Breaking News

ಲಾಕ್‌ಡೌನ್‌ನಿಂದಲೇ ಮನೆಯಲ್ಲಿ ಗಂಡ, ಹೆಂಡತಿ ಮಧ್ಯೆ ಜಗಳ..!

ವನಿತಾ ಸಹಾಯವಾಣಿಗೆ ಕರೆ ಮಾಡಿ ಪತಿ ವಿರುದ್ಧ ದೂರು....

SHARE......LIKE......COMMENT......

ಬೆಂಗಳೂರು:

ಮಹಾಮಾರಿ ಕೊರೋನಾ ವೈರಸ್‌ ದೇಶದಿಂದ ಹೊಡೆದೋಡಿಸಲು ಜನರು ಯಾರೂ ಮನೆಯಿಂದ ಬರಬಾರದು ಎಂಬ ಉದ್ದೇಶದಿಂದ ಲಾಕ್‌ಡೌನ್‌ ಹೇರಲಾಗಿದೆ. ಆದರೆ, ಈ ಲಾಕ್‌ಡೌನ್‌ನಿಂದಲೇ ಮನೆಯಲ್ಲಿರುವ ಗಂಡ, ಹೆಂಡತಿ ಮಧ್ಯೆ ಜಗಳ ಹೆಚ್ಚಾಗಿವೆ ಎಂಬ ವರದಿಯೊಂದು ಬಂದಿದೆ. ಲಾಕ್‌ಡೌನ್‌ ಮಾಡಿದ್ದರಿಂದ ಪತಿ, ಪತ್ನಿಯ ಮಧ್ಯೆ ಜಗಳ ಸಂಬಂಧಿತ ಕರೆಗಳು ವನಿತಾ ಸಹಾಯವಾಣಿಗೆ ಬರುತ್ತಿವೆಯಂತೆ. ಸಹಾಯವಾಣಿ ಕೇಂದ್ರದ ಸಿಬ್ಬಂದಿ ಪ್ರತಿ ದಿನ 30 ಕ್ಕೂ ಹೆಚ್ಚು ಗಂಡ, ಹೆಂಡಿರ ಮಧ್ಯೆ ಜಗಳದ ಸಂಬಂಧಿತ ಕರೆಗಳನ್ನೇ ಸ್ವೀಕರಿಸುತ್ತಿದ್ದಾರಂತೆ. ಲಾಕ್‌ಡೌನ್‌ ಮಾಡಿದ್ದರಿಂದ ಅಪರಾಧ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ. ಆದರೆ ಕೌಟುಂಬಿಕ ಕಲಹಗಳೂ ಮಾತ್ರ ಹೆಚ್ಚಳವಾಗಿದೆ. ದಿನ ನಿತ್ಯ ವನಿತಾ ಸಹಾಯವಾಣಿಗೆ ಕರೆ ಮಾಡಿ ಗೃಹಿಣಿಯರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಕರೆ ಮಾಡುವ ಪತಿ ಪತ್ನಿಯರಿಗೆ ವನಿತಾ ಸಹಾಯವಾಣಿ ಸಿಬ್ಬಂದಿ ಸಲಹೆ ನೀಡುತ್ತಿದ್ದಾರೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಾಪ್ಟ್‌ವೇರ್ ಕಂಪನಿಗಳೆಲ್ಲ ಸಿಬ್ಬಂದಿಗೆ ವರ್ಕ್ ಫ್ರಾಂ ಹೋಂಗೆ ಅವಕಾಶ ಮಾಡಿ ಕೊಟ್ಟಿವೆ. ಇದರಿಂದ ದಿನವಿಡೀ ಮನೆಯಲ್ಲಿರುವ ಗಂಡ, ಹೆಂಡಿರ ಮಧ್ಯೆ ಜಗಳ ನಡೆಯುತ್ತಿವೆ. ಮನೆಯಲ್ಲೆ ಕುಳಿತು ಕೆಲಸ ಮಾಡುತ್ತಿರುವ ಗೃಹಿಣಿಯರಿಂದಲೇ ಹೆಚ್ಚು ದೂರುಗಳು ಕೇಳಿ ಬರುತ್ತಿವೆ. ಸಾಫ್ಟ್‌ವೇರ್ ಉದ್ಯೋಗಿಗಳು ವನಿತಾ ಸಹಾಯವಾಣಿಗೆ ಕರೆ ಮಾಡಿ ಪತಿ ವಿರುದ್ಧ ದೂರು ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ……