗೆಯ ಹಣ್ಣು- ತರಕಾರಿ ಗಿಡಗಳನ್ನ ನಾಟಿ ಮಾಡ್ತಿದ್ದಾರೆ. ವೈಜ್ಞಾನಿಕವಾಗಿ ಕಡಿಮೆ ನೀರು ಬಳಸಿ, ರಾಸಾಯನಿಕ ಗೊಬ್ಬರ ಬಳಸದೇ ಹೇಗೆ ವ್ಯವಸಾಯ ಮಾಡಬಹುದು ಅನ್ನೋದನ್ನ ನುರಿತ ತಜ್ಞರಿಂದ ಕೇಳಿ ತಿಳಿದು, ವ್ಯವಸಾಯಕ್ಕೆ ಕೈಹಾಕಿದ್ದಾರೆ. ಕೈ ಕೆಸರಾದರೆ ಬಾಯಿ ಮೊಸರು ಅನ್ನೋ ಸಂದೇಶವನ್ನ ಸಾರುತ್ತಿದ್ದಾರೆ. ಲಾಕ್ಡೌನ್ ಬಗ್ಗೆ ಸಲಹೆಗಳನ್ನ ನೀಡೋದ್ರ ಜೊತೆಗೆ ಕೊರೊನಾಗೆ ಹೆದರಿ ಮನೆಯಲ್ಲಿ ಕೂರದೇ ರೈತನಾಗಿ ಉಪೇಂದ್ರ ಎಲ್ಲರಲ್ಲೂ ಉತ್ಸಾಹ ತುಂಬುತ್ತಿದ್ದಾರೆ……